ದೀಪದಿಂದ ದೀಪವ

ದೀಪ ಹಚ್ಚಿದ ತಕ್ಷಣ ಕೊರೋನ ಸೋಂಕು ವಾಸಿಯಗಲ್ಲ ಅನ್ನೋ ವಾಸ್ತವ ಎಲ್ಲರಿಗೂ ಗೊತ್ತು. ಆದರೆ ದೀಪ -. ಬೆಳಕು ನಂಬಿಕೆಮತ್ತು ಭರವಸೆಯನ್ನ ಬಿಂಬಿಸುತ್ತದೆ. ಅಂಧಕಾರ ಕವಿದು , ಸೂತಕದ ವಾತಾವರಣ ಆವರಿಸಿರುವ ಮನೆ ಮನಸ್ಸುಗಳಲ್ಲಿ ತುಸು ಖುಷಿ ಆನಂದ ತಂದು “ಲೋಕ ಸಮಸ್ತ ಸುಖಿನೋ ಭವಂತು ಸರ್ವೇ ಜನಾಃ ಸನ್ಮಂಗಳಾನಿ ಭವಂತು”  ಅನ್ನೋ ವಿಚಾರ ಸಾರುತ್ತ ನಮ್ಮ ಸಿನಿ ನಾಯಕರು ಕೂಡ ನಮ್ಮಲ್ಲೊಬ್ಬರಾಗಿ ಎಲ್ಲರ ಒಳಿತಿಗಾಗಿ “ಜೀವನ  ಜ್ಯೋತಿ” ಬೆಳಗಿಸಿದರು.

ಶ್ರೀಮತಿ  ಭಾರತಿ ವಿಷ್ಣುವರ್ಧನ್ .ಸಾಂಪ್ರದಾಯಕವಾಗಿ ರಂಗೋಲಿಯನ್ನು ಬಿಡಿಸಿ, ಅದರ ಮುಂದೆ  ದೀಪ ಹಚ್ಚಿರುವ ದೃಶ್ಯ.

 ನಟ ಅರ್ಜುನ್ ಸರ್ಜಾ ಮತ್ತು ಅವರ ಪುತ್ರಿ ಐಶ್ವರ್ಯ ಸರ್ಜಾ ಕ್ಯಾಂಡಲ್ ನಿಂದ ಜ್ಯೋತಿ ಬೆಳಗಿದರು.

ಆಕಾಶದೀಪಾ,ಮೇಣದಬತ್ತಿ– ಅಪ್ಪುತಂದರುಏಕತೆಯಬುತ್ತಿ.

ಸಂಸಾರಸಮೇತರಾಗಿತೆಲುಗಿನಮೆಗಾಸ್ಟಾರ್ಚಿರಂಜೀವಿ ದೇಶದಆರೋಗ್ಯಕ್ಕಾಗಿ, ಹಿತಕ್ಕಾಗಿಹಣತೆಯಪ್ಪಿದಿದರು.

ಸ್ಟ್ಯಚು ಆಫ್ ಲಿಬರ್ಟಿ” ಮಾದರಿಯಲ್ಲಿ ಕ್ಯಾಂಡಲ್ಹಚ್ಚಿ, ದೇಶದ ಒಳಿತಿಗಾಗಿ ನಿಂತರು ಸೂಪರ್ಸ್ಟಾರ್.

ದೀಪ– ಸುದೀಪ ..ಮನೆಯಲ್ಲೇ ಇದ್ದು ಯುದ್ಧ ಗೆಲ್ಲೋಣ, ಅಂತ ಹೇಳಿ ಅವರ ಮನೆಯ ಬಾಲ್ಕನಿಯಲ್ಲಿ ಕ್ಯಾಂಡಲ್ಬೆಳಗಿದರು.


“ದೇಶಮೊದಲು”  ಅನ್ನೋ ವಾಖ್ಯ ಹೇಳಿ ಯಶ್ತಮ್ಮ ಪತ್ನಿ ರಾಧಿಕಾ ಮತ್ತು ಮಗಳು ಐರ ಜೊತೆಗೆ ಜ್ಯೋತಿ ಹಿಡಿದರು.


D-Doctor(ವೈದ್ಯರು) P- police (ಆರಕ್ಷಕರು)W-workers(ಎಲ್ಲ ವರ್ಗದ ಕಾರ್ಮಿಕರು)

ಅನ್ನೋ ಮಾದರಿಯಲ್ಲಿ ಬೆಳಕಿನ ಹಣತೆ ಜೋಡಿಸಿ,ಎಲ್ಲರಿಗೂ ಗೌರವ ಸಲ್ಲಿಸಿದರು ಸೃಜನ್ ಲೋಕೇಶ್..

ಕುಟುಂಬದವರ ಜೊತೆಗೆ ರಾಘಣ್ಣ ದೀಪ ಹಿಡಿದು,ಸಮಾಜದ ಒಳಿತಿಗೆ ಸ್ಮರಿಸಿದರು.

ಗಾಯಕ ವಿಜಯ್ ಪ್ರಕಾಶ್ ತಮ್ಮ ಪತ್ನಿ ಮಹತಿಯವರ ಜೊತೆಗೂಡಿ ಬೆಳಕಿನ ಜೊತೆಗೆ “ಒಂದೇ ಮಾತರಂ” ನಾಡ ಗೀತೆಯನ್ನು ಹಾಡಿದರು.

