ಗಾಯನ ಕ್ಷೇತ್ರದಲ್ಲಿ ತಮ್ಮದೇ ಆದ ವಿಶಿಷ್ಟ ಗಾನಸುಧೆ ಹರಿಸುತ್ತಾ , “ಸ್ಲಂ ಡಾಗ್ ಮಿಲೇನಿಯರ್” ಚಿತ್ರದ “ಜೈ ಹೋ “ಹಾಡಿಗೆ ಆಸ್ಕರ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡ ಪ್ರಪಂಚದಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಮೈಸೂರಿನವರೇ ಆದ ಎನಜಿ೯ ಬೂಸ್ಟರ್, ಕವಿತೆ ಮಾಸ್ಟರ್, ಗಾಯನದ ಟ್ರಿಕ್ಕರ್ ನಮ್ಮ ಕರುನಾಡಿನ ಯಶಸ್ವಿ ಗಾಯಕರು ಶ್ರೀ. ವಿಜಯ್ ಪ್ರಕಾಶ್ .
ಇವರ ಹೆಸರಿನಲ್ಲಿ “ವಿಜಯ“ವಿದೆ ಮತ್ತು “ಪ್ರಕಾಶ“ವಿದೆ ಯಾವುದೇ ಕೆಲಸದಲ್ಲಿ ವಿಜಯವನ್ನು ಕಾಣುತ್ತಾರೆ ಮತ್ತು ಅವರಿರೋಕಡೆ ಸದಾ ಬೆಳಕೂ ಕೂಡ ಇರುತ್ತದೆ.
ಇವರು ಹಲವಾರು ಸಂಗೀತ ನಿರ್ದೇಶಕರ ಜೊತೆ ಕೆಲಸ ಮಾಡಿದ್ದಾರೆ, ಅಜು೯ನ್ ಜನ್ಯ, ವಿ. ಹರಿಕೃಷ್ಣ, ಅಜನೀಶ್ ಲೋಕನಾಥ್, ರವಿ ಬಸ್ರೂರು, ಗುರುಕಿರಣ್ ಮುಂತಾದವರು.
ಇವರು ಹಾಡಿರುವ ವಿವಿಧ ಗೀತೆಗಳು ಜನರ ಹೃದಯವನ್ನು ಗೆದ್ದಿದೆ, ಸಂಗೀತ ಕುಟುಂಬದಿಂದ ಬಂದ ಇವರು ಬಹಳ ಕಷ್ಟ ಪಟ್ಟು ಗಾಯನ ಪಟ್ಪ ಏರಿದ್ದಾರೆ, ಅವರು ನಡೆದುಬಂದ ದಾರಿ ಖಾಸಗಿ ವಾಹಿನಿಯಲ್ಲಿ ತಿಳಿಸಿದ್ದಾರೆ. ಈ ಸುದಿನ ಅವರು ಹಾಡಿರುವ ಗೀತೆಗಳ ಸಾಲುಗಳು ಅವರಿಗೆ ಸಾಲುಗಳ ಮೂಲಕ ಗೌರವ ಸಲ್ಲಿಸೋಣ
“ಒಂದಾನೊಂದು ಊರಲಿ
ಒಬ್ಬ ರಾಜನಿದ್ದನು
ಊರ ಮನೆ ಮನೆಯು
ಬೆಳಕಾಗೆ ಇದ್ದನು
ಜನಕಾಗೆ ಕನಸಕೋಟೆ ಕಟ್ಟಿದ
ನಂಬಿ ಬಂದ ಜನಕೆ
ಯುವರಾಜ ನೀನು ರಾಜವಂಶದವನು
