ಡಾ.ರಾಜ್-ಒಂದು ಆದರ್ಶ ವ್ಯಕ್ತಿತ್ವ

ರಾಜ್ಕುಮಾರ್

ಕಲಿಯುಗದ ದೈವ, ಶ್ರೀ ರಾಮ ದೇವರ ಅವಧೂತರೆಂದೇ ಪ್ರಖ್ಯಾತರಾದ ಶ್ರೀ ರಾಘವೇಂದ್ರರ ಪಾವಡಗಳ ಬಗ್ಗೆ ತಿಳಿಯದವರಿಲ್ಲ. ರಾಘವೇಂದ್ರ ಸ್ವಾಮಿಗಳೆಂದರೆ ಕಣ್ಣಿನ ಮುಂದೆ ಬರುವುದು ಡಾ.ರಾಜ್ ಅವರ ಮುಖ. ಈ ಚಲನ ಚಿತ್ರದ ಹಿಂದಿನ ಘಟನೆ, ಒಬ್ಬ ನಟನಿಗೆ ಇರಬೇಕಾದ ನಿಷ್ಠೆ,ಬದ್ಧತೆ ಮತ್ತು ಸರಳತೆಯ ಒಂದು ಉದಾಹರಣೆ ಇಲ್ಲಿದೆ.

ಶ್ರೀ ಮಂತ್ರಾಲಯ ಮಹಾತ್ಮೆ 1966 ರಲ್ಲಿ ಬಿಡುಗಡೆಯಾದ ಭಕ್ತಿ ಪ್ರಧಾನ ಚಿತ್ರ. ಇದರ ಮುಖ್ಯ ಭೂಮಿಕೆಯಲ್ಲಿ ಡಾ. ರಾಜ್ ಕುಮಾರ್ ಜಯಂತಿ..ಇನ್ನಿತರಿರಿದ್ದಾರೆ. ದೊರೈ ಭಗವಾನ್ ನಿರ್ದೇಶನ,ರಾಜನ್ ನಾಗೇಂದ್ರ ಸಂಗೀತ .

ಈ ಚಿತ್ರದ ಬಹಳಷ್ಟು ಚಿತ್ರೀಕರಣ ಮಂತ್ರಾಲಯ ಮತ್ತು ಬಿಚ್ಚೋಲೇ (ರಾಯರು ಹುಟ್ಟಿದ ಸ್ಥಳ) ಸುತ್ತ ಮುತ್ತ ನಡೆಯ ಬೇಕಿತ್ತು. ರಾಜ್ಕುಮಾರ್ ಬ್ರಹ್ಮಣೇತರರಾದ್ದರಿಂದ ಒಳಗೆ ಪ್ರವೇಶ ಸಿಗಲಿಲ್ಲ. ಸಾಕಷ್ಟು ವಿರೋಧವೂ ಹುಟ್ಟಿಕೊಂಡಿತು. ಮಂತ್ರಾಲಯದಲ್ಲಿ ಭಕ್ತರಿಗಾಗಿ ಮೀಸಲಾದ ಕೋಣೆ ಯನ್ನು ರಾಜ್ ಆವರಿಗೆ ಕೊಡಲು ಒಪ್ಪಲಿಲ್ಲ. ಆಗ ಡಾ. ರಾಜ್ ಮಂತ್ರಾಲಯದ ಹೊರಗೇ ತಂಗಿದ್ದು , ಚಿತ್ರೀಕರಣ ನಡೆಸಿದರು. ಮತ್ತು ಈ ಚಿತ್ರ ಪೂರ್ಣವಾಗುವವರೆಗೆ ಮಾಂಸಾಹಾರ ತ್ಯಜಿಸಿದ್ದರು.


