ಮನೋರಂಜನೆಯ ಕೇಂದ್ರ ಬಿಂದುವಾಗಿರುವ ರಾಬರ್ಟ್ ಸಿನಿಮಾವನ್ನ ವೀಕ್ಷಿಸಿ ಬೆರಗಾಗಿರುವ ಜನರ ಸಂಖ್ಯೆ ಲಕ್ಷಕ್ಕೂ ಅಧಿವಾಕಿಗಿದೆ. D-ಬಾಸ್ ಅವರ ಅಭಿಮಾಣಿಗಳನ್ನ ಪ್ರೀತಿಯಿಂದ ” ಸೆಲೆಬ್ರಿಟಿಗಳು” ಅಂತ ಕರೀತಾರೆ, ಅಭಿಮಾನದ ಸೆಲೆಬ್ರಿಟಿಗಳಿಗೆ ಸಿನಿಮಾ ಬಹಳ ಹಿಡಿಸಿದ್ದು ಪದೇ ಪದೇ ನೋಡಿ ಅದನ್ನ ಕೊಂಡಾಡಲು ಶುರುಮಾಡಿದ್ದಾರೆ.ಚಾಲೆಂಜಿಂಗ್ ಸ್ಟಾರ್ ದರ್ಶನ್ ಪರದೆಯ ಮೇಲೆ ಬಂದರೆ ಸಾಕು ಮನಸೂರೆಗೊಳ್ಳುವ ಜನ ಈ ಬಾರಿ ಸಿನಿಮಾದ ಕಥೆ, ತಯಾರಿಕೆಗೂ ಚಪ್ಪಾಳೆ ತಟ್ಟಿದ್ದಾರೆ. ನೆಚ್ಚಿನ ನಾಯಕನ ಸಿನಿಮಾ 2 ವರ್ಷದ ಬಳಿಕ ಬಿಡುಗಡೆಗೆಯಾದ ಕಾರಣ,ಅವರನ್ನ ಕಣ್ತುಂಬಿಸಿಕೊಳ್ಳಲು ಮೊದಲ ದಿನವೇ ಎರಡರಿಂದ ಮೂರು ಬಾರಿ ಸಿನಿಮಾನ ನೋಡಿದ್ದಾರೆ.ಎಲ್ಲಾ ಚಿತ್ರಮಂದಿರಗಳಲ್ಲೂ ಅಭಿಮಾನದ ಜಾತ್ರೆ ಭರದಿಂದ ಸಾಗಿತ್ತು. ಇಂದಿನದ ಸಾಮಾನ್ಯ ಪ್ರೇಕ್ಷಕನ ಸರದಿ, ಮೊದಲ ದಿನದ ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಭಾರಿ ಮೊತ್ತ ಸಂಪಾದಿಸಿ ಈ ಹಿಂದೆಯಿದ್ದ ಎಲ್ಕಾ ಧಾಖಲೆಗಳನ್ನ ಅಳಿಸಿ ಹೊಸದಾಗಿ ರುಜುಮಾಡಿ ಜಯದ ಹೆಬ್ಬಾಗಿಲಿನೊಳಗೆ ದಾಪುಗಾಲು ಹಾಕ್ಕುತ್ತ ಸಾಗಿದ್ದಾನೆ ಭೂಪತಿ “ರಾಬರ್ಟ್“…
“ಆನೆ ನಡೆದಿದ್ದೆ ದಾರಿ”, ಮುಂದಿನ ದಿನಗಳಲ್ಲಿ ಈ ಸಿನಿಮಾ ಇನ್ನು ಹೆಚ್ಚು ಹೊಸಾ ಪ್ರೇಕ್ಷಕರನ್ನ ತನ್ನತ್ತ ಸೆಳೆಯುವಲ್ಲಿ ಯಾವುದೇ ಅನುಮಾನವಿಲ್ಲದ ಕಾರಣ ಅತಿ ದೊಡ್ಡ ಮೊತ್ತ ನಿಮಾಪಕರ ಪಾಲಗಲಿದೆ.
ರಾಬರ್ಟ್ ಸಿನಿಮಾಗೆ ಸಿಕ್ಕ ಅದ್ಭುತ ಪ್ರತಿಕ್ರಿಯೆಯನ್ನ ಕಂಡು ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಟ್ವಿಟ್ಟರ್ ಮೊಲಕ್ ಸಂತಸವನ್ನ ವ್ಯಕ್ತಪಡಿಸಿದ್ದಾರೆ.