ಚಂದನವನದ ಸೆನ್ಸೇಷನಲ್ ನಿದೇ೯ಶಕರಾದ ಸುಕ್ಕಾ ಸೂರಿ ಅಲಿಯಾಸ್ ದುನಿಯಾ ಸೂರಿ ರವರಿಗೆ ಜನುಮ ದಿನದ ಶುಭಾಶಯಗಳು 🌹💐❤
ಅವರ ಜನುಮ ದಿನದ ವಿಶೇಷವಾಗಿ ಕೆಲವು ನನಗೆ ತಿಳಿದ ಹಾಗೆ ಒಂದು ಸಣ್ಣ ಲೇಖನ, ಇಷ್ಟವಾದಲ್ಲಿ ಖುಷಿ ಇಷ್ಟವಾಗಲಿಲ್ಲವಾದಲ್ಲಿ ನಿಮ್ಮಗಳ ಆಯ್ಕೆ.
ಅವರ ಚಿತ್ರಗಳ ಕೆಲವು ಜನಪ್ರಿಯ ಸಂಭಾಷಣೆಗಳು ನಿಮ್ಗಳ ಖುಷಿಗಾಗಿ
🌹ಜೈ ಕರ್ನಾಟಕ ವಂದೇ ಮಾತರಂ ಟಿಪ್ಪು ಸುಲ್ತಾನ್, ತಲೆ ಬಾಚ್ಕಳಿ, ಪೌಡ್ರಾಕಳಿ, ದುನಿಯಾ ತುಂಬಾ ಕಾಷ್ಟ್ಲಿ.
❤ನಮ್ ಬದುಕಲ್ಲು ದೀಪಾವಳಿ ಬಂದೇ ಬರುತ್ತೆ, ಪಟಾಕಿ ಯಾವನ್ದೇ ಆಗಿಲಿ೯ ಹಚ್ಚೋರ್ ನಾವಾಗಿರ್ಬೇಕು.
😘ಸೂಪರ್ ಇಂದ ಮಾಕೆ೯ಟ್ ಇಂದ ಮೆಜೆಸ್ಟಿಕ್
😍ಬಾಸ್ ಆಗೋಕು ಯೋಗ ಮತ್ತು ಯೋಗ್ಯತೆ ಇರಬೇಕು,ಸುಮ್ ಸುಮ್ನೆ ಯಾರು ಬಾಸ್ ಅನ್ಸ್ಕೊಳಕಾಗಲ್ಲ.
🖤ನಾನ್ ಸುಮ್ನೆ ಬಂದ್ರೆ ಅತಿಥಿ ಹುಡ್ಕೊಂಡ್ ಬಂದ್ರೆ ನಿಮ್ಗಳ್ ತಿಥಿ.
🦋ಕುತ್ಗೆಗೆ ಹಗ್ಗ ಹಾಕೊಂಡ್ರೆ ಇಮಿಡಿಯೇಟ್ ಸಾವು, ಕುತ್ಗೆಗೆ ಮೂರು ಗಂಟು ಹಾಕಿದ್ರೆ ಇನ್ಸ್ಟಾಲ್ಮೆಂಟ್ ಸಾವು.
🤩ಪಿರುತಿ ಮಾಡಿವ್ನಿ ಆಗಕಿಲ್ಲ ಅಂದ್ರೆ ಕಳ್ಳಿ ಹಾಲ್ ಕುಡ್ದು ಸತ್ತೋಯ್ತೀನಿ,
💚ಲೆವೆಲ್ ಅಂದ್ರೆ ಇದು ದೊಡ್ಮನೆ ಲೆವೆಲ್, ತಲತಲಾಂತರ ದಿಂದ ಬಂದಿರೋದು.
💥ಅಂಕಲ್ ನ ಒಡಿತಿನಿ ಸುಬ್ಬು, ಬೆಳ್ದಿದ್ದಲ್ಲ, ಬೆಳ್ಸಿದ್ದು, ನುಗ್ಗಿದ್ ನಾವ್, ಹೊಡಿದಿದ್ ನಾವು ಅದ್ರಲ್ಲಿ ಬೇಳೆ ಬೇಯ್ಸ್ಕೊಂಡಿರೋರ್ ನೀವು.
