“ಜೋಗಿ” ಚಿತ್ರ ಸಂಭ್ರಮ @ 15

ಕನ್ನಡ ಚಿತ್ರರಂಗದಲ್ಲಿ ಡಾ ಶಿವರಾಜ್ ಕುಮಾರ್ ರವರ ದಾಖಲೆ ಮಾಡಿದ ಚಿತ್ರಗಳು ಪಟ್ಟಿಯ ಹಾಗೆ ಬೆಳೆಯುತ್ತದೆ, ಇತ್ತೀಚೆಗೆ “ಓಂ” ಚಿತ್ರ 25 ವಷ೯ದ ಸಂಭ್ರಮ ಎಲ್ಲರೂ ತಮಗಿದ್ದ ಅಭಿಮಾನವನ್ನು ವ್ಯಕ್ತ ಪಡಿಸಿದರು.


ಹೀಗೆ ಮತ್ತೊಂದು ಐತಿಹಾಸಿಕ ಬರೆದ ಚಿತ್ರ “ಪ್ರೇಮ್ ” ನಿದೇ೯ಶನದ “ಜೋಗಿ ” ಚಿತ್ರ ಬಿಡುಗಡೆಯಾಗಿ ಇಂದಿಗೆ 15 ವಷ೯ಗಳು. ಈ ಸಂದರ್ಭದಲ್ಲಿ ನಿಜಕ್ಕೂ ನಾನು ನನಗೆ ತಿಳಿದ ಲೇಖನ ಬರೆಯಲು ತುಂಬಾ ಪುಣ್ಯ ಮಾಡಿರುವೆ, ನಿಮ್ಮ ಜೊತೆ ಹಂಚಿಕೊಳ್ಳಲು ಉತ್ಸುಕನಾಗಿರುವೆ, ಬನ್ನಿ ಓದಿ ನೋಡಿ ನಿಮ್ಮ ಅನಿಸಿಕೆ ತಿಳಿಸಿ…. 

“ಜೋಗಿ ಜೋಗಿ ಜೋಗಿ ಜೋಗಿ ಜೋಗಿ ಜೋಗಿ ಜೋಗಿ ಜೋಗಿ” ಎಲ್ಲೆಲ್ಲೂ ನೋಡಿದರೂ ಜೋಗಿದೇ ಹವಾ…..”ಮಾನವರ ಜೀವತವೆ ಬೇಡುವುದೆ ಕಾಯಕವೆ ಕೈತುಂಬ ಇದ್ದೋನೆ ಯೋಗಿ ಕಡೆವರೆಗು ಬೇಡೋನೆ ಜೋಗೀ ಕಡೆವರೆಗು ಬೇಡೋನೆ ಜೋಗೀ… 


ಇಂದಿಗೆ ಜೋಗಿ ಚಿತ್ರ ಬಿಡುಗಡೆಯಾಗಿ 15 ವಷ೯ಗಳು. ಕನ್ನಡ ಚಿತ್ರರಂಗದಲ್ಲಿ ನೂತನ ದಾಖಲೆ ಬರೆದ ಬಹು ತಾರಾಗಣದ ತಾಯಿ ಮತ್ತು ಮಗನ ಸಂಬಂಧವನ್ನು ಬಿಂಬಿಸುವ ಹಾಗೂ ಒಬ್ಬ ಅಮಾಯಕ ಹುಡುಗ ತನ್ನ ಜೀವನದಲ್ಲಿ ಬದುಕುವ ಸಲುವಾಗಿ ಹಳ್ಳಿಯಿಂದ ಬೆಂಗಳೂರಿಗೆ ಬಂದು ಪರಿಸ್ಥಿತಿ ಬದಲಾಗಿ ದೊಡ್ಡ ರೌಡಿಯಾಗಿ ತನ್ನ ತಾಯಿಗೋಸ್ಕರ ಚಿನ್ನದ ಬಳೆ ತೊಡಿಸೋಕೆ ಪಡುವ ಪಾಡು ಅಷ್ಟಿಷ್ಟಲ್ಲ ಕೊನೆಗೂ ತನ್ನ ತಾಯಿಯ ಮುಖವನ್ನು ನೋಡೋಕಾಗದೆ ಒದ್ದಾಡುತ್ತಾ ತನ್ನ ತಾಯಿಯ ಧ್ಯಾನದಲ್ಲಿ ಮುಳುಗುವ ಚಿತ್ರವೇ ಜೋಗಿ. 