ಧ್ರುವ ಮತ್ತು ಚಿರು ಸರ್ಜಾ ತಮ್ಮ ಮನೆಗಳಲ್ಲಿ  ಪತ್ನಿಯರ ಸಮೇತರಾಗಿ ಕತ್ತಲು ದೂರವಾಗಲು ಎನ್ನುತ್ತ ದೇವರ ಹಸರಲ್ಲಿ ದೀಪ ಹಿಡಿದರು.

ಸಂಸದೆ, ನಟಿ ಸುಮಲತಾ ತಮ್ಮ ಮನೆಯಲ್ಲಿ  ಮೇಣದ ಬತ್ತಿಯನ್ನು ಬೆಳಗಿದರು.

ಇನ್ನು ಬಿಗೆ ಬಿ .. ಅಮಿತಾಬ್ ಬಚ್ಚನ್ ಮನೆಯಲ್ಲಿ ಕ್ಯಾಂಡಲ್ ಬೆಳಗಿಸಿ,ಆರೋಗ್ಯ ಕರುಣಿಸಿ ಎಂದು ದೇವರಲ್ಲಿ ಪ್ರಾರ್ಥಿಸಿದರು.

ಗಾಯಕಿ ಶ್ರೇಯಾ ಘೋಷಾಲ್ ತಮ್ಮ ಮನೆಯ ಬಾಲ್ಕನಿಗೆ ತೆರಳಿ ದೀಪ ಹಿಡಿದ ರೀತಿ ಇದು..

ಮಲೆಯಾಳಂ ನಟ ಮೋಹನ್ ಲಾಲ್ ಮನೆಯವರೊಡನೆ ಸೇರಿ ಬೆಳಕಿನ ಮಧ್ಯೆ ನಿಂತು ಸ್ಮರಿಸಿದರು.

ಬಾಲಿವುಡ್ ನಟಿ ಕತ್ರಿನಾ ಕೈಫ್ ತಮ್ಮ ಅಪಾರ್ಟ್ಮೆಂಟ್ ಬಾಲ್ಕನಿಗೆ ಹೋಗಿ ಕ್ಯಾಂಡಲ್ ಹಚ್ಚಿದ ಪರಿ


ಕನ್ನಡ ಫಿಲ್ಮ್ ಚೇಂಬರ್ ನ ಅಧ್ಯಕ್ಷರಾದ ಚಿನ್ನೆ ಗೌಡ್ರು ಮತ್ತು ನಟ ಶ್ರೀ ಮುರಳಿ ಅವರ ಸ್ವಗೃಹದಲ್ಲಿ 9 ಕ್ಯಾಂಡ್ಲೆಗಳನ್ನು ಬೆಳಗಿದರು.

ಸೆಂಚುರಿ ಸ್ಟಾರ್ ಶಿವ ರಾಜ್ಕುಮಾರ್ ಅವರ ಮನೆಯಲ್ಲಿದ್ದು  ಐಕ್ಯತೆ ಮತ್ತು ದೃಢತೆಯನ್ನು ಪ್ರತಿಬಿಂಬಿಸುವ ಬೆಳಕನ್ನು ಪಿದಿದರು.

ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಕೂಡ ಬಾಲ್ಕನಿಯಲ್ಲಿ ಕ್ಯಾಂಡಲ್ ಹಿಡಿದು ನಿಂತರು.

P. Ghanashyam

P. Ghanashyam

ಘನಶ್ಯಾಮ್ - ಪತ್ರಿಕೋದ್ಯಮ ವಿದ್ಯಾರ್ಥಿ. ಸಿನಿಮಾ ರಂಗದ ಬಗ್ಗೆ ಬಹಳ ಒಲವು. ಅದರಲ್ಲೂ ಕನ್ನಡ ಚಿತ್ರರಂಗದ ಬಗ್ಗೆ ತುಸು ಹೆಚ್ಚೇ ಅಭಿಮಾನ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮ.ಕಾಂ ನ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಘನಶ್ಯಾಮ್ ಚಿತ್ರೋದ್ಯಮ.ಕಾಂ ನ ಲೇಖಕರೆಂಬುವುದಕ್ಕಿಂತ ಒಂದರ್ಥದಲ್ಲಿ ಸಂಪಾದಕರೇ ಎಂದರೂ ತಪ್ಪಿಲ್ಲ. ಇತರ ಲೇಖಕರ ಲೇಖನಗಳನ್ನು ಪರಿಶೀಲಿಸಿ, ಪಬ್ಲಿಷ್ ಮಾಡುವುದು, ಚಿತ್ರರಂಗದ ತಂಡಗಳ ಜೊತೆ ಸಂದರ್ಶನ ಮಾಡುವುದು... ಇತ್ಯಾದಿ ಎಲ್ಲದರಲ್ಲೂ ಚಿತ್ರೋದ್ಯಮ.ಕಾಂ ತಂಡದ ಬಹು ಮುಖ್ಯ ಸದಸ್ಯ. ತೀಕ್ಷ್ಣ ನೇತ್ರ ಎಂಬ ಹೆಸರಲ್ಲೂ ಕೆಲವು ಲೇಖನಗಳನ್ನು ಬರೆದಿದ್ದಾರೆ, ಬರೆಯಲಿದ್ದಾರೆ. ಘನಶ್ಯಾಮ್ ರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply