ಡಾ ರಾಜ್ ನುಡಿಮುತ್ತುಗಳು

“ನುಡಿದರೆ ಮುತ್ತಿನ ಹಾರದಂತಿರಬೇಕು, ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು, ನುಡಿದರೆ ಸ್ಪಟಿಕದ ಸಲಾಕೆಯಂತಿರಬೇಕು, ನುಡಿದರೆ ಲಿಂಗ ಮೆಚ್ಚಿ ಅಹುದೆನ್ನಬೇಕು, ನುಡಿಯೊಳಗಾಗಿ ನಡೆಯದಿದ್ದರೆ ಕೂಡಲ ಸಂಗಮ ದೇವನೆಂತೊಲಿವನಯ್ಯ…

ಅರೆ ಇವರೇನು ವಚನ ಹೇಳ್ತಿದಾರೆ ಅನ್ಕೊಂಡ್ರ ಈ ಮೇಲಿನ ಸಾಲುಗಳು “ಬಸವಣ್ಣ ” ರವರು ಬರೆದಿರೋದು ಇಲ್ಲಿ ಹೇಳೋಕೆ ಕಾರಣ ಅಣ್ಣಾವೃ ಮಾತನಾಡುತ್ತಿದ್ದರ ರೀತಿ, ಇಷ್ಟ ಬಂದ ಹಾಗೆ ಮಾತನಾಡದೆ ಮಾತನಾಡಿದರೆ ಅದರಲ್ಲಿ ತೂಕವಿರಬೇಕು, ಕೆಲಸಕ್ಕೆ ಬಾರದ ಮಾತುಗಳನ್ನಾಡಿ ವೃತ ಕಾಲಹರಣ ಮಾಡುವುದು ಇವರಿಗೆ ಇಷ್ಟವಿಲ್ಲ, ಶಿಸ್ತಿನ ಸಿಪಾಯಿ “ದೇವತಾ ಮನುಷ್ಯ” ಡಾ ರಾಜ್ ಕುಮಾರ್ ರವರು ಯಾವ ರೀತಿ ಮಾತನಾಡುವರು ಅನ್ನೋದಕ್ಕೆ ಈ ಕೆಳಗಿನ ಮಾಹಿತಿಗಳು ಸಾಕ್ಷಿ.

