ಕನ್ನಡ ಚಿತ್ರರಂಗದಲ್ಲಿ ಪೋಷಕ ನಟನಾಗಿ ಪಯಣ ಪ್ರಾರಂಭಿಸಿದ ನೀನಾಸಂ ಸತೀಶ್, ಪೂರ್ಣಪ್ರಮಾಣದ ನಾಯಕನಾದ್ರು, ನಿರ್ಮಾಣಕ್ಕು ಕೈ ಹಾಕಿ ಯಶಸ್ಸು ಕಂಡು ಇದೀಗ ಮತ್ತೊಂದು ಮೆಟ್ಟಿಲನ್ನ ಎರಲಿದ್ದಾರೆ. ತಮಿಳನ ಖ್ಯಾತ ನಟ ನಿರ್ದೇಶಕರಾದ ಸಸಿಕುಮಾರ ಜೊತೆಗೆ “ಪಗೈವನಕ್ಕೂ ಅರುಳ್ ವೈ” ಅನ್ನೋ ಸಿನಿಮಾದಲ್ಲಿ ನಟಿಸಲಿದ್ದಾರೆ. ಕನ್ನಡದಲ್ಲಿ ಸೂಪರ್ ಹಿಟ್ ಆದ ಹುಡುಗರು, ರಾಜಹುಲಿ, ಯಾರೇ ಕೂಗಡಲಿ ಸಿನಿಮಾಗಳ ಮೂಲ ತಮಿಳು ಭಾಷೆಯದಾಗಿದ್ದು ಅವುಗಳಿಲ್ಲ ಸಸಿಕುಮಾರರೆ ನಾಯಕರು. ಸಸಿಕುಮಾರ ಅವರ ಸಿನಿಮಾಗಳ ಶೀರ್ಷಿಕೆ ಮತ್ತು ಕಥಾವಸ್ತುಗಳು ವಿಭಿನ್ನವಾಗಿದ್ದು, ಮನಸ್ಸಿಗೆ ನಾಟುವಂತ ಸೂಕ್ಷ್ಮ ಅಂಶಗಳೇ ಹೆಚ್ಚು…. ಅಂತಹವರ ಜೊತೆಗೂಡಿ ಸತೀಶ್ ಮಹತ್ವ ಮತ್ತು ತೂಕಬದ್ಧವಾದ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಅವರೊಂದಿಗಿನ ಒಡನಾಟ ಮತ್ತು ಕೆಲಸದ ಆನುಭವ ಬಹಳ ಸಂತಸ ತಂದಿರುವುದಾಗಿ ಸತೀಶ್ ಹಂಚಿಕೊಂಡಿದ್ದಾರೆ. ತಮಿಳು ನಾಡಿನಲ್ಲಿ ನನಗೆ ಹಿರಿಯ ಸೋದರ ಸಿಕ್ಕಿದ್ದಾರೆ ಅನ್ನೋದನ್ನ ಕೂಡ ತಿಳಿಸಿದ್ರು ನಟ ನೀನಾಸಂ ಸತೀಶ್. ಸಿನಿಮಾದ ಬಹುಪಾಲಿನ ಶೂಟಿಂಗ್ ಮುಗಿದಿದ್ದು ಸಧ್ಯಕ್ಕೆ ಕೊರೊನಾದ ಕಾರಣವಾಗಿ ಸ್ತಬ್ಧಗೊಂಡಿದೆ.
Related Posts
“ನೀನಾ ಭಗವಂತ -ನಾದ ಬ್ರಹ್ಮ”
ಗಂಗರಾಜು ಗೋವಿಂದರಾಜು “ಹಂಸಲೇಕ” ಅವರ ಮೂಲ ನಾಮ,1951 ಜೂನ್ 23 ರಂದು ಮ0ಡ್ಯಾದಲ್ಲಿ ಜನಿಸಿದರು. ವಿದ್ಯಾರ್ಥಿ ಆಗಿರುವ ಸಮಯದಿಂದಲು ಕವಿತೆ, ಹಾಡುಗಳನ್ನ ಬರೆಯುವ ಅಭ್ಯಾಸವಿತ್ತು, swan ಕಂಪನಿಯ…
ಕಬ್ಜ ಟೀಸರ್ ರಿಲೀಸ್
ರಿಯಲ್ ಸ್ಟಾರ್ ಉಪೇಂದ್ರ (Upendra) ಹಾಗು ಕಿಚ್ಚ ಸುದೀಪ್ (Kiccha sudeep) ಕಾಂಬಿನೇಶನ್ ನಲ್ಲಿ ಮೂಡಿಬರುತ್ತಿರುವ ಹೊಸ ಸಿನಿಮಾ ‘ಕಬ್ಜ’ (Kabza kannada movie) ಟೀಸರ್ ಸ್ಯಾಂಡಲ್ವುಡ್…
ಎಸ್. ವಿ. ರಾಜೇಂದ್ರ ಸಿಂಗ್ ಬಾಬುರವರಿಗೆ ಮಾತೃವಿಯೋಗ
ನಿರ್ದೇಶಕ ಎಸ್ವಿ ರಾಜೇಂದ್ರ ಸಿಂಗ್ ಬಾಬು ಅವರ ತಾಯಿ ಹಿರಿಯ ಕಲಾವಿದೆ ಪ್ರತಿಮಾ ದೇವಿ ಬೆಂಗಳೂರಿನ ಮನೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ ೮೮ ವರ್ಷ ವಯಸ್ಸಾಗಿತ್ತು. ಅವರ ಅಂತ್ಯ…