ಸೃಜನಶೀಲತೆ ಮತ್ತು ಕಲಾತ್ಮಕ ಭಾವ ಒಂದೇ ನಾಣ್ಯದ ಎರಡು ಮುಖವಾದರೆ ಆ ನಾಣ್ಯಕ್ಕೆ ಡಾ. ವಿಷ್ಣುವರ್ಧನ್ ಅಂತ ಯಾವುದೇ ಅನುಮಾನವಿಲ್ಲದೆ ಆಮೋದಿಸಬಹುದು.
ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು ಅಂಗ್ರಿ ಯಂಗ್ ಮಾನ್ ಪಾತ್ರದಲ್ಲಿಯೇ ಆದರು ನಂತರ ದಿನಗಳಲ್ಲಿ ಗುಲಾಬಿ ಹಿಡಿದ ಲವರ್ ಬಾಯ್ ಆಗಿ, ವಾತ್ಸಲ್ಯ ತೋರುವ ಜ್ಯೇಷ್ಠ ಸೋದರನಾಗಿ, ಮಮಕಾರ ಬೀರುವ ಪಿತನಾಗಿ, ಭಕ್ತಿ ಗೌರವ ಧಾರೆ ಎರೆಯುವ ಚಿನ್ನದಂತ ಮಗನಾಗಿ, ದುಷ್ಟರ ಪಾಲಿಗೆ ಸಿಂಹ ಸ್ವಪ್ನ ತರುವ ಸಹಾಸ ಸಿಂಹನಾಗಿ, ಸ್ನೇಹಕ್ಕೆ ಬಾಗಿ; ಆಪ್ತಮಿತ್ರನಾಗಿ, ಆದರ್ಶಗಳಿಗೆ ಯಜಮಾನನಾಗಿ ಬೆಳ್ಳಿ ಪರದೆಯ ಮೇಲೆ ಬೆಳಕಾಗಿ ಸುದೀರ್ಘಕಾಲದ ಉತ್ಸುಕ ಪ್ರಯಾಣವನ್ನ ಸಂಪನ್ನವಾಗಿಸಿ, ಅಭಿಮಾನದ ಸಂಪತ್ತು ಭರಿತ ಕೋಟೆಗೆ ಧಣಿಯಾಗಿದ್ದರೆ. ದಾದಾ ನಮ್ಮನ್ನು ದೈಹಿಕವಾಗಿ ಆಗಲಿ ಇಂದಿಗೆ 11 ವರ್ಷಗಳಾಗಿವೆ, ಅವರನ್ನ ನೇರಾವಗಿ ಕಾಣಲು ಸಾಧ್ಯವಿಲ್ಲ ಎಂದು ತಿಳಿದಾಗಲೆಲ್ಲ ಮನಸ್ಸಿನಲ್ಲಿ ಅಗಾದವಾದ ನೋವು ಮತ್ತು ದುಗುಡ ಆವರಿಸುತ್ತದೆ, ಆದ್ರೂ ಒಂದಂತೂ ಸತ್ಯ ಶರೀರ ಭೂಮಿಯನ್ನ ತ್ಯಜಿಸಿ ಹೋಗಿರಬಹುದು ಆದ್ರೆ ವ್ಯಕ್ತಿತ್ವದ ತೇಜಸ್ಸು ದುಪ್ಪಟ್ಟಾಗಿದೆ ಈ ನಾಡಲ್ಲೇ ಶಾಶ್ವತವಾಗಿ ಬೇರೂರಿದೆ. ಮಹಾನ್ ದೈವಭಕ್ತರು, ಆಧ್ಯಾತ್ಮಕ ಚಿಂತಕರು ಆಗಿದ್ದ ಡಾ. ವಿಷ್ಣುಜಿ ಯಾವಾಗಲೂ ಅವರ ಅಭಿಮಾನಿಗಳಿಗೆ ಮತ್ತು ಹತ್ತಿರದವರಿಗೆ ಅಮೃತವಾಣಿಯೊಂದನ್ನ ಹೇಳೋರು ” ದೇವರು ನಿಮಗೆ ಒಳ್ಳೇದು ಮಾಡ್ಲಿ ನಿಮ್ಮ ಕೈಯಿಂದ ಒಳ್ಳೆ ಕೆಲಸ ಮಾಡಸ್ಲಿ ಅಂತ”. ಅದನ್ನ ಕೇಳಿದ ಕಿವಿಗಳಷ್ಟೇ ಅಲ್ಲ ಮನಸ್ಸು ಕೂಡ ತುಂಬಿ ಅನಂದಮಯವಾಗುತ್ತಿತ್ತು.