ಅರೆ ಇವರೇನು ವಚನ ಹೇಳ್ತಿದಾರೆ ಅನ್ಕೊಂಡ್ರ? ಈ ಮೇಲಿನ ಸಾಲುಗಳು “ಬಸವಣ್ಣ ” ರವರು ಬರೆದಿರೋದು ಇಲ್ಲಿ ಹೇಳೋಕೆ ಕಾರಣ ಅಣ್ಣಾವೃ ಮಾತನಾಡುತ್ತಿದ್ದರ ರೀತಿ, ಇಷ್ಟ ಬಂದ ಹಾಗೆ ಮಾತನಾಡದೆ ಮಾತನಾಡಿದರೆ ಅದರಲ್ಲಿ ತೂಕವಿರಬೇಕು, ಕೆಲಸಕ್ಕೆ ಬಾರದ ಮಾತುಗಳನ್ನಾಡಿ ವೃತ ಕಾಲಹರಣ ಮಾಡುವುದು ಇವರಿಗೆ ಇಷ್ಟವಿಲ್ಲ, ಶಿಸ್ತಿನ ಸಿಪಾಯಿ “ದೇವತಾ ಮನುಷ್ಯ”   ಡಾ ರಾಜ್ ಕುಮಾರ್ ರವರು ಯಾವ ರೀತಿ ಮಾತನಾಡುವರು ಅನ್ನೋದಕ್ಕೆ ಈ ಕೆಳಗಿನ ಮಾಹಿತಿಗಳು ಸಾಕ್ಷಿ. 
೧.ಗುಬ್ಬಿ ವೀರಣ್ಣ, ಸುಬ್ಬಯ್ಯನಾಯ್ಡು ಅವರ ಹಾಕಿಕೊಟ್ಟ ದಾರಿಯಲ್ಲಿ ಹೋಗುವುದು ಕೂಡ ನಮಗೆ ಸಾಧ್ಯವಾಗಲಿಲ್ಲ.. ಈ ಬಗೆಗಿನ ಅಶಾಂತಿ ನಮ್ಮ ಮನಸ್ಸಿನಲ್ಲಿ ಇದೆ.. ಆಗಿನವರ ಹಾಸ್ಯದಲ್ಲಿ ಅಶ್ಲೀಲತೆಯ ಸೋಂಕು ಇರಲಿಲ್ಲ ,ಜನರು ನಗು ತಡೆಯಲಾರದೆ ಚಿತ್ರಮಂದಿರದಿಂದ    ಹೊರಗೋಡಿಬಿಡುತ್ತಿದ್ದರು.., ಇಂತಹ ಮಹಾನ್ ಕಲಾವಿದರ ನೋಡಿ ಅನುಸರಿಸಿಕೊಂಡದ್ದೇ ನಮ್ಮ ಸ್ವಂತದ್ದು”(ತಮ್ಮ ಹಳೆಯ ನೆನಪುಗಳು)
೨.ನಾನು ರಾಜಕೀಯಕ್ಕೆ ಬರಬೇಕು ಭ್ರಷ್ಟರೆಲ್ಲ ಗಲ್ಲಿಗೇರಿಸಬೇಕು ಎಂದು ಅಂದುಕೊಂಡಿದ್ದು ನಿಜ, ಆದರೆ ಹಾಗೆ ಮಾಡಲು ಇದು ಪಾಕಿಸ್ತಾನವಲ್ಲ ಎಂಬ ಅರಿವು.. ಜ್ಞಾನೋದಯ ಏಕಕಾಲಕ್ಕೆ ಉಂಟಾಯಿತು. ಅಲ್ಲಿಂದ ರಾಜಕೀಯಕ್ಕೆ ಬರಬೇಕೆಂಬ ಆಸೆಗೆ ಸಮಾಧಿ ಕಟ್ಟಿದೆ. ಈ ರಾಜಕುಮಾರ ಕೇವಲ ಕಲಾ ಸೇವಕನಾಗಿರಬೇಕೆಂದು ತೀರ್ಮಾನಿಸಿದೆ,(ಎನ್.ಟಿ. ಆರ್ .ಪ್ರಶಸ್ತಿ ಸ್ವೀಕಾರದ ನಂತರ)
೩ .ಹೇಳಿಕೊಳ್ಳುವಂತಹ ಸೇವೆ ನನ್ನಿಂದ ಏನೂ ನಡೆದಿಲ್ಲ. ನಡೆದಿರುವುದು,ಈ ವೃತ್ತಿಯಲ್ಲಿನ ಎಲ್ಲರಿಂದ. ಎರಡು ಕೈ ಸೇರಿದರೆ ಚಪ್ಪಾಳೆ, ನಾವು ಅಭಿನಯಿಸುವರು, ನಮ್ಮಿಂದ ಕೆಲಸ ತೆಗೆದುಕೊಳ್ಳುವರು ನಿರ್ದೇಶಕರು ,ನಿರ್ದೇಶಕ ಚಿತ್ರದ ಸೂತ್ರದಾರ,,,” ಆಹ೯ ಎಂಬ ನಂಬಿಕೆ ಇರುವುದರಿಂದ ನಂಬಬೇಕಾಗುತ್ತದೆ ಇಲ್ಲ ಎಂದರೆ ನಿಮಗೆ ಬೆಲೆಕೊಟ್ಟ ಹಾಗಾಗಲ್ಲ.. ನಾನು ನಿಮ್ಮ ವಸ್ತು.. ಮಕ್ಕಳನ್ನು ನೋಡಿ ಆನಂದ ಪಡುವಂತೆ ನೀವು ನನ್ನ ನೋಡಿ ಆನಂದ ಪಡುತ್ತಿದ್ದೀರ… (ಪುಟ್ಟಣ್ಣನವರ ಜನ್ಮದಿನದ ಸಮಾರಂಭ.)