ಈ ಚಿತ್ರವನ್ನು ನಮ್ಮೆಲ್ಲರ “ಆರಾಧ್ಯ ದೈವರು ಶಿವಣ್ಣ ರಜಿನಿಕಾಂತ್ ರೆಬಲ್ ಸ್ಟಾರ್ ಅಂಬರೀಶ್ ” ಪ್ರೇಮ್ ರವರು ಎಲ್ಲರೂ ಒಟ್ಟಾಗಿ ನೋಡಿ ತಮ್ಮ ತಮ್ಮ ಅನಿಸಿಕೆ ತಿಳಿಸಿದ್ದರೆ ನಮ್ಮ ಶಿವಣ್ಣರವರು ಅತ್ತಿದ್ದು ಉಂಟು ನಮ್ಮ ಅಣ್ಣಾವ್ರು ಕೂಡ ಚಿತ್ರ ನೋಡಿ ತುಂಬಾ ಭಾವುಕರಾಗಿ ಶಿವಣ್ಣ ರವರನ್ನು ಸಂತೈಸಿದ ಘಟನೆ ಎಂದೂ ಮರೆಯಲಾಗದು. 
ಕಬ್ಬಡ್ಡಿ ಕಬ್ಬಡ್ಡಿ ಖಾರಾ ಕಬ್ಬಿನ್ ಗದ್ದೆಲ್ ಕೀರಾ ಒತ್ಕೊಂಡೋದೋನ್ ಯಾರಾ
ನಮ್ಮ ಹ್ಯಾಟ್ರಿಕ್ ಹೀರೋ ಸೆಂಚುರಿ ಸ್ಟಾರ್” ಶಿವಣ್ಣ” ರವರ ನಟನೆ ಅಧ್ಭುತ ಜೊತೆಗೆ ಹೊಸ ನಟಿಯಾಗಿ “ಜೆನಿಫರ್ ಕೊತ್ವಾಲ್” ಸ್ನೇಹಿತರಾಗಿ “ರಘುರಾಂ” ರವರು ” ಪಟ್ರೆ ನಾಗರಾಜ್” ” ಮೈಕೊ ಚಂದ್ರು” ಕೋಟೆ ಸಿದ್ದರಾಗಿ ಬಿಡ್ಡನಾಗಿ “ಆದಿ ಲೋಕೇಶ್” ತಾಯಿಯ ಪಾತ್ರವನ್ನು “ಅರುಂಧತಿ ನಾಗ್ “ರವರು ಅತ್ಯುತ್ತಮವಾಗಿ ನಿವ೯ಹಿಸಿದ್ದಾರೆ.

ಮಳವಳ್ಳಿ ಸಾಯಿಕೃಷ್ಣ ರವರ ಸಂಭಾಷಣೆ ಕಥೆಗೆ ಅಷ್ಟೇ ಪ್ರಾಮುಖ್ಯತೆ ನೀಡಿದ್ದು” ಮಲೈ ಮಹದೇಶ್ವರ “ಬೆಟ್ಟದಲ್ಲಿ ಹಳ್ಳಿಗಾಡಿನಲ್ಲಿ ಚಿತ್ರೀಕರಣ ಮತ್ತು ಅಲ್ಲಿಯ ಭಾಷೆ ಜನರಿಗೆ ಹತ್ತಿರವಾಗುತ್ತದೆ. “ಗುರುಕಿರಣ್ ” ರವರಿಗೆ ಒಳ್ಳೆಯ ಹೆಸರು ತಂದುಕೊಟ್ಟ ಚಿತ್ರ ಸಂಗೀತದಲ್ಲಿ ತಮ್ಮ ಕೈಚಳಕ ಬಹಳ ಚೆನ್ನಾಗಿ ತೋರಿಸಿದ್ದಾರೆ. ಎಲ್ಲದಕ್ಕೂ ಮುಖ್ಯವಾಗಿ ಈ ಎಲ್ಲಾ ಯಶಸ್ಸಿಗೆ ಕಾರಣ ಚಿತ್ರದ ಕಥೆ ಹೇಳುವ ರೀತಿ ಮತ್ತು ಅಧ್ಭುತ ನಿದೇ೯ಶನ ಮಾಡಿದ ಕೀತಿ೯ “ಪ್ರೇಮ್” ರವರಿಗೆ ಸಲ್ಲುತ್ತದೆ ಕರಿಯ ಚಿತ್ರದ ನಂತರ ಮತ್ತೊಮ್ಮೆ ನಿದೇ೯ಶನದಲ್ಲಿ ಜೋಗಿ ಜನ ಮೆಚ್ಚುಗೆ ಗಳಿಸಿದೆ. ನಿಮಾ೯ಪಕರು ಮತ್ತು ನಿಮಾ೯ಣ ಅಶ್ವಿನಿ ರಾಮ್ ಪ್ರಸಾದ್. 


ಪ್ರೇಮ್ ರವರು ತಾಯಿಯ ಮೇಲೆ ತುಂಬಾ ಪ್ರೀತಿ ಇರೋದರಿಂದ ಚಿತ್ರದಲ್ಲಿ ಈ ಹಾಡು ಬರೆದು ತಾವೇ ಹಾಡಿಪ್ರತಿಯೊಬ್ಬರ ಕಣ್ಣಲ್ಲಿ ನೀರು ಬರಿಸಿದರು.  ಎಷ್ಟೋ ಮಗ ಮತ್ತು ತಾಯಿ ಸಂಬಂಧ ಗಟ್ಟಿಯಾದದ್ದು ಈ ಚಿತ್ರ ನೋಡಿದಮೇಲೆ ತಾಯಿಯ ಬೆಲೆ ಏನು ಅಂತ ಅಥ೯ ಆಗೋ ಚಿತ್ರ. 


“ಬೇಡುವೆನು ವರವನ್ನು ಕೊಡೆ ತಾಯಿ ಜನ್ಮವನು ಕಡೆ ತನಕ ಮರೆಯಲ್ಲ ಜೋಗಿ ಕಡೆತನಕ ಮರೆಯಲ್ಲ ಜೋಗಿ 
ಸಾವೇ ಬಂದರೂ ಮಣ್ಣೇ ಆದರೂ ತಾಯಿ ಪ್ರೀತಿಗೆಂದೆಂದೂ ಕೊನೆ ಇಲ್ಲ ತಾಯೀನೇ ಎಲ್ಲ ಬದಲಾಗೊದಿಲ್ಲ ಯುಗವುರುಳಿ ಕಳೆದೋದರೂ ಹಣೆಬರಹ ಬದಲಾದರೂ 
ಬೇಡುವೆನು ವರವನ್ನು ಕೊಡೆತಾಯಿ ಜನ್ಮವನು ಕಡೆ ತನಕ ಮರೆಯಲ್ಲ ಜೋಗಿ ಕಡೆ ತನಕ ಮರೆಯಲ್ಲ ಜೋಗಿ “


ಇನ್ನೂ ಈ ಚಿತ್ರ ಹಲವಾರು ವಿಷೇಷತೆಗಳಿಗೆ ಸಾಕ್ಷಿಯಾಗಿದೆ 
💚ಬೆಂಗಳೂರಿನ 16 ಚಿತ್ರಮಂದಿರಗಳಲ್ಲಿ ಶತ ದಿನೋತ್ಸವ ಪೂರೈಸಿದೆ ❤ಕನಾ೯ಟಕದಲ್ಲಿ 63 ಚಿತ್ರಮಂದಿರಗಳಲ್ಲಿ ಶತ ದಿನೋತ್ಸವ ಪೂರೈಸಿದ ಹೆಗ್ಗಳಿಕೆ ಚಿತ್ರರಂಗದಲ್ಲಿ ದಾಖಲಾಗಿದೆ. 💜ಕನ್ನಡ ಚಿತ್ರರಂಗದ ದಿಕ್ಕನ್ನೇ ಬದಲಾಯಿಸಿದೆ ಮಧ್ಯ ರಾತ್ರಿಯ ಶೋಗಳ ಮೂಲಕ .💟81 ಕೇಂದ್ರಗಳಲ್ಲಿ ಅಮೇರಿಕಾ ಸೇರಿದಂತೆ ಏಕ ಕಾಲಕ್ಕೆ ಬಿಡುಗಡೆಯಾದ ಚಿತ್ರ. 🌹30 ವಷ೯ಗಳ ಕನ್ನಡ ಚಿತ್ರ ಜಗತ್ತಿನ ಎಲ್ಲಾ ದಾಖಲೆಗಳನ್ನು ಮುರಿದು ಇತಿಹಾಸ ಸೃಷ್ಟಿಸಿದ ಮಹಾನ್ ಚಿತ್ರ. 🌺50 ಮತ್ತು 100 ರೂ ಟಿಕೇಟ್ ಗಳು 1500 ರಿಂದ 2000 ರೂ ಟಿಕೆಟ್ ಕೊಂಡು ಕೊಳ್ಳುವ ಕ್ರೇಜ್ ಹುಟ್ಟು ಹಾಕಿದ ಚಿತ್ರ. 


