ಅಂಜದ ಗಂಡು , ಹಳ್ಳಿ ಮೇಷ್ಟ್ರು, ಬೆಂಕಿಯ ಬಲೆ, ಆನಂದ ಜ್ಯೋತಿ, ಕಲ್ಯಾಣ ರೇಖೆ, ಜಿಮ್ಮಿ ಗಲ್ಲು, ಖದೀಮ ಕಳ್ಳರು, ಸಾಹಸ ಸಿಂಹ, ಪಾಯಿಂಟ್ ಪರಿಮಳ,ಆರದ ಗಾಯ, ಆಟೋ ರಾಜ, ಹೊಸ ತೀಪು೯, ನಂಜುಂಡಿ ಕಲ್ಯಾಣ ಇನ್ನೂ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.
ಇವರು ಪೋಷಕ ನಟರಾಗಿ ಜನಮನ್ನಣೆ ಗಳಿಸಿದ ಚಿತ್ರಗಳು ಸಿಪಾಯಿ ರಾಮು, ಗಿರಿಕನ್ಯೆ, ಭಾಗ್ಯವಂತರು.
ಇವರ ಮಡದಿ ಮೀನಾ ತೂಗುದೀಪ, ಮಕ್ಕಳು ನಿಮಗೆಲ್ಲರಿಗೂ ತಿಳಿದ ಹಾಗೆ ನಟ ಚಾಲೆಂಜಿಂಗ್ ಸ್ಟಾರ್ ದಶ೯ನ್ , ನಿದೇ೯ಶಕ ದಿನಕರ್ ತೂಗುದೀಪ, ಮಗಳು ದಿವ್ಯ ತೂಗುದೀಪ.
ಸಂಸಾರದ ಜವಾಬ್ದಾರಿ ದಶ೯ನ್ ಮತ್ತು ದಿನಕರ್ ತೂಗುದೀಪ ಯವರು ನೋಡಿಕೊಂಡು ಚಿತ್ರರಂಗ ಚಟುವಟಿಕೆಯಲ್ಲಿ ನಿರತರು, ದಶ೯ನ್ ಮಡದಿ ವಿಜಯಲಕ್ಷ್ಮಿ ಪ್ರೀತಿಸಿ ಮದುವೆಯಾಗಿ ವಿನೀಶ್ ಮಗ ಜೊತೆ ಸುಖೀ ಜೀವನ ಮಾಡುತ್ತಿದ್ದಾರೆ.
ತೂಗುದೀಪ ರವರು ಆಗಿನ ಖಳನಟರಾದ ವಜ್ರಮುನಿ, ದೊಡ್ಡಣ್ಣ, ಧಿರೇಂದ್ರ ಗೋಪಾಲ್ ರವರ ಸಮಕಾಲೀನರು. ಜೊತೆಯಲ್ಲಿ ತೆರೆ ಹಂಚಿಕೊಂಡಿದ್ದಾರೆ.
ತೂಗುದೀಪ ಅಂದರೆ ಎಂದೂ ನಿಲ್ಲದೆ ನಿರಂತರವಾಗಿ ಕಾಪಾಡುವ,ಮಾಗ೯ದಶ೯ನ ನೀಡುವ ದೀಪ, ಈಗ ಈ ತೂಗುದೀಪ ಸಂಸ್ಥೆಯನ್ನು ದಶ೯ನ್ ಮತ್ತು ಅವರ ತಾಯಿ ನೋಡಿಕೊಳ್ಳುತ್ತಿದ್ದಾರೆ, ಬಣ್ಣದ ಬದುಕಿನ ಹಲವಾರು ಕಷ್ಟಗಳನ್ನು ತೂಗುದೀಪ ರವರು ಅನುಭವಿಸಿದ್ದಾರೆ, ಚಿತ್ರರಂಗದಲ್ಲಿ ನೆಲೆಯೂರಲು ತುಂಬಾ ಶ್ರಮ ವಹಿಸಿದ್ದಾರೆ, ನಿಜಕ್ಕೂ ಕಲಾವಿದರು ನೋಡೋಕೆ ಬಣ್ಣ ಬಣ್ಣದ ಹಾಗೆ, ಚೆನ್ನಾಗಿ ಬಟ್ಟೆ ಹಾಕಿಕೊಂಡು ಶೋಕಿ ಮಾಡ್ತಾರೆ ಅಂದುಕೊಳ್ಳುವವರಿಗೆ ಇದು ಕಿವಿ ಮಾತು, ತೆರೆಯ ಮೇಲೆ ಚಿತ್ರೀಕರಣದಲ್ಲಿ ತೋರಿಸುವ ಆ ಚಿತ್ರಣ ನಿಜ ಜೀವನದಲ್ಲಿ ಕಾಣುವುದು ತುಂಬಾನೇ ವಿರಳ.
ಫೈಟಿಂಗ್ ಸೀನ್ ಗಳಲ್ಲಿ ಎಷ್ಟೋ ಸಲ ನಿಜವಾಗಿ ಏಟು ತಿಂದಿರುವುದು, ಆಯಾ ತಪ್ಪಿ ಬೀಳುವುದು, ಗಾಯ ಆಗುವುದು, ತುಂಬಾ ನೋವಾದರೂ ಕುಟುಂಬ ನಡೆಸುವುದಕ್ಕೆ ತಮ್ಮ ತ್ಯಾಗವನ್ನು ಮಾಡಬೇಕಾಗುವ ಸಂದಭ೯ಗಳು ಉಂಟು, ಖಳನಾಯಕರಿಗೂ ಕೂಡ ಮನಸ್ಸಿದೆ, ಅವರು ಎಲ್ಲರಂತೆ ಎಂದು ನಾವು ಅರಿತುಕೊಳ್ಳಬೇಕು ಅಲ್ಲವೇ….
ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಮತ್ತೊಮ್ಮೆ ಹುಟ್ಟಿ ಬರಲಿ ಎಂದು ಆಶಿಸೋಣ.