೪.ಅಭಿಮಾನಿಗಳೇ ನನ್ನ ಪಾಲಿನ ದೇವರು.. ಹಾಳೂರಿಗೆ ಉಳಿದವನೇ ಗೌಡ ಎಂಬಂತೆ ತಂದೆತಾಯಿಗಳಿಗೆ ಮಕ್ಕಳ ಆಟ ಪಾಠ ರುಚಿಸಿದಂತೆ.. 40 ವರ್ಷಗಳಿಂದ ನಿಮ್ಮ ರಾಜಕುಮಾರ್ ನಟನೆ ಅವತಾರ ನೋಡುತ್ತಲೂ ಬಂದಿರುವಿರಿ.”.ಡಾ. ರಾಜಕುಮಾರ  ರಸ್ತೆ” ಎಂದು ಹೆಸರು ಇಟ್ಟಿರುವಿರಿ ..ಆದರೆ ಕನ್ನಡ ಅಭಿಮಾನಿಗಳಲ್ಲಿ, ಹೃದಯಗಳಲ್ಲಿ ರಾಜ್ ರಸ್ತೆ ಪ್ರಾರಂಭವಾಗಿ 40 ವರ್ಷ ಆದರೂ ..ನನ್ನ ಅನುಭವಕ್ಕೆ ಬರದಂತೆ ಪ್ರತಿಯೊಂದು ವಿಚಿತ್ರವಾಗಿ ನಡೆಯುತ್ತಿದೆ.. ಅಪೇಕ್ಷೆ ಪಟ್ಟರೆ ಸಿಗುವುದಿಲ್ಲ ತನ್ನಷ್ಟಕ್ಕೆ ತಾನೇ ಬರಬೇಕು.. 
(ಬೆಂಗಳೂರು ಪೌರ ಸನ್ಮಾನದಲ್ಲಿ)..
೫.ಗುರುವಿನ ಅನುಗ್ರಹ ವಿಲ್ಲದೆ ಭಗವಂತನ ಸಾಕ್ಷಾತ್ಕಾರ ಅಸಾಧ್ಯ.. ಭಗವಂತನನ್ನು ಭಕ್ತ ಹುಡುಕಿಕೊಂಡು ಹೋಗಬೇಕು ..ಆದರೆ ಇಲ್ಲಿ ಭಗವಂತನೇ ಭಕ್ತನನ್ನು ಕರೆಸಿ ಗೌರವಿಸುತ್ತಿರುವುದು ವಿಚಿತ್ರ.. (ಬಾಳೆಹೊನ್ನೂರಿನಲ್ಲಿ ಕಲಾ ಕುಲ ತಿಲಕ ಪ್ರಶಸ್ತಿ ಸಮಾರಂಭದಲ್ಲಿ)
೬.ನಾವೆಲ್ಲ ಕುಣಿಯೋದನ್ನ ಇಷ್ಟಪಡುತ್ತೇವೆ. ಆದರೆ ಬೇರೆಯವರು ಕುಣಿಯುವುದನ್ನು ನೋಡಿ ಸಂತೋಷಪಡುವುದು ಕಲಿಯಬೇಕು. ನಾವೇ ಕುಣಿತ ಇದ್ದರೆ ಹೇಗೆ? ಬೇರೆಯವರು ಕುಣಿಯುವುದನ್ನು ನೋಡಿ ಎಷ್ಟು ಚೆನ್ನಾಗಿ ಕುಣಿತಾರಲ್ಲ  ಅಂತ ಧನ್ಯತಾ ಅನುಭವಿಸುವ ಅಭ್ಯಾಸವನ್ನು ಮಾಡಿಕೊಳ್ಳಬೇಕು. (ಶಬ್ದವೇದಿ ಚಿತ್ರದ ಚಿತ್ರೀಕರಣ ಸಮಯದಲ್ಲಿ)
೭.ಅಭಿನಯಿಸುವ ಆಸೆ ಈಗ ಹೆಚ್ಚಾಗುತ್ತಿದೆ.. ಬಹಳಷ್ಟು ಕಾಲ  ವ್ಯರ್ಥಹರಣ ಮಾಡಿದೆನೇನೋ ಅನಿಸುತ್ತಿದೆ..  ಈಗ ಅಭಿನಯಿಸುವ ಉತ್ಸಾಹ ಹೆಚ್ಚಿದೆ .ಈ ಆಸೆ ಮಣ್ಣಿಗೆ ಹೋಗುವ ತನಕ ಬಿಟ್ಟಿದ್ದಲ್ಲ..(70 ವರ್ಷ ತುಂಬಿದ ಸಂದರ್ಭ)

