ಕನ್ನಡಿಗರ ಹೃದಯವನ್ನು ಗೆದ್ದ ಚಾಲೆಂಜಿಂಗ್ ಸ್ಟಾರ್ ರವರ ತಂದೆ, ತೂಗುದೀಪ ಎಂದೇ ಹೆಸರಾದ ತಮ್ಮ ವಿಶಿಷ್ಟವಾದ ಮಾತಿನ ಮೂಲಕ ಮನೆ ಮಾತಾದ ಕನ್ನಡ ಚಿತ್ರರಂಗದ ಪ್ರಖ್ಯಾತ ಖಳನಟರು ತೂಗುದೀಪ ಶ್ರೀನಿವಾಸ್.
ಇವರು ಮುನಿಸ್ವಾಮಿ ಮತ್ತು ಪಾವ೯ತಮ್ಮ ದಂಪತಿಗೆ ಎಂಟನೇ ಮಗ, ತಮ್ಮ 8ನೇ ವಯಸ್ಸಿನಲ್ಲಿ ತಂದೆತಾಯಿ ಕಳೆದುಕೊಂಡು ಬಾಲ್ಯದ ಜೀವನ ಎಲ್ಲರ ರೀತಿ ಇರಲಿಲ್ಲ. ಇವರಿಗೆ ನಾಟಕ ಮತ್ತು ಸಿನಿಮಾ ಗೀಳು ಶುರುವಾದರಿಂದ ಶಾಲಾ ಕಾಲೇಜುಗಳಲ್ಲಿ ನಾಟಕವಾಡುತ್ತಿದ್ದರು, ಇವರು ರಂಗಭೂಮಿ ಕಲಾವಿದ ಎಂ. ಪಿ ಶಂಕರ್ ರವರ ಕಣ್ಣಿಗೆ ಬಿದ್ದದ್ದು ಕನ್ನಡ ಚಿತ್ರರಂಗಕ್ಕೆ ಒಳ್ಳೆಯ ಖಳನಟರನ್ನು ಪರಿಚಯಿಸಿದರು, ಇವರ ಸತತ ನಾಟಕಗಳನ್ನು ಮಾಡುವ ಸಲುವಾಗಿ ತಾವು ಓದುತ್ತಿದ್ದ ಮೈಸೂರು ಸೆಂಟ್ ಫಿಲೋಮಿನ ಕಾಲೇಜಿನಲ್ಲಿ ಬ್ಯಾಚುಲರ್ ಆಫ್ ಸೈನ್ಸ್ ಅನ್ನು ನಿಲ್ಲಿಸಿ ತಮ್ಮ ರಂಗಭೂಮಿ ನಾಟಕಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಿದರು.
ಕೆ ಎಸ್ ಎಲ್ ಸ್ವಾಮಿರವರ “ತೂಗುದೀಪ ” ಚಿತ್ರದಲ್ಲಿ ಅಧ್ಭುತವಾಗಿ ನಟಿಸಿದ ಪಾತ್ರ ದಿಂದ ಮುಂದೆ ಇವರ ಹೆಸರು “ತೂಗುದೀಪ ಶ್ರೀನಿವಾಸ್ ” ಆದರು, ನಂತರ ಕನ್ನಡ ಚಿತ್ರರಂಗದಲ್ಲಿ ಬಿಡುವಿಲ್ಲದೆ ನಟಿಸಿದರು.
ಇವರು ಚಿತ್ರರಂಗದಲ್ಲಿ ವಿಶಿಷ್ಟ ನಟನೆಯಿಂದ ಜನಗಳ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದ್ದಾರೆ, ಅವರ ಮಾತನಾಡುವ ಶೈಲಿ ಕೂಡ ಈಗ ಅವರ ಮಗನಲ್ಲಿ ಕಾಣಬಹುದು. ಹಳೇ ಚಿತ್ರಗಳು ನೋಡುತ್ತಿದ್ದರೆ ಇವರ ನಟನೆಗೆ ನಾವು ಇವರನ್ನು ಖಳನಾಯಕ, ಮೋಸ ಮಾಡ್ತಾರೆ, ಈ ಪಾತ್ರಕ್ಕೆ ಸೆಟ್ ಆಗಿದಾರೆ ಅನ್ಕೊತೀವಿ ಆದರೆ ಕೆಲವು ಚಿತ್ರಗಳಲ್ಲಿ ಹಾಸ್ಯ ನಟನೆ ಕೂಡ ಮಾಡಿದ್ದಾರೆ.
