ಜೋಗಿ ಚಿತ್ರ ಸಂಭ್ರಮ 15 ವಷ೯ಗಳು 💥💥💥ಯಾಕೊಪ್ಪ ಈ ಜೋಗಿ ಫಿವರ್ ಇಂದ ಹೊರಗ್ ಬರೋಕಾಗ್ತಿಲ್ಲ… ಯಾವುದೇ ಒಂದು ಚಿತ್ರ ಯಶಸ್ವಿಯಾಗಲು ಕಥೆ, ಚಿತ್ರ ಕಥೆ, ಸಂಭಾಷಣೆ ಎಲ್ಲವೂ ಮುಖ್ಯ ಆದ್ರೆ ಎಲ್ಲಾ ಚೆನ್ನಾಗಿದ್ದು ಪಾತ್ರವಗ೯ ಆಯ್ಕೆ ಸರಿಯಿಲ್ದಿದ್ರೆ ಆ ಚಿತ್ರ ನಿರೀಕ್ಷೆಯ ಮಟ್ಟಕ್ಕೆ ಯಶಸ್ಸು ಕಾಣದು.

ಆದ್ರೆ ಈ ಚಿತ್ರದ ಪಾತ್ರವಗ೯ದ ಆಯ್ಕೆಯಲ್ಲಿ “ನಿದೇ೯ಶಕರ “ಚಾಣಾಕ್ಯತೆ ಮೆಚ್ಚಲೇಬೇಕು.
ನನಗೊಂದು ಐಡಿಯಾ ಹೊಳಿಯಿತು ಈ ಹಬ್ಬದ ಸಂದರ್ಭದಲ್ಲಿ ಯಾಕೆ ಎಲ್ಲರಿಗೂ ಧನ್ಯವಾದಗಳು ತಿಳಿಸಬಾರದು ಅಲ್ವೇ…
ಜೋಗಿ ಚಿತ್ರದ ಪಾತ್ರವಗ೯ ಬಗ್ಗೆ ನೋಡೋಣ :-
ಶಿವರಾಜ್ ಕುಮಾರ್, ಮಾದೇಶ ಅಲಿಯಾಸ್ ಜೋಗಿ.
ಅರುಂಧತಿ ನಾಗ್ ಭಾಗ್ಯಕ್ಕ, ಮಾದೇಶ ತಾಯಿ.
ರಮೇಶ್ ಭಟ್, ಮಾದೇಶ ತಂದೆ.
ಜೆನಿಫರ್ ಕೊತ್ವಾಲ್, ನಿವೇದಿತಾ.
ರಘುರಾಮ್, ಯೋಗೀಶ.
ಆದಿ ಲೋಕೇಶ್, ಬಿಡ್ಡ.
ಮೈಕೋ ನಾಗರಾಜ್, ಕೋಟೆ ಸಿದ್ದ.
ಪಟ್ರೆ ನಾಗರಾಜ್, ಪಟ್ರೆ.
ಗುರುರಾಜ್ ಹೊಸಕೋಟೆ, ಖಾದಿರ್ ಚಾಚ.
ಮಳವಳ್ಳಿ ಸಾಯಿಕೃಷ್ಣ. ಉಮೇಶ್, ಪುಂಗ.
ನೀನಾಸಂ ಅಶ್ವಥ್, ಲೈವ್ ಬ್ಯಾಂಡ್ ಓನರ್. ದಶಾವರ ಚಂದ್ರು. ಮೋಹನ್ ಜುನೇಜ. ದುನಿಯಾ ವಿಜಯ್. ಯತಿರಾಜ್. ನಾಗಶೇಖರ್.ಯಾನ ಗುಪ್ತ, ಬಿನ್ ಲ್ಯಾಡೆನ್ ನನ್ ಮಾವ.

