ಕಳೆದ ಭಾನುವಾರ ಸಂಜೆ ಸರಿಸುಮಾರ 4 ಘಂಟೆ ಸಮಯಕ್ಕೆ ಕನ್ನಡದ ಸ್ಟಾರ್ ನಟಿ, ದಿಂಪಲ್ ಕ್ವೀನ್ ರಚಿತಾ ರಾಮ್ ಅವರನ್ನ ಭೇಟಿ ಮಾಡಲು ಅವರ ಮನೆಯ ಬಳಿ ಹೋಗಿದ್ವಿ.. ಅವತ್ತಿನ ದಿನ ಅವರ ಮನೆಯಲ್ಲೇನೋ ವಿಶೇಷ ಪೂಜೆ ಹಮ್ಮಿಕೊಂಡಿದ್ರು ಅನ್ಸುತ್ತೆ, ಮನೆಯ ಮುಂದೆ ದೊಡ್ಡ ಪೆಂಡಾಲ್ ಹಾಕಸಿದ್ರು ನನ್ನಂತೆಯೇ ಹಲವಾರು ಅಭಿಮಾನಿಗಳು ರಚಿತಾರನ್ನ ನೋಡಲು ಕಾಯ್ತಿದ್ರು. ಅಭಿಮಾಣಿಗಳನ್ನ ಮಾತನಡುಸಿ ಅವರಿಗೆ ಫೋಟೋ ಕೊಡಲು ರಚಿತಾ ರಾಮ್ ತಯಾರಾಗಿ ಬಂದರು. ಅಲ್ಲಿ ನೆರೆದಿದ್ದ ಅಷ್ಟು ಜನರ ಜೊತೆಗೆ ಫೋಟೋ ಕ್ಲಿಕ್ಕಿಸಿಕೊಳ್ಳುವುದರ ಜೊತೆಗೆ ಸತ್ಯನಾರಾಯಣ ಸ್ವಾಮಿ ಪೂಜಿಗೆ ಮಾಡಿದ್ದ ಪ್ರಸಾದವನ್ನು ಸಹ ಒಂದು ಕಪ್ಪಿನಲ್ಲಿ ಹಾಕಿ ಅವರ ಕೈಯ್ಯಾರೆ ಹಂಚಿದ್ರು!! ಇದು ಆಕೆಯ ಔದಾರ್ಯ – ದೊಡ್ಡ ಗುಣವೇ ಹೌದು..
ಜನ ಕಡಿಮೆಯಾಗುತ್ತಿದ್ದ ಹಾಗೆ, ಸ್ವಲ್ಪ ಸಮಯದ ಬಳಿಕ ನಾನು ನನ್ನ ಮಿತ್ರರು ಹೋಗಿ ಮಾತಾಡ್ಸಿದ್ವಿ. ಹೋದ ತಕ್ಷಣ ನಮ್ಮ ಕೈಗೂ ಒಂದು ಪ್ರಸಾದದ ಕಪ್ ಕೊಟ್ರು,
ನಂತರ ನನ್ನ ಪರಿಚಯ ಮಾಡಿಕೊಂಡು ಒಂದೆರಡು(ಸ್ವಲ್ಪ ಬ್ಯುಸಿ ಇದ್ದ ಕಾರಣ) ಪ್ರಶ್ನೆಗಳನ್ನ ಕೇಳಿದೆ.. ಬಹಳ ಉತ್ಸುಕರಾಗಿಯೇ ಉತ್ತರ ನೀಡಿದ್ರು…
ನಾ ಕೇಳಿದೆ ಪ್ರಶ್ನೆ:-
ನೀವು ಹಲವಾರು ಸಿನಿಮಾಗಳಲ್ಲಿ ನಾಯಕಿಯಾಗಿ ಅಭಿನಯಿಸಿ ಯಶಸ್ವಿ ನಟಿ ಅನ್ನೋ ಹಂತಕ್ಕೆ ಬೆಳದಿದ್ದೀರ, ನೀವು ಮುಂದೊಮ್ಮೆ ಯಾವುದಾದರು ಹಿರಿಯ ನಟಿಯ ಆತ್ಮಚರಿತ್ರೆಯಲ್ಲಿ (BIOPIC) ನಟಿಸುವುದಾದ್ರೆ ನಿಮ್ಮ ಆಯ್ಕೆ ಯಾರಾಗಿರುತ್ತಾರೆ?
*ನಗುತ್ತಲೇ ಹೇಳಿದ್ರು, ನನಗೆ ಬಹಳಷ್ಟು ಕಲಾವಿದರ ಮೇಲೆ ಅಪಾರವಾದ ಗೌರವ ಮತ್ತು ಒಲವಿದೆ ಅದರಲ್ಲಿ ಪ್ರಮುಖವಾಗಿ ನಾನು ” ಬಿ. ಸರೋಜಾದೇವಿ ಅವ್ರು, ಮಾಲಾಶ್ರೀ ಯಾಗಿ ಅಥವಾ ಮಿನುಗುತಾರೆ ಕಲ್ಪನಾ ಆಗಿ ನಟಿಸೋಕೆ ಆಸೆ ಅಂದ್ರು ..
ನೀವು ಅಭಿನಯಿಸಿದ ಯಾವ ಸಿನಿಮಾ ನಿಮಗೆ ಬಹಳ ಹತ್ತಿರವಾಗಿದೆ?
- ನಾನು ನಟಿಸಿದ ಎಲ್ಲಾ ಸಿನಿಮಾಗಳು ನನಗೆ ನನ್ನ ಮನಸ್ಸಿಗೆ ಹತ್ತಿರವಾದದ್ದೇ..
ಚಿತ್ರೋದ್ಯಮ.ಕಾಂ ಹೊರತಂದಿರುವ “ಚಿತ್ರೋದ್ಯಮದ ಚಿತ್ತರಗಳು” ಭಾಗ 1 ಪುಸ್ತಕವನ್ನು ಅವ್ರಿಗೆ ನೀಡಿದೆ, ತೊಗೊಂಡು ಶುಭವಾಗಲಿ ಎಂದು ಹಾರೈಸಿದ್ರು.. ನಿಮ್ಮ ಮುಂಬರುವ ಸಿನಿಮಾಗಳಿಗೆ ಶುಭವಾಗಲಿ .. ಆಲ್ ದ ಬೆಸ್ಟ್ ಅಂತ ಹೇಳಿ ಬಂದ್ವಿ..
ನನ್ನ ದಿಂಪಲ್ ಕ್ವೀನ್ ರಚಿತಾ ರಾಮ್ ಅವರ ಮನೆಗೆ ಕರೆದೊಯ್ದ ನನ್ನ ಗೆಳಯ ಅಂಕುಶ ಅವರಿಗೆ ಧನ್ಯಾವದ…