ಇವರ ಜೊತೆಗೆ ಟೈಗರ್ ಪ್ರಭಾಕರ್, ವಜ್ರಮುನಿ, ದಿನೇಶ್, ಮುಸುರೀ ಕೃಷ್ಣಮೂರ್ತಿ ರವರೆಲ್ಲರ ಒಂದು ಬಳಗವಿದ್ದಂತೆ, ತೆರೆಯಲ್ಲಿ ಮಾತ್ರ ಪಾತ್ರ ಮಾಡುವ ಅನಿವಾರ್ಯ ನಂತರ ಎಲ್ಲರ ರೀತಿಯ ಮನುಷ್ಯರು.
ಇವರ ಕೆಲವು ಚಿತ್ರಗಳನ್ನು ಹೆಸರಿಸುವುದಾದರೆ ತೂಗುದೀಪ, ಮೇಯರ್ ಮುತ್ತಣ್ಣ, ಸಿಪಾಯಿ ರಾಮು, ಗಂಧದ ಗುಡಿ, ಭಕ್ತ ಕುಂಬಾರ, ಬಂಗಾರದ ಪಂಜರ, ದಾರಿ ತಪ್ಪಿದ ಮಗ, ಮಯೂರ, ಬಹದ್ದೂರ್ ಗಂಡು, ಬಡವರ ಬಂಧು, ಮಯೂರ, ಗಿರಿಕನ್ಯೆ, ಸನಾದಿ ಅಪ್ಪಣ್ಣ, ಬಬೃವಾಹನ, ಶಂಕರ್ ಗುರು, ಆಪರೇಷನ್ ಡೈಮಂಡ್ ರಾಕೇಟ್, ನಾನೊಬ್ಬ ಕಳ್ಳ, ನೀ ನನ್ನ ಗೆಲ್ಲಲಾರೆ, ಕಾಮನ ಬಿಲ್ಲು, ಭಕ್ತ ಪ್ರಹ್ಲಾದ, ಅಪೂರ್ವ ಸಂಗಮ, ಕವಿರತ್ನ ಕಾಳಿದಾಸ, ಅದೇ ಕಣ್ಣು, ಜ್ವಾಲಾಮುಖಿ, ಅನುರಾಗ ಅರಳಿತು, ಒಂದು ಮುತ್ತಿನ ಕಥೆ, ದೇವತಾ ಮನುಷ್ಯ ,ಪರಶುರಾಮ, ಜೀವನ ಚೈತ್ರ ಇನ್ನೂ ಮುಂತಾದ ಚಿತ್ರಗಳಲ್ಲಿ ನಾವು ನೋಡಬಹುದು.
ಮೇಲಿನ ಸಾಕಷ್ಟು ಚಿತ್ರಗಳು ಅಣ್ಣಾವ್ರ ಜೊತೆ ಅಭಿನಯಿಸಿರುವುದು ಗಮನಾರ್ಹ, ಅಣ್ಣಾವ್ರ ಯಾವುದೇ ಚಿತ್ರಗಳಿಗೆ ಇವರ ಪಾತ್ರ ಇರುತ್ತಿತ್ತು, ತೆರೆಯ ಹಿಂದೆ ಕೂಡ ಅಣ್ಣಾವ್ರ ಆಪ್ತರು, ಇವರ ಗೆಳೆತನ ಚೆನ್ನಾಗಿರುತ್ತಿತ್ತು.