ಟಾಲಿವುಡ್ ನ ಹಿರಿಯ ಖಳನಟ ಜಯಪ್ರಕಾಶ್ ರೆಡ್ಡಿಯವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಎಪ್ಪತ್ತ ನಾಲ್ಕು ವರ್ಷ ವಯಸ್ಸಿನ ಈ ಯುವಕ ಗುಂಟೂರಿನ ತಮ್ಮ ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ತಮ್ಮದೇ ಆದ ವಿಶಿಷ್ಟ ಮ್ಯಾನರಿಸಂ, ರಾಯಲಸೀಮೆ ಶೈಲಿಯ ಡೈಲಾಗ್ ಇವರನ್ನು ಟಾಲಿವುಡ್ ನಲ್ಲಿ ವಿಶೇಷ ಖಳನಟನನ್ನಾಗಿಸಿತ್ತು. ನಂದಮೂರಿ ಬಾಲಕೃಷ್ಣ ಅಭಿನಯದ ಸಮರಸಿಂಹರೆಡ್ಡಿ ಚಿತ್ರದ ಅಭಿನಯಕ್ಕಾಗಿ ಪ್ರತಿಷ್ಠಿತ ನಂದಿ ಪ್ರಶಸ್ತಿ ದೊರಕಿತ್ತು. ಹಿರಿಯರ ನಿಧನಕ್ಕೆ ಟಾಲಿವುಡ್ ನ ಹಿರಿಯ ಕಲ್ಲವಿದರು ಕಂಬನಿಗೆರೆದಿದ್ದಾರೆ. ಇತ್ತೀಚೆಗಷ್ಟೇ ಮಹೇಶ್ ಬಾಬು ಜೊತೆ ಇವರ ಅಭಿನಯದ ಸರಿಲೇನು ನೀಕೇವ್ವರು ಚಿತ್ರ ಬಿಡುಗಡೆಯಾಗಿದ್ದದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.ಹಿರಿಯರ ಆತ್ಮಕ್ಕೆ ಶಾಂತಿ ಸಿಗಲೆಂದು ಚಿತ್ರೋದ್ಯಮ.ಕಾಂ ತಂಡದ ಪ್ರಾರ್ಥನೆ.