೮.ಅಭಿನಯ ಎಂದರೆ ಹೀಗೆ ಕುಳಿತುಕೊಂಡೇ ಮಾಡುವುದಿಲ್ಲ ..ಅದಕ್ಕೆ ಪಂಚೇಂದ್ರಿಯಗಳು ಕೆಲಸ ಮಾಡಬೇಕು .ಎದ್ದು ನಿಂತು ಓಡಾಡುತ್ತಾ ಅಂತಯ೯ದಲ್ಲಿ ಭಾವನೆಗಳಿಗೆ ಸ್ಪಂದಿಸಬೇಕು..ಚಿತ್ರಕಥೆ ಬಗ್ಗೆ ಹೇಳುತ್ತಾ, “ಜನ ತಗೋತಾರೆ ಅಂತ ಏನೇನನ್ನಲ್ಲ ಕೊಟ್ಟರಾಗದು.. ನಮಗೊಂದು ಜವಾಬ್ದಾರಿ ಇರಬೇಕು .ವೃತ್ತಿಗೆ ಅಪಚಾರವಾಗುವಂಥ ಕೆಲಸ ಮಾಡಬಾರದು.. ಹೊಟ್ಟೆಯ ಹಸಿವಿಗೆ ಅನ್ನ ಹೇಗೆ ಮುಖ್ಯವೋ, ಅಂತರಂಗದ ಹಸಿವಿಗೆ ಜ್ಞಾನ ಮುಖ್ಯ, ಮನುಷ್ಯನಿಗೆ ಅತೃಪ್ತಿ ಇರಲೇಬೇಕು ,ಒಳಗಡೆ ಯಿರುವುದನ್ನು ಪತ್ತೆ ಮಾಡುವ ಶಕ್ತಿಯನ್ನು ರೂಢಿಸಿಕೊಳ್ಳಬೇಕು, ಮುಖ್ಯವಾಗಿ ಸೂಕ್ತವಾದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಅನುಕೂಲವಾಗುವಂಥ ಆತ್ಮವಿಮರ್ಶೆಗೆ ನಾವೆಲ್ಲ ಒಪ್ಪಿಕೊಳ್ಳಬೇಕು..(ಅಭಿ ,ಚಿತ್ರೀಕರಣ ಪ್ರಾರಂಭದಲ್ಲಿ)
೯.”ಜೀವನವೇ ಅಭಿನಯ. ಓಡಿಸುವ ಚಾಲಕನಿಲ್ಲದಿದ್ದರೆ ಅಭಿನಯ ಬಂಡಿ ಮುಂದಕ್ಕೆ ಚಲಿಸುವುದಿಲ್ಲ.. ಚಾಲಕನನ್ನು ಹುಡುಕುವುದೇ ಕಷ್ಟ. ಕಳೆದುಕೊಂಡಾಗಲೇ ಕಳೆದುಕೊಂಡವರ ಬೆಲೆ ಗೊತ್ತಾಗುವುದು..ಹಾಗೆ ಕಳೆದುಕೊಂಡವನನ್ನು, ನಾವೇ ಅರ್ಥಮಾಡಿಕೊಳ್ಳಲಿಲ್ಲವವೋ , ಏನೋ ನಮ್ಮ ಹಸಿವಿಗೆ ತಕ್ಕ ಆಹಾರ ಆತನಲ್ಲಿತ್ತು.. ಉದಯಶಂಕರ್ ಇದ್ದಿದ್ದರೆ… (ಚಿ. ಉದಯಶಂಕರ್ ನೆನಪಿನಲ್ಲಿ)..
೧೦.”ಸಂಪೂರ್ಣ ಪ್ರೀತಿ-ವಾತ್ಸಲ್ಯ ನನ್ನ ಮೇಲೆ ಧಾರೆ ಎರೆದಿದ್ಧೀರಿ.. ಪ್ರತ್ಯಕ್ಷ ದೇವರನ್ನು ಕಾಣಲು ಸಾಧ್ಯವಿಲ್ಲ.. ನಿಮ್ಮ ಸಂತಸ ತುಂಬಿದ ಮುಖದಲ್ಲಿ ವಾತ್ಸಲ್ಯದಲ್ಲಿ ನಾನು ದೇವರನ್ನು ಕಂಡಿದ್ದೇನೆ, ದೇಹ-ಮನಸ್ಸು ಪ್ರೀತಿ ಎಲ್ಲವೂ ನಿಮಗೆ ಅರ್ಪಿತ ಇದಕ್ಕಿಂತ ಹೆಚ್ಚು ಹೇಳುವುದಕ್ಕೆ ಶಕ್ತಿ ಸಾಲದು”

ಶ್ರೀನಿವಾಸ್ ಎ

ಶ್ರೀನಿವಾಸ್ ಎ

ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು. ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ. ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏

Leave a Reply