ಉಡುಪಿಯ ಹೆಸರಾಂತ ಸ್ವಾಮೀಜಿಗಳು ಶ್ರೀ ರಾಘವೇಂದ್ರರು ಧರಿಸುತ್ತಿದ್ದ ಮುದ್ರೆಗಳನ್ನು(ಗಂಧ ಗೋಪಿಚಂದನ ಬಳಸಿ) ಡಾ. ರಾಜ್ ರವರು ತಮ್ಮ ದೇಹದಮೇಲೆ ಹಾಕಿ ಕೊಳ್ಳಲು ನೆರವಾಗುವಂತೆ ಒಬ್ಬ ಶಿಷ್ಯರನ್ನು ಕಳುಹಿಸಿದ್ದರಂತೆ.


ಪಾತ್ರಕ್ಕಾಗಿ ಡಾ ರಾಜ್ ಬದ್ಧತೆ ಹೀಗಿತ್ತು.ಮುಖದಲ್ಲಿದ್ದ ಸಾತ್ವಿಕ ಕಳೆ ಮತ್ತು ಅವರ ನಟನೆ ರಾಘವೇಂದ್ರ ಸ್ವಾಮಿಗಳಾಗಿ ಇಂದಿಗೂ ಜನ,ಮನದಲ್ಲಿ ಶಾಶ್ವತವಾಗಿ ಉಳಿದು ಹೋಗಿದೆ. ಚಿತ್ರ ಬಿಡುಗಡೆಯಾಗಿ ಅದ್ಭುತ ಯಶಸ್ಸು ಕಂಡ ಮೇಲೆ ವಿರೋಧಿಸಿದರೆಲ್ಲಾ ಡಾ. ರಾಜ್ ಮುಂದೆ ಕ್ಷಮೆ ಕೋರಿದರಂತೆ.

ಡಾ. ರಾಜ್ ರ ಸರಳತೆಗೆ ಇನ್ನೊಂದು ಉದಾಹರಣೆ.
1982ರಲ್ಲಿ Windsor manor ಹೋಟೆಲ್, Gulf course ರಸ್ತೆಯಲ್ಲಿ ಹೊಸದಾಗಿ ಪ್ರಾರಂಭವಾದ ಐಷಾರಾಮಿ ಹೋಟೆಲ್ ಆಗಿತ್ತು. ಡಾ. ರಾಜ್ ಚೆನ್ನೈ ನಿಂದ ಚಿತ್ರಿಕರಣಕ್ಕಾಗಿ ಬೆಂಗಳೂರಿಗೆ ಬಂದಿದ್ದರು. ಸಾಮಾನ್ಯವಾಗಿ ಬೆಂಗಳೂರಿನ high lands ಹೋಟೆಲ್ನಲ್ಲಿ ತಂಗುವುದು ರೂಢಿಯಾಗಿತ್ತು. ಈ ಬಾರಿ ನಿರ್ಮಾಪಕರು windsor manor ನಲ್ಲಿ ರಾಜ್ ಅವರಿಗೆ ಉಳಿದುಕೊಳ್ಳಲು ಕೋಣೆ ಕಾದಿರಿಸಿದರು.


ಹೋಟೆಲ್ ಮಾಲೀಕರು ಡಾ. ರಾಜ್ ತಮ್ಮ ಹೊಟೇಲ್ ನಲ್ಲಿ ಉಳಿದುಕೊಂಡಿರುತ್ತಾರೆಂದು ತಿಳಿದು ಸಂತೋಷದಿಂದ ರಾಜ್ ಭೇಟಿಗೆ ಬಂದರು. ಹೋಟೆಲ್ ಒಳಾಂಗಣ ವಿನ್ಯಾಸ,ಅಲಂಕಾರ, ದೊರೆಯುವ ಸವಲತ್ತುಗಳನ್ನು ವಿವರಿಸುತ್ತಾ ಇಡೀ ಹೋಟೆಲ್ ಒಂದು ಸುತ್ತು ರಾಜ್ ಅವರನ್ನು ಕರೆದುಕೊಂಡು ಹೋದರು. ಡಾ. ರಾಜ್ ಎಲ್ಲವನ್ನು ಬೆರಗುಗಣ್ಣಿಂದ ನೋಡುತ್ತಾ ಮೆಚ್ಚುಗೆ ಸೂಚಿಸಿ. ಇಲ್ಲಿ ಒಂದು ದಿನ ತಂಗಲು ಕೋಣೆಯ ತಾರೀಫ್ ಎಷ್ಟು ಎಂದು ಕೇಳಿದರು. ಆಗ ರೂ 300..( ಆಗಿನ ಕಾಲಕ್ಕೆ ಬಹಳ ದುಭಾರಿ ಆಗಿತ್ತು). ಅದನ್ನು ಕೇಳಿದ ರಾಜ್, ಅಲ್ಲಿ ಉಪಹಾರ ಮಾಡಿ ಕೋಣೆ ಖಾಲಿ ಮಾಡಿ highland ಹೋಟೆಲ್ಗೆ ತಮ್ಮವಾಸ್ತವ್ಯ ವರ್ಗಾಯಿಸಿಕೊಂಡರು. ಅನಗತ್ಯವಾಗಿ ನಿರ್ಮಾಪಕರಿಗೆ ನಟರು ದುಡ್ಡಿನ ಹೊರೆ ಹೊರೆಸಬಾರದು ಎಂಬ ಮನೋಭಾವ ಡಾ. ರಾಜ್ ಅವರದು.


