ಎರಡೂ ನಿಮಿಷದ ಈ ಟ್ರೈಲರ್ ಒಂದು ರೀತಿಯ ದೃಶ್ಯ ಕಾವ್ಯವೇ ಅನ್ನಬಹುದು, ಚಿತ್ರದ ನಾಯಕ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಪ್ರಮುಖ ಪಾತ್ರಗಳ ಪರಿಚಯವಾಗಿದ್ದು, ಭಾವ ಭರಿತ ಸಿನ್ನಿವೇಶಗಳ ತುಣುಕು ಕಾಣಬಹುದು ಹಳೆಯ ಗ್ರೀಕ್ ಸನಿಮಾದ ವೈಭೋಗ ಕನ್ನಡ ಪರದೆಯಮೇಲೆ ರಾರಾಜಿಸಲಿದೆ. ಅಸಹಾಯಕರನ್ನ ಭಂದಿಸಿ ಅವರ ನೋವು ಸಾವುಗಳನ್ನ ಸಂಭ್ರಮಿಸುವ ಧೂರ್ತ ದುರುಳ ಕ್ಷುದ್ರರ ತಂಡ ಒಂದೆಡೆಯಾದರೆ ಅವರಿಗೆ ತಕ್ಕ ಶಾಸ್ತಿ ಮಾಡಿಸಿ ಮಣ್ಣು ಮುಕ್ಕಿಸುವ ದೈವ ಶಕ್ತಿ ಮತ್ತೊಂದೆಡೆ, ಒಂದು ರೀತಿಯಾದ ದೈವಾಸುರರ ಯುದ್ಧವೇ ಹೌದು…. ಅರ್ಜುನ್ ಜನ್ಯಾರ ಹಿನ್ನಲೆ ಸಂಗೀತ ಚಿತ್ರಕ್ಕೆ ಅವಶ್ಯವಿರುವ ಭೀಭತ್ಸ ಭಕ್ತಿ ಎರಡನ್ನು ತಂದಿದ್ದು ಛಾಯಾಗ್ರಹಕ ಸ್ವಾಮಿ ಅವರ ಕ್ರಿಯಾಶೀಲತೆ ಚುರುಕಾಗಿದೆ. ಒಟ್ನಲ್ಲಿ ನಿರ್ದೇಶಕ ಹರ್ಷ ಈ ಬಾರಿಯೂ ಒಂದು ಸತ್ವ ಭರಿತ ಮನೋರಂಜನೆ ನೀಡೋದು ಗ್ಯಾರಂಟಿ…. ಜೈ ಭಜರಂಗೀ
ಭಜರಂಗಿ 2 ಟ್ರೈಲರ್ youtube ನಲ್ಲಿದೆ ನೋಡಿ