ಪುನೀತ್ ರಾಜಕುಮಾರವರ ಕೊನೆಯ ಚಿತ್ರ ಜೇಮ್ಸ್ ಚಿತ್ರದ ನಿರ್ಮಾಪಕ ಕಿಶೋರ್ ಪತ್ತಿ ಕೊಂಡರವರು ಆಸ್ಪತ್ರೆ ಸೇರಿದ್ದಾರೆ. ಪ್ರಜ್ಞಾ ಹೀನ ಸ್ಥಿತಿ ಯಲ್ಲಿರುವಾಗ ಅವರನ್ನು ಶೇಷಾದ್ರಿ ಪುರಂನಲ್ಲಿರುವ ಅಪೊಲ್ಲೋ ಆಸ್ಪತ್ರೆಗೆ ಸೇರಿಸಿದ್ದಾರೆ. ಅವರಿಗೆ 40 ವರ್ಷ ವಯಸ್ಸಾಗಿತ್ತು. ಹೈ ಬಿಪಿ ಜಾಸ್ತಿಯಾಗಿ ಬ್ರೈನ್ ಸ್ಟ್ರೋಕ್ ಆಗಿದೆ. ಅವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸಿ ಅವರಿಗೆ ಚಿಕಿಸ್ಥೆಯನ್ನು ಕೊಡಿಸಲಾಗಿದೆ. ವೈದ್ಯರು ಆಪರೇಷನ್ ಮಾಡಿ, ಅವರನ್ನು ಸದ್ಯ ವೆಂಟಿಲೇಟರ್ ಸಹಾಯದಿಂದ ಐ ಸಿ ಯು ನಲ್ಲಿ ಇಟ್ಟಿದ್ದಾರೆ.
ಕಿಶೋರ್ ಪತ್ತಿಕೊಂದರವರು ಮೂಲತಃ ಹೊಸಪೇಟೆ ಯವರು, ಹೊಸಪೇಟೆಯಲ್ಲಿ ಒಂದು ಚಿತ್ರಮಂದಿರವನ್ನು ಹೊಂದಿದ್ದಾರೆ. ಪುನೀತ್ ರವರ ಚಿತ್ರ ಮಾಡಬೇಕೆಂಬ ಆಸೆಯಿಂದ, ಅವರ ಕಾಲ್ ಶೀಟ್ ಗಾಗಿ ಎಷ್ಟೋ ವರ್ಷ ಕಾದಿದ್ದು ನಂತರ ಜೇಮ್ಸ್ ಚಿತ್ರದಲ್ಲಿ ಅವರ ಆಸೆ ಈಡೇರಿತು. ಆ ಚಿತ್ರ ತೆರೆಗೆ ಮಾರುವ ಮುನ್ನ ಪುನೀತ್ ರಾಜಕುಮಾರ್ ಹೃದಯಾಘಾತದಿಂದ ಅಸುನೀಗಿದ್ದರು ಎಂಬುದನ್ನು ನಾವು ಸ್ಮರಿಸಬಹುದು.
ಪುನೀತ್ ನಿಧನದ ನಂತರ ಆ ಚಿತ್ರಕ್ಕೆ ಶಿವಣ್ಣನವರು ಪುನೀತ್ ಗೆ ಧ್ವನಿಯಾಗಿದ್ದರು. ಈಗ ಆಸ್ಪತ್ರೆ ಸೇರಿರುವ ಕಿಶೋರ್ ಪತ್ತಿ ಕೊಂಡಾರವರು ಆದಷ್ಟು ಬೇಗ ಚೇತರಿಸಿಕೊಂಡು ಇನ್ನಷ್ಟು ಚಿತ್ರ ನಿರ್ಮಾಣ ಮಾಡಲಿ ಎಂದು ಚಿತ್ರೋದ್ಯಮ.ಕಾಂ ಆರೈಸುತ್ತದೆ.