“ಝಿಂದಗಿ ಇನ್ ಶಾರ್ಟ್” Zindagi In Short.

ಫ್ಲಿಪ್‌ಕಾರ್ಟ್ ಯ್ಯಾಪ್ ನಲ್ಲೊಂದು ಪುಟ್ಟ ಪುಟಾಣಿ ಕತೆಗಳ ಒಂದು ಸರಣಿ ಇದೆ.ಅಥವಾ ಆಂಥಾಲಜಿ ಚಿತ್ರ ಅಂತೆನೇ ಹೇಳಿ.

“ಝಿಂದಗಿ ಇನ್ ಶಾರ್ಟ್”
Zindagi In Short.
IMDB : 9.4
ಹದಿನೈದಿಪ್ಪತ್ತು ನಿಮಿಷಗಳ ೭ ಸಣ್ಣ ಕತೆಗಳನ್ನು ಒಂದೇ ಗುಕ್ಕಿನಲ್ಲಿ ಮುಗಿಸದಿದ್ದರೆ ಕೇಳಿ ಮತ್ತೆ.
ಎಲ್ಲದರ ನಡುವಿನ ಕಾಮನ್ ಕೊಂಡಿ….”ಪ್ರೀತಿ”…
ಒಂದು ಕತೆ ಆನ್‌ಲೈನ್ ಪ್ರೀತಿಯ ಬಗ್ಗೆ ಹೇಳಿದರೆ , ಇನ್ನೊಂದು ಅಮ್ಮನ ಪ್ರೀತಿ , ಮತ್ತೊಂದು ಮಕ್ಕಳ ಮುಗ್ಧತೆ , ಮಗದೊಂದು ಧೋಖಾ…ಹೀಗೆ ಎಲ್ಲಾ ಕತೆಗಳೂ ಗಮನ ಸೆಳೆಯುತ್ತವೆ.


ಒಂದು ಕತೆಯಲ್ಲಿ ಮಕ್ಕಳ ಮುಗ್ಧತೆಯನ್ನು ಚಿತ್ರಿಸಿದರೆ ಇನ್ನೊಂದು ಓಲ್ಡ್ ಏಜ್ ತಲ್ಲಣಗಳನ್ನು ಯಶಸ್ವಿಯಾಗಿ ತೋರಿಸುತ್ತದೆ…


ತುಂಬಾ ಫನ್ನಿ‌ಯಾಗಿರೋದು “ನಾನೋ ಸಾ ಫೋಬಿಯಾ..ಮತ್ತು ” ಸ್ವಾಹಾ “
“ಪಿನ್ನಿ” ಕರುಣೆ ಮೂಡಿಸಿದರೆ , “ಛಾಜು ಕೆ ದಹಿ ಬಲ್ಲೆ” ಆಪ್ತವಾಗುತ್ತದೆ…
“ಸ್ಲೀಪಿಂಗ್ ಪಾರ್ಟ್‌ನರ್” ಮಹಿಳಾ ಪರವಾದರೂ , ಕೊನೆಯಲ್ಲಿ ಸ್ವಲ್ಪ ಅತಿ ಬಾಲಿವುಡೀಕರಣದಿಂದಾಗಿ… “ಅವರಿಗೆ ಹಾಗೇ ಆಗಬೇಕು” ಎಂದು almost ಬಂದಿರುವ ಭಾವನೆಯನ್ನು ಉಳಿಸಿಕೊಳ್ಳುವುದಿಲ್ಲವಾದರೂ ಚೆನ್ನಾಗಿದೆ…

ನನಗೆ ತುಂಬಾ ಇಷ್ಟವಾಯ್ತು.
ಖುಷಿಖುಷಿಯಾಗಿ ನೋಡಬಲ್ಲ ಅತ್ಯುತ್ತಮ ಆಂಥಾಲಜಿ ಚಿತ್ರ.

ಇನ್ನೊಂದು ಹೇಳಬೇಕೇ?
ಇದನ್ನು ನಿರ್ಮಾಣ ಮಾಡಿದವರು ಗ್ಯಾಂಗ್ಸ್ ಆಫ್ ವಾಸೇಪುರ್ , ಮಸಾನ್ ಹಾಗೂ ಲಂಚ್‌ಬಾಕ್ಸ್ ಕೊಟ್ಟಂತಹಾ ನಿರ್ಮಾಪಕ ಅಂತಂದ ಮೇಲೆ…
” ಏಕ್ ಬಾರ್ ದೇಖ್ನಾ ಬನ್ತಾ ಹೆ”.

Rajesh Aithal

Rajesh Aithal

Leave a Reply