“ನವೆಂಬರ್ 1ನೆ ತಾರೀಕು ಕರ್ನಾಟಕ ರಾಜ್ಯೋತ್ಸವ , ಏಪ್ರಿಲ್ 24 ಡಾ. ರಾಜ್ಕುಮಾರ್ ಅಭಿಮಾನೋತ್ಸವ”.
“ಹುಟ್ಟು” ಹಬ್ಬದಂತೆ ಆಚರಣೆಯಾಗಬೇಕಾದ್ರೆ, ಬದುಕಿನಲ್ಲಿ ಮೌಲ್ಯಗಳ ಅಳವಡಿಕೆ ಬೆಟ್ಟದಂತಿರಬೇಕು. ಎಲ್ಲರು ಅವರ ಹುಟ್ಟಿಗು ಬದುಕಿಗು ಅರ್ಥವನ್ನ ಹುಡುಕಿಕೊಳ್ಳಲು ಹರ ಸಾಹಸವನ್ನೇ ಪಡ್ತಿರ್ತಾರೆ ಆದ್ರೆ ಕೆಲವೇ ಕೆಲವರು ತಮ್ಮ ಇಡೀ ಜೇವನವನ್ನೇ ಬದುಕಿನ ನಿಘಂಟಾಗಿಸಿ, ಬೆಲೆ ಬಾಳುವ ಗಂಟಿನ ರೂಪದಲ್ಲಿ ಮುಂಬರುವ ಹತ್ತು ಹಲವು ಪೀಳಿಗೆಗೆ ಉಡುಗೊರೆಯಾಗಿ ಬಿಟ್ಟು ಹೊಕ್ತಾರೆ ಅಂಥವರಲ್ಲಿ ಒಬ್ಬರು, ಕನ್ನಡಕ್ಕೆ ಒಬ್ಬರೇ ಒಬ್ಬರು ಡಾ. ರಾಜಕುಮಾರ.!!!
ಕನ್ನಡ ಚಿತ್ರರಂಗದಲ್ಲಿ ಅಭಾಮಿನಾದ ಪರಂಪರೆಯನ್ನ ಶೃಷ್ಟಿಸಿದವರು, ತನ್ನನ್ನು ಪ್ರೀತಿಸುವ ಹೃದಯಗಳಲ್ಲಿ ಅಭಿಮಾನಿಸುವ ಕಂಗಳಲ್ಲಿ ಭಗವಂತನನ್ನು ಕಂಡು “ಅಭಿಮಾನಿಗಳನ್ನ ದೇವರೆಂದರು ಅಣ್ಣಾವರು”
ಪದ್ಮಭೂಷಣ, ದಾದಾ ಸಾಹೇಬ್ ಫಾಲ್ಕೆ, ನಟಸಾರ್ವಭೌಮ,ರಸಿಕರ ರಾಜ ” ಭಾರತದ ಎಕೈಕ ಸಿಂಗಿಂಗ್ ಸೂಪರ್ ಸ್ಟಾರ್” ಡಾ. ರಾಜಕುಮಾರ್ ಅವರ 92ನೆ ಹುಟ್ಟು ಹಬ್ಬದ್ದ ಶುಭಾಷಯ.
“ಡಾ. ರಾಜ್ಕುಮಾರ್ ಅವರು ವ್ಯಕ್ತಿತ್ವವಗಳನ್ನ ಪ್ರತಿಬಿಂಬಿಸುವ ಕನ್ನಡಿಯ(ದರ್ಪಣ) ಹಾಗೆ”!!! ಕನ್ನಡಿ ಎದುರು ಸಲಾಗಿ ಬಂದು ನಿಂತ ಅನೇಕರಲ್ಲಿ, ಮೊದಲಿಗರೆಂದರೆ ಅಜ್ಜಿ ಹೇಳಿದ ಪುರಾಣ ಪುಣ್ಯ ಕಥೆಯಲ್ಲಿ ಬರುವ ಮಹಾಪುರುಷರು, ಪಠ್ಯ ಪುಸ್ತಕದಲ್ಲಿ ನಾವು ಪಾಠವಾಗಿ ಓದು ಕಲಿತ ಈ ಮಣ್ಣಿನ ಪ್ರಚಂಡ ವೀರರು-ಚಕ್ರಾಧಿಪತಿಗಳು. ಬಂದು ಹೋದವರ ಬಿಂಬ ಕಾಲ ಕ್ರಮೇಣ ಮಾಯವಾಗಿದ್ರು, ಅಳಿಯದ ಅವರ ಛಾಯೆ ಅಲ್ಲಿ ನೆಲಸಲಾರಂಭಿಸಿತು. ಓರ್ವ ವಂಚಕ,ದುಷ್ಟ-ಕಪಟಿಗೆ ಎದುರು ಬಂದು ನಿಲ್ಲಲು ಎಂದಿಗೂ ಆ ಕನ್ನಡಿ ಈಡು ಮಾಡಿಕೊಡಲಿಲ್ಲ.
