ಕನ್ನಡ ಸಿನಮಾಗಳಲ್ಲಿ ಖಳನಾಯಕನಾಗಿಮಿಂಚಿ, ಪೋಷಕ ನಟನಾಗಿ ಬೆಳೆದು, ನಾಯಕನಾಗಿ ನಿಂತು, ಕನ್ನಡ ಸಿನಿಪ್ರಿಯರ ಗಮನ ತನ್ನತ್ತ ಸೆಳೆದುಕೊಂಡ “ವಸಿಷ್ಠ.ಎನ್. ಸಿಂಹ” ಈಗ ತೇಲುಗಿನಲ್ಲೂ ಗೆಲುವಿನ ಭಾವುಟ ನೆಡಲು ಸಿದ್ಧವಾಗಿದ್ದರೆ.
ಯುವ ಪ್ರತಿಭೆ ಅಶೋಕ್ ತೇಜ್ನಿರ್ದೇಶಿಸುತ್ತಿರುವ “ಒದೆಲ್ಲ ರೈಲ್ವೆ ಸ್ಟೇಷನ್” ಅನ್ನುವ ಸಿನಿಮಾದಲ್ಲಿ ಭೂಮಿಕೆಯಲ್ಲಿಕಾಣಲಿದ್ದಾರೆ, ಇವರಿಗೆ ಜೊತೆಗಾತಿಯಾಗಿ ” ಹೆಬ್ಭಾ ಪಟೇಲ್”(ಶರಣ ಅಭಿನಯದ ಅಧ್ಯಕ್ಷ ಸಿನಿಮಾದ ನಾಯಕಿ)ಹಾಗೂ ಪೂಜಾ ಪೊನ್ನಾದ ನಟಿಸಲಿದ್ದಾರೆ. ಸಿನಿಮಾಗೆ ಸಂಪತ್ ನಂದಿ ಅವರು ಕಥೆ ಬರೆದಿದ್ದು, ಅನೂಪ್ರುಬೆನ್ಸ್ಹಾಡುಗಳನ್ನ ರಚಿಸಿದ್ದಾರೆ. ಈ ಮುನ್ನ ತೆಲುಗಿನ ಪ್ರೇಕ್ಷಕರು kgfಸಿನಿಮಾದಲ್ಲಿ ವಸಿಷ್ಠ ರನ್ನ ನೋಡಿದ್ದಾರೆ. ಸಿನಿಮಾದ ಶೂಟಿಂಗ್ ಭರದಿಂದ ಸಾಗಿದ್ದು ಶೇಕಡ 80 ರಷ್ಟು ಭಾಗ ಚಿತ್ರೀಕರಣ ಮುಗಿದಿದೆ.
ಗಡಸು ಧ್ವನಿ, ಆಜಾನು ಬಾಹು, ಆರಡಿ ಎತ್ತರದ ದೇಹವುಳ್ಳಬುದ್ಫಿವಂತ ನಟ ವಸಿಷ್ಠ ಸಿಂಹ ಹೊಸ ಪ್ರಯತ್ನಕ್ಕೆ ಶುಭಾವಾಗಲಿ.