ನಿಮಗೆಲ್ಲರಿಗೂ ಒಂದು ವಿಷಯ ಹೇಳಬೇಕು “ಸೂಪರ್ ಸ್ಟಾರ್ ರಜಿನಿ ಕಾಂತ್ ” ರವರು ಜೋಗಿ ಚಿತ್ರವನ್ನು ನೋಡಿ ತಮಿಳಿನಲ್ಲಿ “ಧನುಶ್ ” ರವರಿಗೆ ಚಿತ್ರ ನಿದೇ೯ಶಿಸಲು ಪ್ರೇಮ್ ರವರನ್ನು ಕೇಳಿದಾಗ ರಿಮೇಕ್ ಮಾಡಲಾಗುವುದಿಲ್ಲ ಅನ್ನಲು ಮನಸ್ಸು ಬರದೆ ನಿಧಾ೯ರ ತಿಳಿಸುವೆ ಅಂತ ಅವರ ಮನೆಗೆ ಭೇಟಿ ಮಾಡಲು ಹೋದಾಗ ಕ್ಷಮಿಸಿ ನಾನು ಈ ಚಿತ್ರ ಕನ್ನಡದಲ್ಲೇ ಇರಲಿ ರಿಮೇಕ್ ಮಾಡೋದಿಲ್ಲ ಎಂದು ಅಂದರೂ ರಜಿನಿ ರವರು ಬೇರೆ ನಿದೇ೯ಶಕರಿಗೆ “ಪರಟ್ಟೈ ” ಅನ್ನೋ ಹೆಸರಲ್ಲಿ ಮಾಡಲು ಹೇಳಿದರು ಆದರೆ ಇಲ್ಲಿ ಭಜ೯ರಿ ಯಶಸ್ಸು ಆದಷ್ಟು ಅಲ್ಲಿ ಯಶಸ್ವಿಯಾಗಿಲ್ಲ, ಅದೇ ಕನ್ನಡ ಚಿತ್ರರಂಗದ ಗತ್ತು ಅಂದರೆ. 
ಇನ್ನೂ ಕೊನೆಯದಾಗಿ ನಾನು ಈ ಚಿತ್ರ ನೋಡೋಕೆ ನವರಂಗ್ ಚಿತ್ರಮಂದಿರದಲ್ಲಿ ನೂಕು ನುಗ್ಗಲು ಆದರೂ ಕಾದು ಟಿಕೇಟ್ ಗಾಗಿ ಪೋಲಿಸರಿಂದ ರುಚಿ ತಿಂದು ಸಂಜೆಯ ಆಟ ಸಿಕ್ಕಿ ಮೊದಲ ದೃಶ್ಯ ನೋಡುವ ಮಜಾ ಈಗಿಲ್ಲ ಥಿಯೇಟರ್ ನಲ್ಲಿ ಸುಮಾರು 5 ಬಾರಿ ನೋಡಿದರೂ ಸಾಲದೆ ಮೊಬೈಲ್ನಲ್ಲಿ ಬಿಟ್ಟಾಗ ಬಿಡದೆ ನೋಡುವ ಹುಚ್ಚು ಹಿಡಿಸಿದ ಚಿತ್ರವಿದು. 
ಎ ಫೀಲ್ ದಟ್ ನೆವರ್ ಎವರ್ ಎಂಡ್ಸ್… 

ಶ್ರೀನಿವಾಸ್ ಎ

ಶ್ರೀನಿವಾಸ್ ಎ

ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು. ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ. ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏

Leave a Reply