“ಒಬ್ಬ ವ್ಯಕ್ತಿ ವಿಧಿವಶನಾದರೆ ಅವನ ತೂಕವನ್ನ ನಾಲ್ಕು ಜನ ಅವರ ಹೆಗಲ ಮೇಲೆ ಹೊರುತ್ತಾರೆ ಅದೇ ಓರ್ವ ತೂಕದ ವ್ಯಕ್ತಿ ಅಗಲಿದರೆ ಅವನ ವ್ಯಕ್ತಿತ್ವವನ್ನ ನಾಲ್ಕು ಪರಂಪರೆಗಳ ಕಾಲ ಜನ ತಲೆಮೇಲೆ ಹೊತ್ತು ಮೆರೆಸುತ್ತಾರೆ” ಈ ಸಾಲುಗಳು ಡಾ. ವಿಷ್ಣುವರ್ಧನ್ ಅವರಿಗೆ ಹೇಳಿ ಮಾಡಿಸಿದಂತೆ ಇದೆ.. ರಾಜ್ಯದ ಎಲ್ಲ ದಿಕ್ಕಿನಿಂದಲೂ ಸಹಸ್ರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಡಾ. ವಿಷ್ಣುವರ್ಧನ್ ಅವರ ಸ್ಮಾರಕಕ್ಕೆ (ಅಭಿಮಾನ್ ಸ್ಟುಡಿಯೋ) ತೆರಳಿ ಸ್ಮರಿಸಿ, ಪ್ರಣಾಮಗಳನ್ನ ಅರ್ಪಿಸಿದರು.. ಇದರ ಜೊತೆಯಲ್ಲೇ ಅಸಂಖ್ಯಾತ ಅಭಿಮಾನಿಗಳು ತಮ್ಮ ಸ್ವಂತ ಬಡಾವಣೆ, ಕಾಲೊನಿಗಳಲ್ಲಿ ಸ್ಥಾಪಿತವಾದ ವಿಷ್ಣು ಜಿ ಅವರ ಪುತ್ತಳಿ ಗಳನ್ನು ಹೂವಿನಿಂದ ಅಲಂಕರಿಸಿ ಅದರ ಎದುರು ಅನ್ನ ದಾನ, ರಕ್ತ ದಾನ, ಉಚಿತ ಆರೋಗ್ಯ ತಪಾಸಣೆ ಜೊತೆಗೆ ಸೈಕಲ್ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಡಾ.ವಿಷ್ಣುವಿನಂತೆ ಅವರ ಅಭಿಮಾನಿಗಳು ಕೂಡ ಮಹಾನ್ ಸಮಾಜಮುಖಿಗಳು, ನಾಡಪ್ರೇಮಿಗಳು. ” ದಾದಾ ಉತ್ಕೃಷ್ಟ ಅವರ ಅಭಿಮಾನ ಉತ್ತುಂಗ. ದಾದಾ ಇಂದಿಗೂ ಅಜರಾಮರ.
ನಮ್ಮ ವಿಷ್ಣು ದಾದ ಎಂದೆಂದಿಗೂ ಅಜರಮರ…
!!
Jaya Simha. . . !!