ಈಗಿನ ಸಣ್ಣ ಪುಟ್ಟ ನಟರು, ಅವರ ಚಿತ್ರದ ಚಿತ್ರೀಕರಣ ಸಮಯದಲ್ಲಿ ತಮಗೆ ಮಾತ್ರವಲ್ಲದೆ ತಮ್ಮ ಕುಟುಂಬದವರೆಗೆ, ಬಂಧು ಮಿತ್ರರಿಗೂ ಸಹ ನಿರ್ಮಾಪಕರೆ 5 ಸ್ಟಾರ್ ಹೋಟೆಲ್ ಬುಕ್ ಮಾಡಿರಬೇಕು. ದುಬಾರಿ ಊಟ ತಿಂಡಿ ಲಭ್ಯವಾಗುವಂತೆ ನೋಡಿಕೊಳ್ಳಬೇಕು ಎಂದು ಆದೇಶಿಸುತ್ತಾರೆ. ಅಂತಹುದರಲ್ಲಿ ಡಾ. ರಾಜ್ ರ ನಡವಳಿಕೆ ಚಿತ್ರರಂಗದಲ್ಲಿ ಅತೀ ವಿರಳವಾದ ವ್ಯಕ್ತಿತ್ವವನ್ನು ನಮಗೆ ಪರಿಚಯಿಸುತ್ತದೆ.


ಚಿತ್ರರಂಗ ಒಂದು ಪ್ರಭಾವಿ ಮಾಧ್ಯಮ, ಯಾವುದೇ ಸಂದೇಶ ಜನ ಸಂಮಾನ್ಯರನ್ನು ಮುಟ್ಟ ಬೇಕೆಂದರೆ ಈ ಮಾಧ್ಯಮ ಬಹು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಇದನ್ನು ಅರಿತಿದ್ದ ಡಾ. ರಾಜ್,ತಮ್ಮ ಪ್ರತಿ ಚಿತ್ರದಲ್ಲೂ ಒಂದು ಸಂದೇಶ ಖಂಡಿತವಾಗಿ ಇರುವಂತೆ ನಿರ್ದೇಶಕರಲ್ಲಿ ಕೋರಿಕೊಳ್ಳುತ್ತಿದ್ದರು.


ಇದಕ್ಕೆ ಜೀವಂತ ನಿದರ್ಶನ “ಬಂಗಾರದ ಮನುಷ್ಯ” . ಹಳ್ಳಿ ಬಿಟ್ಟು ಪಟ್ಟಣ ಸೇರಿದ ಹಲವಾರು ಯುವಕರು ತಮ್ಮ ಹಳ್ಳಿಗಳಿಗೆ ಮರಳಿ ವ್ಯವಸಾಯವನ್ನು ಒಂದು ಯಶಸ್ವಿ ಉದ್ಯೋಗವಾಗಿ ಮುನ್ನಡೆಸಿದ್ದು ಒಂದು ಇತಿಹಾಸ.

