ತುಪ್ಪದ ಬೆಡಗಿಗೆ ಜಾಮೀನು..

Ragini Dwivedi

ಡ್ರಗ್ಸ್ ಮತ್ತು ಮಾದಕ ದ್ರವ್ಯಗಳ ವಹಿವಾಟಿನ ನಂಟಿರುವುದಾಗಿ NDPS ಆಕ್ಟ್ ನ ಅಡಿಯಲ್ಲಿ ನಟಿ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿಯನ್ನ ಸೆಪ್ಟೆಂಬರ್ 4 ತಾರಿಕು NCB ಪೊಲೀಸರು ರಾಗಿಣಿಯನ್ನು ಯಲಹಂಕದಲ್ಲಿರುವ ಅವರ ಅಪಾರ್ಟ್ಮೆಂಟ್ ನಿಂದ ಅರೆಸ್ಟ್ ಮಾಡಿ, ಸಿಕ್ಕ ವಸ್ತು, ವಿಷಯ ಧಾಖಲೆಗಳನ್ನ ವಶಪಡಿಸಿಕೊಳ್ಳಲಾಯಿತು. ನವಂಬರ್ 4ನೆ ತಾರಿಕು ಕರ್ನಾಟಕದ ಉಚ್ಚ ನ್ಯಾಯಾಲಯ ರಾಗಿಣಿಗೆ ಯಾವುದೇ ರೀತಿಯಾದ ಬೇಲ್ ಕೊಡಲು ನಿರಾಕರಿಸಿ ಆಕೆಯನ್ನ ಹೆಚ್ಚಿನ ವಿಚಾರಣೆಗಾಗಿ ಪೋಲೀಸರ ವಶದಲ್ಲೇ ಇರಿಸಿಕೊಳ್ಳಲು ಆದೇಶ ಹೊರಡಿಸಿತು. ತದನಂತರ ದೆಹಲಿಯ ಸುಪ್ರೀಂ ಕೋರ್ಟ್ ನಲ್ಲಿ ಬೇಲಿಗಾಗಿ ಅರ್ಜಿಯನ್ನ ಸಲ್ಲಿಸಿ 100 ದಿನಗಳ ಬಳಿಕ ತುಪ್ಪದ ಹುಡುಗಿ ರಾಗಿಣಿ ಜೈಲಿನಿಂದ ಹೊರಬರಲು ಸಾಧ್ಯವಾಗಿದೆ. ಸುಪ್ರೀಂ ಕೋರ್ಟ್ ನ ಈ ಆದೇಶದಿಂದಾಗಿ ಕಡೆಗೂ ನೂರು ದಿನಗಳ ಬಳಿಕ ತುಪ್ಪದ ಬೆಡಗಿದೆ ತಾತ್ಕಾಲಿಕವಾಗಿ ನಿರಾಳವಾಗಿದೆ. ರಾಗಿಣಿಯ ಜೊತೆಗೆ ಅವರ ಗೆಳೆಯ ಶಿವಪ್ರಕಾಶ್ ಗೂ ಕೂಡ ಜಾಮೀನು ಮಂಜೂರಾಗಿದೆ.

P. Ghanashyam

P. Ghanashyam

ಘನಶ್ಯಾಮ್ - ಪತ್ರಿಕೋದ್ಯಮ ವಿದ್ಯಾರ್ಥಿ. ಸಿನಿಮಾ ರಂಗದ ಬಗ್ಗೆ ಬಹಳ ಒಲವು. ಅದರಲ್ಲೂ ಕನ್ನಡ ಚಿತ್ರರಂಗದ ಬಗ್ಗೆ ತುಸು ಹೆಚ್ಚೇ ಅಭಿಮಾನ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮ.ಕಾಂ ನ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಘನಶ್ಯಾಮ್ ಚಿತ್ರೋದ್ಯಮ.ಕಾಂ ನ ಲೇಖಕರೆಂಬುವುದಕ್ಕಿಂತ ಒಂದರ್ಥದಲ್ಲಿ ಸಂಪಾದಕರೇ ಎಂದರೂ ತಪ್ಪಿಲ್ಲ. ಇತರ ಲೇಖಕರ ಲೇಖನಗಳನ್ನು ಪರಿಶೀಲಿಸಿ, ಪಬ್ಲಿಷ್ ಮಾಡುವುದು, ಚಿತ್ರರಂಗದ ತಂಡಗಳ ಜೊತೆ ಸಂದರ್ಶನ ಮಾಡುವುದು... ಇತ್ಯಾದಿ ಎಲ್ಲದರಲ್ಲೂ ಚಿತ್ರೋದ್ಯಮ.ಕಾಂ ತಂಡದ ಬಹು ಮುಖ್ಯ ಸದಸ್ಯ. ತೀಕ್ಷ್ಣ ನೇತ್ರ ಎಂಬ ಹೆಸರಲ್ಲೂ ಕೆಲವು ಲೇಖನಗಳನ್ನು ಬರೆದಿದ್ದಾರೆ, ಬರೆಯಲಿದ್ದಾರೆ. ಘನಶ್ಯಾಮ್ ರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply