ಮುಕುಂದ ಮುರಾರಿಯ ಜೋಡಿ ” ಕಬ್ಜಾ “ ಸಿನಿಮಾದಲ್ಲಿ ಮತ್ತೆ ಒಂದಾಗಿದ್ದು, ಸಿನಿಮಾ ತಂಡ ಇಂದು ಬೆಳ್ಳಂಬೆಳಗ್ಗೆ ಅಭಿಮಾನಿಗಳಿಗೆ ಖುಷಿ ನೀಡುವ ಕೆಲಸ ಮಾಡಿದೆ.
ರಿಯಲ್ ಸ್ಟಾರ್ ಉಪೇಂದ್ರ ಮತ್ತು ಕಿಚ್ಚಾ ಸುದೀಪ ಇರುವಂತ ಪೋಸ್ಟರ್ ಬಿಡುಗಡೆ ಮಾಡಿದೇ.
ದೇಶವನ್ನು ನಡುಗಿಸಿದ ಭೂಗತ ಜಗತ್ತಿನ ಕಥೆಯನ್ನ ಎಳೆ ಎಳೆಯಾಗಿ ಬಿಚ್ಚಿಡುವ ಪ್ರಯತ್ನದಲ್ಲಿ ಸಿನಿಮಾ ನಿರ್ದೇಶಕ ಆರ್. ಆರ್ ಚಂದ್ರು ಸಿದ್ಧರಿದ್ದಾರೆ.
ಸಿನಿಮಾದಲ್ಲಿ ಸುದೀಪ್ ಪೊಲೀಸ್ ಪಾತ್ರದಲ್ಲಿ, ಭಾರ್ಗವ ಬಾಕ್ಷಿ ಅನ್ನೋ ಹೆಸರಲ್ಲಿ ತೆರೆ ಮೇಲೆ ಕಾಣಿಸಲಿದ್ದು ಉಪ್ಪಿ ಪಕ್ಕಾ ಡಾನ್ ರೋಲ್ ನಲ್ಲಿ ಮೀನುಗಲಿದ್ದಾರೆ.
ಚಿತ್ರಕ್ಕೆ ರವಿ ಬಸ್ರುರ್ ಸಂಗೀತವಿದ್ದು ಕೆಲವೊಂದು ಆಧುನಿಕ ತಂತ್ರಜ್ನ್ಯಾನ ಬಳಸಿ ಹೊಸ ಬಗೆಯ ಅನುಭವ ನೀಡುವುದಂತು ಸತ್ಯ.
ಈ ಸಿನಿಮಾದ ಕುರಿತಂತೆ ಮತ್ತೊಂದು ವಿಷಯವೆಂದ್ರೆ, ಒಟ್ಟು 8 ಭಾಷೆಗಳಲ್ಲಿ ಏಕಕಾಲಕ್ಕೆ ಚಿತ್ರವು ಹಿರಬರಲಿದೆ.