ಒಂಭತ್ತು ಬಾರಿ ಅತ್ಯತ್ತಮ ನಟ ರಾಜ್ಯ ಪ್ರಶಸ್ತಿ ಪಡೆದ ಏಕೈಕ ನಟ ಡಾ: ರಾಜ್
ಡಾ: ರಾಜ್ ಕುಮಾರ್ ಕನ್ನಡ ಚಿತ್ರ ಜಗತ್ತಿನಲ್ಲಿ ತಮ್ಮ ಅಭಿನಯ ಸಾಮರ್ಥ್ಯದಿಂದ ಒಂಭತ್ತು ಬಾರಿ ಅತ್ಯತ್ತಮ ನಟ ಪ್ರಶಸ್ತಿಗೆ ಭಾಜನರಾಗಿದ್ದ ಏಕೈಕ ನಟ.
1) ಮೊದಲ ಬಾರಿ ಅತ್ಯತ್ತಮ ನಟ ಗೌವರ : ಸರಕಾರ ಪೂರ್ಣ ಪ್ರಮಾಣದಲ್ಲಿ 1967-68 ರಲ್ಲಿ ಪ್ರಶಸ್ತಿ ನೀಡುವ ಪರಿಪಾಠವನ್ನು ಆರಂಭಿಸಿದಾಗ, ಮೊದಲ ಬಾರಿಗೆ ಅತ್ಯುತ್ತಮ ನಟನೆಂಬ ಗೌರವಕ್ಕೆ ಪಾತ್ರರಾದವರು ಡಾ: ರಾಜ್ ಕುಮಾರ್. ಬಂಗಾರದ ಹೂವು ಚಿತ್ರದ ಅಭಿನಯಕ್ಕೆ ಮೊದಲ ಬಾರಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದ ರಾಜ್ ಕುಮಾರ್ ಇಂತಹ ಪ್ರಶಸ್ತಿ ಪಡೆದ ಮೊದಲಿಗರೆಂಬ ಹೆಗ್ಗೆಳಿಕೆಗೆ ಭಾಜನರಾದರು.
2) ಕುಲಗೌರವಕ್ಕೆ ಎರಡನೇ ಬಾರಿ : 1971-72 ರಲ್ಲಿ ಪ್ರಥಮ ಬಾರಿಗೆ ತಂದೆ, ಮಗ, ಮೊಮ್ಮಗ ಹೀಗೆ ಮೂರು ಪಾತ್ರಗಳಲ್ಲಿ ಅತ್ಯುತ್ತಮವಾಗಿ ಅಭಿನಯಿಸಿ ಚಿತ್ರ ರಸಿಕರ ಮನಗೆದ್ದ ರಾಜ್ ಕುಮಾರ್ ರವರು ಈ ಚಿತ್ರಕ್ಕೆ ಎರಡನೇ ಬಾರಿ ಅತ್ಯುತ್ತಮ ನಟ ಪ್ರಶಸ್ತಿಗೆ ಪುರಸ್ಕ್ರತರಾದರು.
3) ಭಕ್ತ ಕುಂಬಾರ ಅಭಿನಯಕ್ಕೆ ಮೂರನೇ ಬಾರಿ : ಭಕ್ತ ಕುಂಬಾರ ಚಿತ್ರದಲ್ಲಿ ಭಾವಪೂರ್ಣ ಅಭಿನಯಕ್ಕಾಗಿ 1974-75 ರಲ್ಲಿ ಮೂರನೇ ಬಾರಿ ಡಾ: ರಾಜ್ ರವರು ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದುಕೊಂಡರು.
4) ಬಬ್ರುವಾಹನ ಚಿತ್ರಕ್ಕೆ ನಾಲ್ಕನೆ ಬಾರಿ : ಹುಣಸೂರು ಕೃಷ್ಣಮೂರ್ತಿ ನಿರ್ದೇಶನದಲ್ಲಿ ದ್ವಿಪಾತ್ರಗಳಲ್ಲಿ ಬಬ್ರುವಾಹನ ಚಿತ್ರದಲ್ಲಿ ಅಮೋಘವಾಗಿ ಅಭಿನಯಿಸಿದ ಡಾ: ರಾಜ್ ರವರು ನಾಲ್ಕನೆ ಬಾರಿಗೆ 1976-77 ನೇ ಸಾಲಿನ ರಾಜ್ಯ ಸರಕಾರದಿಂದ ಅತ್ಯುತ್ತಮ ನಾಯಕ ನಟ ಪ್ರಶಸ್ತಿಯನ್ನು ಬಾಚಿಕೊಂಡರು.
5) ಹೊಸ ಬೆಳಕು ಚಿತ್ರಕ್ಕೆ ಐದನೇ ಬಾರಿ : ವಾಣಿ ರವರ ಕಾದಂಬರಿ ಆಧಾರಿಸಿದ ಚಿತ್ರ ಹೊಸ ಬೆಳಕು ಚಿತ್ರದ ಅಭಿನಯಕ್ಕೆ ಡಾ: ರಾಜ್ ರವರು ಐದನೆ ಬಾರಿಗೆ ಶ್ರೇಷ್ಠ ನಾಯಕ ನಟನಾಗಿ ಪ್ರಶಸ್ತಿಯನ್ನು 1981-82 ರಲ್ಲಿ ತಮ್ಮದಾಗಿಸಿಕೊಂಡರು.
6) ಹಾಲು ಜೇನು ಚಿತ್ರಕ್ಕೆ ಆರನೇಯ ಬಾರಿ : : ಸಿಂಗೀತಂ ಶ್ರೀನಿವಾಸ ರಾವ್ ರವರ ಹಾಲುಜೇನು ಚಿತ್ರದಲ್ಲಿ ಡಾ: ರಾಜ್ ರವರ ಭಾವಪೂರ್ಣ ಅಭಿನಯಕ್ಕಾಗಿ 1982-83 ಸಾಲಿನಲ್ಲಿ ಆರನೆಯ ಬಾರಿಗೆ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದುಕೊಂಡರು.
ಮುಂದುವರಿಯುವುದು