ಜನರೇ ಮೆಚ್ಚಿದ ಬಂಗಾರದ ಮನುಷ್ಯ “
“ಬೆಳಗೆದ್ದು ಯಾರ ಮುಖವ ನಾನು ನೋಡಿದೆ
ಅಂದಾನೊ ಅದೃಷ್ಟಾನೊ ಮುಂದೆ ಕುಂತಿದೆ
ನಿನ್ನೆ ಕಂಡ ಕನಸು ಬ್ಲಾಕ್ ಆಂಡ್ ವೈಟು
ಇಂದು ಬಣ್ಣವಾಗಿದೆ
ನಿನ್ನ ಮೇಲೆ ಕವನ ಬರೆಯೊ ಗಮನ
ಇಂದು ಮೌನವಾಗಿದೆ
ಕನಸಲ್ಲಿ ಅರೆರೆರೆರೆ…
ಬಳಿಬಂದು ಅರೆರೆರೆರೆ…
ಮುದ್ದಾಡಿ ಅಯ್ಯಯ್ಯಯ್ಯೋ
ಕಚಗುಳಿ ತಾಳತಾರೆ “ಬೆಳಗೆದ್ದು “
“ಬಂದಾನೋ ಬಂದಾನೋ ಸಾಹುಕಾರ
ಪ್ರೀತಿಲೂ ನೋವಲ್ಲೂ ಪಾಲುಧಾರ
ಸಾಹುಕಾರಾ.. ಸಾಹುಕಾರಾ… “
“ಯಾರೇ ಬಂದರೂ ಎದುಯಾ೯ರೆ ನಿಂತರೂ
ಪ್ರೀತಿ ಹಂಚುವ ಯಜಮಾನ”
“ಏಳುವರೆಗೆ ತುಟಿ ಒಣಗುತ್ತೆ
ಏನೂ ಮಾಡಣಾ
ಹಾಳು ಎಣ್ಣೆ ಚಟ ಬಿಡಬೇಕು
ಕಮ್ಮಿ ಕುಡಿಯೋಣ
ಎಣ್ಣೆ ಬಿಡೋದಕ್ಕೆ ಇಟ್ಟಿರುವ ಪಾಟಿ೯ಯಿದು
ಬನ್ನಿ ಎಣ್ಣೆ ಕುಡಿಯೋಣಾ
ಫ್ರೆಂಡ್ಸೆಲ್ಲ ಕೈಹಾಗಿ ಜೋಡಿಸ್ರಿ
ಓಪನ್ ದ ಬಾಟಲ್… ಟಲ್.. ಟಲ್.. ಟಲ್ ‘
“ಫುಲ್ ಬಾಟ್ಲು ವಿಸ್ಕಿ ಈಗ ಕುಡ್ದಂಗಾಗದೇ
ಆಕಾಶ ಕೈಗೆ ಬಾಯ್ಗೆ ಸಿಕ್ದಂಗಾಗದೇ
ಮಂಡ್ಯದ ಗೌಡ್ರು ನಡಿಗೆ ಝೂಮಲ್ಲಿದೇ
ವಯಸಾದ್ರೂ ನೋಡೋ ನೋಟ ರಾಕೆಟ್ನಲ್ಲಿದೆ
ನಂಗೆ ಈಗಾ ನಾಟಿ ಕೋಳಿ ಮುದ್ದೆ ಸಾರು
ಉಂಡಂಗಾಗದೆ “ಹೇ ಜಲೀಲ ಕನ್ವರ್ ಲಾಲ”
“ಸಾದ ಸೀದಾ ಗಂಡು ಹೈದ
ನಿನ್ನ ನೋಡಿ ಬೆಂಡು ಆದಾ
ನನ್ನ ದೊರೆಸಾಸಿ ದೊರೆಸಾನಿ
ನೀನೇನೇ “
“ಇವ್ಳಿಂದ ಇವ್ಳಿಂದ ಅಯ್ಯೊ ಇವ್ಳಿಂದ
ಬಚ್ಚನ್ನೇ ಕಳ್ದಹೋದ
ಕಣ್ಣಿಂದ ಕಣ್ಣಿಂದ ಇವಳ ಕಣ್ಣಿಂದ
ಬಿಗ್ ಬಾಸ್ ಮರುಳಾದ
ಓರೆ ಕಣ್ಣಲ್ಲೆ ಕಣ್ಣು ಹೊಡೆದಳು