ಬಯಲಲ್ಲಿದ್ದ ಕನ್ನಡಿ ಮಳೆ,ಗಾಳಿ ಬಿಸಿಲನ್ನ ಎದುರಿಸಿ ಚೂರಗಲಿಲ್ಲ, ಸೀಳಲಿಲ್ಲ, ಕೊಂಚವೂ ಮಾಸಲಿಲ್ಲ ಹಾಗಂತ ಎದುರು ಬಂದು ನಿಂತವರನ್ನ ಯಥಾವತ್ತಾಗಿ ಪ್ರತಿಬಿಂಬಿಸಿದಕ್ಕೆ ದರ್ಪದಿಂದ ಮರೆಯಲು ಇಲ್ಲ! ಯಾಕಂದ್ರೆ ಆ ಕನ್ನಡಿಯು ತಾಯಾರಾದ ಮನೆ ಮತ್ತು ಮಣ್ಣಿನಲ್ಲಿ ಸುಸಂಸ್ಕ್ರುತಿ ಬೇರೂರಿತ್ತು .. “ಆ ಊರೇ ಗಾಜನೂರು”
“ಪಾಂಡಿತ್ಯಕ್ಕೆ ಕವಿರತ್ನ ಕಾಳಿದಾಸ, ಗಾಂಭೀರ್ಯಕ್ಕೆ ಕೃಷ್ಣದೇವರಾಯ,ಭೀಬತ್ಸ್ಯಕ್ಕೆ ಹಿರಣ್ಯಕಶಿಪು, ಪರಾಕ್ರಮಕ್ಕೆ ಇಮ್ಮಡಿ ಪುಲಕೇಶಿ” ಎಂಬಂತೆ ಪೈಪೋಟಿ ಮೇರೆಗೆ ಎಲ್ಲರೂ ಸಾಲಾಗಿ ನಿಂತರು ಕಾವಿ ತೊಟ್ಟ ಸ್ವಾಮಿ- ಯತಿರಾಜರು, ಪ್ಯಾಂಟ್ ಸೂಟ್ ಧರಿಸಿ ಸ್ಟೈಲಾಗಿ ಗನ್ ಹಿಡಿದ ಬಾಂಡ್ಗಳು ಅಷ್ಟೇ ಯಾಕೆ ಪಂಚೆಯುಟ್ಟು ಹಳ್ಳಿಯಿಂದ ಪಟಣಕ್ಕೆ ಬಂದ ಓರ್ವ ಸಾಮಾನ್ಯನು ಕೂಡ ಮೇಯೆರ್ ಅದದ್ದು ಕಂಡಿದ್ವಿ, ಅದಕ್ಕೆ ತದ್ವಿರುದ್ಧವಾದ ” ದೂರದ ಬೆಟ್ಟ” ಕಥೆಗೆ ಕೂಡ ಸಾಕ್ಷಿಯಾದ್ವಿ. ಪಾತ್ರಗಳು ಹತ್ತಾದರೆ ಭಾವನೆಗಳು ನೂರಾರು ಅದನ್ನ ಪ್ರತಿಬಿಂಬಿಸಿದ ಪರಿ ಸಾವಿರಾರು…..ವಾತ್ಸಲ್ಯ ಬೀರುವ ತಂದೆಯಾಗಿ, ಅಕ್ಕರೆಯ ಮುಗ್ಧ ಮಗನಾಗಿ , ಮಮಕಾರ ತೋರುವ ಅಣ್ಣನಾಗಿ, ಒಲವ ಸುಧೆಯ ಹರಿಸುವ ಪ್ರಿಯಕರನಾಗಿ- ಪ್ರೀತಿಸುವ ಪತಿಯಾಗಿ, ಸಮಾಜದ ಕಟ್ಟುಪಾಡುಗಳನ್ನ ತಿಳಿಸುವ ಕಾಪಾಡುವ ಅಧ್ಯಾಪಕನಾಗಿ, ಭಕ್ತಿ ಧಾರೆಯ ಸುರಿಸಿದ ಕಣ್ಣಪ್ಪ, ಕನಕದಾಸರು, ಗೋರ ಕುಂಬಾರರಾಗಿ. ಛಲ ಇದ್ದರೆ ಗೆಲುವು, ಅದಕ್ಕೆ ಸ್ವಾಭಿಮಾನವೇ ಬೆನ್ನೆಲುಬು ಎಂಬುದ ಸಾಧಿಸಿ ತೋರಿದ “ರಾಜೀವ- ರಾಜ ಇವ”. ಬಂಗಾರದ ಮನುಷ್ಯನ ಮುತ್ತಿನಂತ ಬದುಕಿಗೆ “ಸಾವು ಇರದ ಸಾವಿರದ ಶರಣು”