ಕ್ಯಾಮರಾ ಮ್ಯಾನ್ – ಎಂ. ಆರ್. ಸೀನು ( ಬಿ. ಸಿ. ಗೌರಿಶಂಕರ್, ಅಣಜಿ ನಾಗರಾಜ್ ಅವರಿಗೆ ಅಸಿಸ್ಟೆಂಟ್ ಕ್ಯಾಮೆರಾ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು. ನಂತರ ಮೆಜೆಸ್ಟಿಕ್ ಸಿನಿಮಾದ ಮೂಲಕ ಸ್ವತಂತ್ರ ಛಾಯಾಗ್ರಾಹಕರಾಗಿ ಕಾರ್ಯ ನಿರ್ವಹಿಸಿದರು).ಸಾಹಸ ನಿರ್ದೇಶಕ ಡಿಫರೆಂಟ್ ಡ್ಯಾನಿ ( ಸೌತ್ ಇಂಡಿಯಾದ ಪ್ರಖ್ಯಾತ ಹಾಗೂ ಹಿರಿಯ ಸಾಹಸ ನಿರ್ದೇಶಕರಾದ ರಾಮ್ ಶೆಟ್ಟಿ, ಕೆ. ಡಿ. ವೆಂಕಟೇಶ್, ಥ್ರಿಲ್ಲರ್ ಮಂಜು, ನಂಜುಂಡಿ ನಾಗರಾಜ್, ಹೈದರಾಬಾದ್ ರಾಜು, ದಕ್ಷಿಣ ಭಾರತದ ಪ್ರಖ್ಯಾತ ಹಾಗೂ ಹಿರಿಯ ಸಾಹಸ ನಿರ್ದೇಶಕರಾದ ಆ್ಯಕ್ಷನ್ ಕಿಂಗ್ ಆರ್. ಪಳನಿರಾಜ್, ಕೌರವ ವೆಂಕಟೇಶ್, Jones Yoonas, ನೇಪಾಳೀ ಮಾಸ್ಟರ್ ವಿಕ್ರಮ್ ಮುಂತಾದ ಸಾಹಸ ನಿರ್ದೇಶಕರಿಗೆ ಹಾಗೂ ಸಿನಿಮಾಗಳಿಗೆ ಸಹಾಯಕ, ಫೈಟರ್ ಆಗಿ ಕಾರ್ಯ ನಿರ್ವಹಿಸಿದ್ದರು. ಅದಾದ ನಂತರ ಪ್ರೇಮ್ ನಿರ್ದೇಶನದ ಸೂಪರ್ ಹಿಟ್ ಚಿತ್ರ”ಎಕ್ಸ್ಕ್ಯೂಸ್ ಮೀ” ಚಿತ್ರದ ಮೂಲಕ ಪ್ರಪ್ರಥಮ ಬಾರಿಗೆ ಸಾಹಸ ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯಗೊಂಡರು.
ಇನ್ನೂ ಹಲವಾರು ಕಲಾವಿದರು “ಇಷ್ಟ ಪಟ್ಟು “ನಟಿಸಿರುವ ಪರಿಣಾಮವೇ ಐತಿಹಾಸಿಕ ದಾಖಲೆ ಮಾಡಲು ಸಾಧ್ಯವಾಯಿತು ಅಂತ ನನ್ನ ಅನಿಸಿಕೆ. ಸಂಗೀತದ ವಿಷಯ ಎಲ್ಲರಿಗೂ ತಿಳಿದಿದೆ ‘ಗುರುಕಿರಣ್ ” ಮ್ಯೂಸಿಕ್ ಮಾಂತ್ರಿಕರು, ಎಸ್ ಪಿ ಬಾಲಸುಬ್ರಹ್ಮಣ್ಯಂ, ಶಂಕರ್ ಮಹದೇವನ್, ಸುನೀತ ಗಾಯಕರು, ಪ್ರೇಮ್ ಗಾಯಕರು, ಅಶ್ವಿನಿ ಪ್ರೊಡಕ್ಷನ್ಸ್ ನಿಮಾ೯ಣ ಕೃಷ್ಣ ಪ್ರಸಾದ್ ನಿಮಾ೯ಪಕರ ಸಮಾಗಮವೇ ಈ “ಜೋಗಿ”.
“ಎ ಫೀಲ್ ದಟ್ ನೆವರ್ ಎವರ್ ಎಂಡ್ಸ್ “
ಈ ಥರ ಚಿತ್ರ ಮತ್ತೆ ಬರಲು ಸಾಧ್ಯವೇ…