ಕಿಚ್ಚನೆದೆಯಲಿ ಕಣ್ಣ ಕೊರೆದಳು
ಗೊಡೌನ್ ಗೆ ಹಚ್ದಂಗಾಯ್ತು ಬೆಂಕೀ
ಹೌದು ಸ್ವಾಮಿ ಮಾಮು ಮಾಮು “
“ಕವಿತೆ ಕವಿತೆ ನೀನೇಕೆ ಪದಗಳಲಿ ಕುಳಿತೇ
ಕವಿತೆ ಕವಿತೆ ನೀನೇಕೆ ರಾಗದಲಿ ಬೆರೆತೇ
ನನ್ನೆದೆಯ ಗೂಡಲ್ಲಿ ಕವಿತೆಗಳ ಸಂತೆ
ಓ ಒಲವೇ ನೀ ತಂದ ರಾಗಕೆ ಸೋತೆ
ಕವಿತೆ ಕವಿತೆ ನೀನೇಕೆ ಪದಗಳಲಿ ಕುಳಿತೇ
ಕವಿತೆ ಕವಿತೆ ನೀನೇಕೆ ರಾಗದಲಿ ಬೆರೆತೇ “
“ಓಂ ಶಿವೋಹಂ ಓಂ ಶಿವೋಹಂ
ರುದ್ರನಾಮಂ ಭಜೇಹಂ “
ಇನ್ನೂ ಹಲವಾರು ಹಾಡುಗಳು ಹಾಡಿದ್ದಾರೆ, ನಮ್ಮ ಮನಸಲ್ಲಿ ನೆಲೆಸೋ ಸದಾ ಗುನುಗೋ ಮರೆಯಲಾಗದ ಹಾಡು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಟನೆಯ “ರಾಜಕುಮಾರ ” ಚಿತ್ರದ “ಬೊಂಬೆಹೇಳುತೈತೆ ” ಗೀತೆ. ನಿಜಕ್ಕೂ ಈ ಗೀತೆ ಭಾವ ತುಂಬಿ ಹಾಡಿದ್ದಾರೆ, ಮೊದಲು ಜೀ ವಾಹಿನಿಯ ಗಾಯನ ಸ್ಪಧಿ೯ಯಾಗಿ ಬಂದವರು ತಮ್ಮ ಸತತ ಪರಿಶ್ರಮದ ಫಲವಾಗಿ ನಂತರ ನಮ್ಮ ಜೀ ಕನ್ನಡದ “ಸರಿಗಮಪ ” ಸರಣಿಯ ಮುಖ್ಯ ತೀಪು೯ಗಾರರಾಗಿ ಹಲಾವಾರು ಹೊಸಬರ ಸ್ಪಧಿ೯ಗಳಿಗೆ ತಮ್ಮ ಸಂಗೀತ ಮತ್ತು ಗಾಯನದ ಅನುಭವ ಹಾಗೂ ಸವಹೆಗಳನ್ನು ನೀಡುತ್ತಿದ್ದಾರೆ, ಇವರು ಕನ್ನಡ ಭಾಷೆಯಲ್ಲದೆ ತಮಿಳು, ತೆಲುಗು, ಹಿಂದಿ, ಮರಾಠಿ ಭಾಷೆಯಲ್ಲಿ ತಮ್ಮ ಗಾಯನದಿಂದ ಹೆಸರಾಗಿದ್ದಾರೆ, ಹಲವಾರು ಖಾಸಗಿ ಸಂಸ್ಥೆಗಳು ನಡೆಸುವ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.
ಇವರ ಗಾಯನ ಪಯಣ ಹೀಗೆ ಮುಂದುವರಿಯಲಿ 🙏