ಇಂದು ಕನ್ನಡ ಚಿತ್ರರಂಗದ ಖ್ಯಾತ ನಿದೇ೯ಶಕರು ಹಾಗೂ ಅಣ್ಣಾವ್ರ ಆಪ್ತ ಮಿತ್ರರು ಶ್ರೀ ಎಸ್ ಕೆ ಭಗವಾನ್ (ದೊರೆ ಭಗವಾನ್) ರವರ ಜನುಮ ದಿನ ಅವರಿಗೆ ಶುಭಾಶಯಗಳು ತಿಳಿಸೋಣಮಿತ್ರರೆ .
ಅಣ್ಣಾವ್ರ ಜೊತೆ ನಿದೇ೯ಶಿಸಿದ ಚಿತ್ರಗಳು ಹಲವಾರು ಅದರಲ್ಲಿ ಕೆಲವು ಮರೆಯಲಾಗದು ಜೇಡರ ಬಲೆ , ಸಂಧ್ಯಾರಾಗ, ಮಂತ್ರಾಲಯ ಮಹಾತ್ಮೆ, ಗೋವಾದಲ್ಲಿ ಸಿಐಡಿ 999, ಆಪರೇಷನ್ ಡೈಮಂಡ್ ರಾಕೆಟ್ ಕಸ್ತೂರಿ ನಿವಾಸ, ಎರಡು ಕನಸು, ಗಿರಿಕನ್ಯೆ, ಹೊಸ ಬೆಳಕು, ನಾನೊಬ್ಬ ಕಳ್ಳ, ವಸಂತಗೀತ, ಸಮಯದ ಗೊಂಬೆ, ಯಾರಿವನು, ಜೀವನ ಚೈತ್ರ ಒಡಹುಟ್ಟಿದವರು ಹೇಳ್ತಾ ಹೋದರೆ ಪಟ್ಟಿ ಮಾಡಬಹುದು ದೇವರು ಅವರಿಗೆ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ .
ಅಣ್ಣಾವ್ರ ಜೊತೆ ಚಿತ್ರಗಳನ್ನು ನಿದೇ೯ಶಿಸಲು ಸಿಗುವುದು ಭಾಗ್ಯ
ಅತಿ ಹೆಚ್ಚು ನಿದೇ೯ಶನ ಮಾಡುವುದು ಅವರ ಪಡೆದ ಸೌಭಾಗ್ಯ
ನಿದೇ೯ಶಕರು ಮಾತ್ರವಲ್ಲದೆ ಆಪ್ತರ ಸ್ಥಾನ ಪಡೆಯೋದು ತುಂಬಾ ದೂರದ ಮಾತು ಆದರೆ ಆಪ್ತರಾಗಿ ಹೆಚ್ಚು ಒಡನಾಟವಾಗಿ ಅವರಿಗೆ ಹಲವಾರು ಸೂಪರ್ ಹಿಟ್ ಚಲನಚಿತ್ರಗಳು ನಿದೇ೯ಶಿಸಿ ದಾಖಲೆಗಳ ಸುರಿಮಳೆಗೈದ ಶ್ರೀ. ದೊರೈ ಭಗವಾನ್ ಸರ್.
ಡಾ ರಾಜ್ ಕುಮಾರ್ ಮಾತ್ರವಲ್ಲದೆ ಅನಂತ್ ನಾಗ್ ರವರ ಬಯಲುದಾರಿ , ಚಂದನದ ಗೊಂಬೆ, ಬೆಂಕಿಯ ಬಲೆ, ಗಗನ .
ವಿಷ್ಣುವಧ೯ನ್ ನೀನು ನಕ್ಕರೆ ಹಾಲು ಸಕ್ಕರೆ, ಎಸ್ ಪಿ ಬಾಲಸುಬ್ರಹ್ಮಣ್ಯಂ ರವರ ಬಾಳೊಂದು ಚದುರಂಗ ಚಿತ್ರ ನಿದೇ೯ಶನ ಮಾಡಿರುವರು.
ಇವರ ಚಿತ್ರಗಳಲ್ಲಿ ಹಾಡಿಗೆ, ಫೈಟ್ಸ್, ಡಾನ್ಸ್ ಪ್ರಾಮುಖ್ಯತೆ,
ಜೇಡರ ಬಲೆ ಚಿತ್ರ ಕನ್ನಡ ಚಿತ್ರರಂಗದಲ್ಲಿ ಬಾಂಡ್ ಶೈಲಿಯ ಚಿತ್ರ ಎಂಬ ಹೆಗ್ಗಳಿಕೆ. ಹೆಚ್ಚಾಗಿ ಕಾದಂಬರಿ ಆಧಾರಿತ ಚಿತ್ರಗಳನ್ನು ನಿದೇ೯ಶನ ಮಾಡಿರೋದು ಗಮನಾರ್ಹ.