ಲೇಖಕರು : ಮಮತಾ ಭಾಮಾ
ವೃತ್ತಿ-ಒಳಾಂಗಣ ವಿನ್ಯಾಸಕಿ
ಪ್ರವೃತ್ತಿ- ಹವ್ಯಾಸಿ ಬರಹಗಾರ್ತಿ,ಹಾಡುಗಾರ್ತಿ
ಕವನ ಸಂಕಲನ:ಚಿಗುರು

admin (TNS)

admin (TNS)

ಸುಂದರ ಉದ್ಯಾನವನಗಳು, ಸಾಫ್ಟ್ವೇರ್ ಕಂಪನಿಗಳಿಂದ ಚಿರಪರಿಚಿತ ಊರು ಬೆಂಗಳೂರು.ಅಲ್ಲಿಂದ ಸುಮಾರು 100 ಕಿಲೋಮಿಟೆರ್ ದೂರದಲ್ಲಿರುವ ಊರು ಮಧುಗಿರಿ. "ಧರೆಯೊಳೆಲ್ಲೆ ಇರಲಿ ನಾನು ಮರೆಯಲಾರೆ ಮಧುಗಿರಿ" ಎಂದು ಹೊಯ್ಸಳ ದೊರೆಗಳಿಂದ ಹೊಗಳಿಸಿಕೊಂಡ ಇದೇ ಮಧುಗಿರಿ ಯ ತೊಂಡೋಟಿ ಎಂಬ ಒಂದು ಕುಗ್ರಾಮದಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ ಇವರು ಅದೇ ಊರಿನಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣ ಮುಗಿಸಿ, ತುಮಕೂರು ಹಾಗು ಬೆಂಗಳೂರಿನಲ್ಲಿ ತಮ್ಮ ಉನ್ನತ ವಿದ್ಯಾಭ್ಯಾಸ ವನ್ನು ಪೂರೈಸಿದರು. ನಂತರ ಮಲೇಷಿಯಾದ ಕೌಲಲಮ್ಪುರದಲ್ಲಿ ಕಂಪ್ಯೂಟರ್ ಇಂಜಿನಿಯರ್ (ಇಂಜಿನ್ ಗೆ ನೀರು ಹಾಕುವ) ಕೆಲಸ ಮಾಡುತ್ತಿದ್ದಾರೆ. ಎಸ್. ಎಲ್ ಭೈರಪ್ಪ, ಬೇಂದ್ರೆ ಯವರ ಕನ್ನಡ ಸಾಹಿತ್ಯದ ಜೊತೆ ಜೊತೆಗೆ ಯಂಡಮೂರಿ, ದೇವುಡು ರವರ ತೆಲುಗು ಸಾಹಿತ್ಯಗಳನ್ನು ಓದುವ ಹವ್ಯಾಸ ಗಳನ್ನೂ ಇಟ್ಟುಕೊಂಡ ಇವರು ಕೆಲವು ಕವನ ಹಾಗು ಕತೆಗಳನ್ನು ಸಹ ಬರೆದಿದ್ದಾರೆ. ಇವರ "ನಾನು ನಾನೇನಾ" ಎಂಬ ಕಾದಂಬರಿ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಕನ್ನಡ ಚಿತ್ರೋದ್ಯಮದ ವಿಶಿಷ್ಟ ಸಂಗತಿಗಳನ್ನು ಪರಿಚಯಿಸಲೆಂಬ ಉದ್ದೇಶದಿಂದ ಚಿತ್ರೋದ್ಯಮ.ಕಾಂ ಎಂಬ ಈ ವೆಬ್ಸೈಟ್ ಅನ್ನು ತೆರೆದು ತನ್ಮೂಲಕ ಕನ್ನಡ ಚಿತ್ರೋದ್ಯಮಕ್ಕೆ ತನ್ನ ಅಳಿಲು ಸೇವೆಯನ್ನು ಸಲ್ಲಿಸುತ್ತಿದ್ದಾರೆ.

Leave a Reply