ನೈಜ ಬದುಕಿನ ಚಿತ್ರಗಳನ್ನು ತೆಗೆಯೋದರಲ್ಲಿ ಸುಕ್ಕಾ ಸೂರಿ ರವರದ್ದು ಎತ್ತಿದ ಕೈ, ಒಬ್ಬ ಹಳ್ಳಿ ಹುಡುಗ ಜೀವನದ ಬಗ್ಗೆ ಅರಿವಿಲ್ಲದವನು ಬೆಂಗಳೂರಿಗೆ ಬಂದು ಪಡುವ ಕಷ್ಟ ಊಟಕ್ಕಿಗಿ ಯಾವ ರೀತಿ ನಾಟಕವಾಡುತ್ತಾರೆ, ಮಾಯಾ ಪ್ರಪಂಚದಲ್ಲಿ ಮೋಸ ದ್ವೇಷ ಅಸೂಯೆಗಳ ಮಧ್ಯೆ ಅಮಾಯಕ ಹುಡುಗಿ ಜೊತೆ ಪ್ರೀತಿ ಹುಟ್ಟಿಸುವ ಮತ್ತು ಪ್ರೀತಿಗಾಗಿ ಹೋರಾಡುವ ಹಾಗೂ ಹಾಸ್ಯ ಸನ್ನಿವೇಶಗಳು ಜನರಿಗೆ ಮನರಂಜನೆ ನೀಡಿದ ಚಿತ್ರ “ದುನಿಯಾ”. ಬ್ಲಾಕ್ ಕೋಬ್ರ ವಿಜಯ್ ರವರಿಗೆ ಲೈಫ್ ಕೊಟ್ಟ ಚಿತ್ರ, ನಟನೆ ಅಮೋಘ.
ಒಬ್ಬ ಸಾಮಾನ್ಯ ಹುಡುಗ ತಾನು ಪ್ರೀತಿಸಿದ ಹುಡುಗಿಯನ್ನು ಪಡೆಯಲಾರದೆ ತೊಳಲಾಡುವ ಮತ್ತು ಆಕೆ ಇವನನ್ನು ನಿರಾಕರಿಸೋಕೆ ಕಾರಣ ಸಂಪತ್ತು, ಅವಳಿಗೋಸ್ಕರ ತನ್ನ ಇಡೀ ಬದುಕನ್ನು ಕುಡಿತದಲ್ಲಿ ಸಾಗಿಸುವ ಮಧ್ಯೆ ಇನ್ನೊಬ್ಬ ಹೆಣ್ಣಿಗೆ ಆಸರೆ ಆಗುವ ಸಂಧಭ೯ ಪ್ರೀತಿಯನ್ನು ಎಳೆಎಳೆಯಾಗಿ ತೋರಿಸಿದ ಚಿತ್ರ “ಇಂತೀ ನಿನ್ನ ಪ್ರೀತಿಯ “, ಶ್ರೀನಗರ ಕಿಟ್ಟಿ ನಟನೆ ಅಧ್ಭುತ.
ಪುನೀತ್ ರಾಜಕುಮಾರ್ ರವರ ಜೊತೆಗೂಡಿ ಮಾಡಿದ ಚಿತ್ರ ಜಾಕಿ ಇದರ ಬಗ್ಗೆ ಹೇಳೋಕ್ಕಿಂತ ಎಲ್ಲರಿಗೂ ತಿಳಿದಿದೆ, ಹಾಡುಗಳು, ಫೈಟ್ಸ್ , ಡಾನ್ಸ್ ಸೂಪರ್ ಜೊತೆಗೆ ಭಟ್ರು ಸಾಹಿತ್ಯ. ವಿಶೇಷವಾದ ಬೈಕ್, ಜೀವನದ ಆಗು ಹೋಗುಗಳ ಬಗ್ಗೆ ಚಿತ್ರೀಕರಣ.
ಅಣ್ಣಾಬಾಂಡ್ ಸೂಪರ್ ಕಾಂಬಿನೇಶನ್ ವಿಥ್ ನಮ್ಮ ಪವರ್ ಸ್ಟಾರ್, ಎಲ್ಲಾ ಹಾಡುಗಳೂ ಸೂಪರ್, ವಿಭಿನ್ನ ಚಿತ್ರಕಥೆ, ಇದರಲ್ಲೂ ವಿಶೇಷವಾದ ಬೈಕ್, ಪ್ರೇಮ ಕಥನ.
ನಮ್ಮ ಶಿವಣ್ಣ ರವರ ಜೊತೆ ಸಾಮಾನ್ಯ ಜನರ ಜೀವನ ಕುರಿತಾದ ಚಿತ್ರ ಕಡ್ಡಿಪುಡಿ ಸಾಹಸ ದೃಶ್ಯಗಳು.
