ಸಾಹಸಸಿಂಹಾ, ಅಭಿನವ ಭಾರ್ಗವ ಡಾ. ವಿಷ್ಣುವರ್ಧನ “ಕನ್ನಡ ಚಿತ್ರರಂಗದ ಬಹುಮುಖ ಪ್ರತಿಭೆ, ಅಭಿಮಾನಿಗಳ ಪ್ರೀತಿಯ ದಾದಾ” ಆಗಿದ್ದರು ಅನ್ನುವ ಮಾತಲ್ಲಿ ಯಾವ ಸಂಷಯವು ಇಲ್ಲ, ಒಳ್ಳೆಯ ಪ್ರತಿಭೆಗಳನ್ನ ಸದಾ ಪ್ರೋತ್ಸಾಹಿಸುತ್ತ, ಯುವ ಪೀಳೆಗೆಯನ್ನಹರಸುತ್ತ,ನಡೆದು- ಬೆಳೆದು ಬಂದ ದಾರಿ ಇಂದಿನ ಪೀಳಿಗೆಗೆ ಮಾರ್ಗದರ್ಶನ. ಈ ಮಾತನ್ನ ಕನ್ನಡದ ಪ್ರಸ್ತುತ ಸ್ಟಾರ್ ನಟರುಗಳು ಕೂಡ ಹೇಳಿದ್ದಾರೆ ಅದಕ್ಕೆ ಸಾಕ್ಷಿಯಾಗಿ ರಿಯಲ್-ರೀಲ್ ಲೈಫ್ನಲ್ಲಿ ದಾದಾರ ಅಭೀಮಾನಿ ಎಂದು ಸಾರಿ ಹೇಳಿದ್ದಾರೆ.
ಕಿಚ್ಚಸುದೀಪ್ “ವಿಷ್ಣುವರ್ಧನ್” ಚಿತ್ರದಲ್ಲಿ, ರಾಕಿಂಗ್ ಸ್ಟಾರ್ ಯಶ್ “Mr&Mrsರಾಮಾಚಾರಿ” ಸಿನಿಮಾದಲ್ಲಿ, ಚಾಲೆಂಜಿಂಗ್ ಸ್ಟಾರ್ ದರ್ಶನ್ ” ಪ್ರಿನ್ಸ್” ಸೇರಿ ಹತ್ತು ಹಲವು ನಟರು ಸಿನಿಮಾದಲ್ಲಿ ವಿಷ್ಣುದಾದಾ ಪರಮ ಅಭಿಮಾನಿಯಾಗಿ ಕಾಣಿಸಿಕೊಂಡಿದ್ದಾರೆ…ಆ ಸಾಲಿಗೆ ಇದೀಗ ” ಪ್ರಜ್ವಲ್ದೇವರಾಜ್” ಸೇರ್ಪಡೆಯಾಗಿದ್ದಾರೆ.
“ವೀರ0” ಅನ್ನೋ ಭೂಗತಲೋಕದ ಲೋಕದ ಕಥೆ ಆಧಾರಿತ ಚಿತ್ರದಲ್ಲಿ ನಾಯಕನಾಗಿ ನಟಸ್ತಿರೋ “ಪ್ರಜ್ವಲ್ ದೇವರಾಜ” ಅವರ ಫಸ್ಟ್ ಲುಕ್ಬಿಡುಗಡೆಯಾಗಿದೆ. ಲಾಂಗ್ ಕಚ್ಚಿ ಹಿಡಿದು ರಗ್ಗಡ್ಪೊಸ್ ನೀಡಿರುವ ಪ್ರಜ್ವಲ್ ಕೈ ಮೇಲೆ “ದಾದಾ” ಅವರ ಟ್ಯಾಟೂ ಮತ್ತು “ಖಡ” ಕಂಡುಬರುತ್ತದೆ
ಸಿನಿಮಾದ ನಿರ್ದೇಶಕ ಕುಮಾರ ರಾಜ್ ಹೇಳುವಂತೆ ಚಿತ್ರದಲ್ಲಿ ಪ್ರಜ್ವಲ್ ಅವರ ಪಾತ್ರ, ವಿಷ್ಣುವರ್ಧನ್ಅಭಿಮಾನಿಗಳಿಗೆ ಜೊತೆಗೆ ಸಾಮಾನ್ಯರಿಗೂ ಬಹಳ ಹಿಡಿಸುತ್ತೇ, ಹತ್ತಿರವಾಗುತೆ ಎಂದಿದ್ದಾರೆ