ಎಂದೆಂದೂ ನಿನ್ನನು ಮರೆತು ಬದುಕಿರಲಾರೆ, ಎಂದು ನಿನ್ನ ನೋಡುವೆ ಎಂದು ನಿನ್ನ ಸೇರುವೆ, ಬಾನಲ್ಲು ನೀನೆ ಭುವಿಯಲ್ಲು ನೀನೆ, ಎಲ್ಲೆಲು ನೀನೆ ಇಫ್ ಯೂ ಕಮ್ ಟುಡೆ ಇಟ್ಸ್ ಟೂ ಅಲಿ೯, ಆಕಾಶದಿಂದ ಧರೆಗಿಳಿದ ರಂಭೆ, ಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮನು ತಾನೆ, ಚೆಲುವೆ ನೀನು ನಕ್ಕರೆ ಬದುಕು ಹಾಲು ಸಕ್ಕರೆ, ಚಿನ್ನದ ಗೊಂಬೆಯಲ್ಲ ದಂತದ ಗೊಂಬೆಯಲ್ಲ, ಬುಧ್ಧಿ ಇರುವ ಗೊಂಬೆಯೂ, ಒಮ್ಮೆ ನಿನ್ನನ್ನು ಕಣ್ ತುಂಬಾ ಕಾಣುವಾಸೆಯಲ್ಲಿರುವೆ , ರವಿ ನೀನು ಆಗಸದಿಂದ ಮರೆಯಾಗಿ ಹೋಗದೆ ನಿಲ್ಲು ಜನಪ್ರಿಯ ಗೀತೆಗಳು.
ಕಸ್ತೂರಿ ನಿವಾಸ ಸಾವ೯ಕಾಲಿಕ ದಾಖಲೆ ಬರೆದ ಚಿತ್ರ.
ಜೀವನ ಚೈತ್ರ ಚಿತ್ರದ ಹಾಡಿಗೆ ಅಣ್ಣಾವ್ರಿಗೆ ರಾಷ್ಟ್ರ ಪ್ರಶಸ್ತಿ ತಂದು ಕೊಟ್ಟ ಚಿತ್ರ.
ಸೋದರ ವಾತ್ಸಲ್ಯ ತುಂಬಿರುವ ಚಿತ್ರ ಒಡಹುಟ್ಟಿದವರು.
ಜೇಡರ ಬಲೆ ಚಿತ್ರದೊಂದಿಗೆ ಚಿತ್ರರಂಗ ಪಯಣ ಆರಂಭ, ಸಹ ನಿದೇ೯ಶಕ ದೊರೈರಾಜ್ ಮತ್ತು ಎಸ್ ಕೆ ಭಗವಾನ್, ಇವರ ಸ್ನೇಹಪೂವ೯ಕ ಜ್ನಾಪಕಕ್ಕೆ ಮುಂದೆ ಚಿತ್ರಗಳಿಗೆ ದೊರೆ ಭಗವಾನ್ ಎಂಬ ಹೆಸರು ಚಾಲ್ತಿ. 23 ಕಾದಂಬರಿ ಆಧಾರಿತ ಚಿತ್ರಗಳು, 55 ಕ್ಕೂ ಹೆಚ್ಚು ಚಿತ್ರಗಳ ನಿದೇ೯ಶನ ಮಾಡಿದ್ದಾರೆ.
ಚಿತ್ರರಂಗದಲ್ಲಿ ಇವರ ಸಾಧನೆಯನ್ನು ಗುರುತಿಸಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಕನಾ೯ಟಕ ಸಕಾ೯ರ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ನೀಡಿ ಗೌರವಿಸಿದೆ.
ಡಾ ರಾಜ್ ಕುಮಾರ್ ಸೌಹಾದ೯ ಪ್ರಶಸ್ತಿ.
ಆದಶ೯ ಫಿಲಂ ಇನ್ಸ್ಟಿಟ್ಯೂಟ್ ನಲ್ಲಿ ನಿದೇ೯ಶರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ.
ಸಂಚಾರಿ ವಿಜಯ್ ನಟನೆಯ ಆಡುವ ಗೊಂಬೆ ಕೊನೆಯ ನಿದೇ೯ಶನದ ಚಿತ್ರ.
“ನಾದಮಯ ಈ ಲೋಕವೆಲ್ಲಾ ನಾದಮಯ “
ದಿಗ್ಗಜರ ಜೊತೆ ನಿಂತು ಒಂದು ಫೋಟೋ ತೆಗೆಸೋದು ಕಷ್ಟ
ಆದರೆ 4 ದಿಗ್ಗಜರ ಜೊತೆ ನಿಂತು ಫೋಟೋ ತೆಗೆಸಿಕೊಳ್ಳೊ ಪ್ರಯತ್ನ
ಕೊನೆಗೂ ಕೈ ಗೂಡಿತು .
“ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು ಏನೇ ಬರಲಿ ಎಂದಿಗೂ ಸೋತು ತಲೆಯ ಬಾಗದು “
ಸರ್ ನಿಮ್ಮ ಚಿತ್ರರಂಗದ ಪಯಣದಲ್ಲಿ ತಾವು ಮಾಡಿದ ಚಿತ್ರರಂಗ ಸೇವೆಗೆ ಹ್ಯಾಟ್ಸ್ ಆಫ್ .