ಪ್ರಾಮಾಣಿಕ ಪೋಲೀಸ್ ಆಫಿಸರ್, ಉಲ್ಟಾ ಸ್ಕ್ರೀನ್ ಪ್ಲೈ, ಹಾಡುಗಳು ಭಜ೯ರಿ ಹಿಟ್, ಸಾಹಸ ಪ್ರಧಾನ ದೃಶ್ಯಗಳು, ಪ್ರೀತಿ ತೋರಿಸುವ ಚಿತ್ರ ಎಲ್ಲರ ಬಾಯಲ್ಲೂ ಗುನುಗುವ ಹಾಡು “ಟಗರು” ಮೈಯೆಲ್ಲ ಪೊಗರು , ಇಬ್ಬರು ರೌಡಿಗಳ ಡಾಲಿ ಮತ್ತು ಚಿಟ್ಟೆ ಮನೋಜ್ಞ ಅಭಿನಯ, ಚಿತ್ರಕ್ಕೆ ಕಳೆ, ವಿಭಿನ್ನ ಸಂಭಾಷಣೆ.
ಅವರ ಜೊತೆಯಲ್ಲಿ ಇರುವವರನ್ನೇ ನಾಯಕನಟಮಾಡಿ ಸೈ ಎನಿಸಿದ ಚಿತ್ರ ‘ಕೆಂಡಸಂಪಿಗೆ ” ಹಾಡುಗಳು ಸೂಪರ್.
ಮತ್ತೆ ಪುನೀತ್ ರವರನ್ನು ಹಾಕಿಕೊಂಡು ಅಧ್ಧೂರಿ ತಾರಾಗಣ ಅಂಬರೀಷ್, ಭಾರತಿ, ಸುಮಲತ, ರಾಧಿಕ ಪಂಡಿತ್, ಚಿಕ್ಕಣ್ಣ ಮುಂತಾದವರು, ಚಿತ್ರೀಕರಣದಲ್ಲಿ ಭಾರೀ ಹೆಸರು ಮಾಡಿದ “ಅಭಿಮಾನಿಗಳೆ ನಮ್ಮನೆ ದೇವ್ರು “ಹಾಡು ವಿಭಿನ್ನ ಭಾಷೆ ಜೊತೆಗೆ ಹಾಡು ಕೌಟುಂಬಿಕ ಚಿತ್ರ ಭಾರೀ ಯಶಸ್ಸು ಗಳಿಸಿದ ದೊಡ್ಮನೆ ಹುಡುಗ.
ಡಾಲಿ ಧನಂಜಯ್ ಹಾಕಿಕೊಂಡು ವಿಭಿನ್ನ ಚಿತ್ರ ಕಥೆ ನಿರೂಪಣಾ ಶೈಲಿ ಭಿನ್ನ ಎನಿಸಿಕೊಂಡ ಪಾಪ್ ಕಾರ್ನ್ ಮಂಕಿ ಟೈಗರ್ ಮತ್ತು ಮಾದೇವ ಹಾಡು ನೋಡುಗರಿಗೆ ಹುಚ್ಚೆದ್ದು ಕುಣಿಯುವ ಹಾಗೆ ಮಾಡಿದ್ದಾರೆ.
ಇವರ ಚಿತ್ರಗಳಲ್ಲಿ ಚಿತ್ರೀಕರಣ, ಹಾಡು, ಡೈಲಾಗ್ ಎಲ್ಲವೂ ವಿಶೇಷತೆಯಿಂದ ಕೂಡಿರುತ್ತೆ, ಪಾತ್ರಗಳ ಸೃಷ್ಟಿ ವಿಭಿನ್ನವಾಗಿರುತ್ತದೆ, ಹೆಸರುಗಳು ಕೂಡ ಡಾಲಿ, ಚಿಟ್ಟೆ, ಕಾಕ್ರೋಜ್, ಕೊಯ್ಯ ಕೊಯ್ಯ, ಚಪಾತಿ ,ಸುಬ್ಬಿ, ಜಾಮೂನ್ ರವಿ, ಪರಂಗಿ ಸೀನ, ಮಿಠಾಯಿ ರಾಮ, ಕೆಮ್ ರಾಜ ಇನ್ನೂ ಹಲವಾರು.
ಮುಂದೆ ಕಾಗೆ ಬಂಗಾರ ಇನ್ನೂ ಮುಂತಾದ ಚಿತ್ರಗಳನ್ನು ನಿದೇ೯ಶಿಸುವ ಕನ್ನಡ ಚಿತ್ರರಂಗದ ಹೆಮ್ಮೆಯ ನಿದೇ೯ಶಕರಿಗೆ ಶುಭವಾಗಲಿ 🙏