ಅಣ್ಣಾವ್ರಿಗೆ ರಾಜ್ಯ ಪ್ರಶಸ್ತಿ ಸಿಕ್ಕಿದ ಚಿತ್ರ. ಅಣ್ಣಾವ್ರ 200ನೇ ಚಿತ್ರ. ಸಿಂಗೀತಂ ಶ್ರೀನಿವಾಸರಾವ್ ಕಥೆ ಬರೆದು ನಿರ್ದೇಶಿಸಿದ ಈ ಚಿತ್ರ 1988ರಲ್ಲಿ ಬಿಡುಗಡೆಯಾಗಿತ್ತು.
ಕಥೆ ಮೊದಮೊದಲು ಡಿಸ್ಜಾಯಿಂಟೆಡ್ ಅನಿಸಿದರೂ ನಿಧಾನವಾಗಿ ಬಿಗಿಗೊಳ್ಳುತ್ತದೆ.
ತನ್ನ ಜೀವನವನ್ನು ದಿಕ್ಕಾಪಾಲು ಮಾಡಿದ ಮೂವರು ದುಷ್ಕರ್ಮಿಗಳನ್ನು ಕೊಲ್ಲಲು ಹೋಗುವಾಗ ಮಗುವೊಂದರ ಅಳು ಮೂರ್ತಿಯ (ರಾಜ್ಕು್ಮಾರ್) ಕೈಕಾಲುಗಳನ್ನು ಕಟ್ಟಿಬಿಡುತ್ತದೆ. ಆ ಮಗು ಆ ಮೂವರಲ್ಲಿ ಒಬ್ಬನ ಮಗಳೆಂದು ತಿಳಿದಾಗಲಂತೂ ದ್ವೇಷ ಬಿಟ್ಟುಬಿಡುತ್ತಾನೆ. ಆ ಮಗಳನ್ನು (ಸುಧಾರಾಣಿ) ಪ್ರೀತಿಸುವವನು (ಬಹಳ ಸ್ಫುರದ್ರೂಪಿಯಾದ ಉದಯ್ ಹುತ್ತಿನಗದ್ದೆ) ಇನ್ನೊಬ್ಬ ದುಷ್ಟನ ಮಗನೆಂದೂ ಅವನು ತನ್ನ ಮೇಲೆ ಮತ್ತೆ ಹಳೆಯ ಆಪಾದನೆ ಹೊರೆಸಿದನೆಂದೂ ತಿಳಿದಾಗ ಮಚ್ಚು ಹಿಡಿದು ಹೋದ ಮೂರ್ತಿ ಅವನನ್ನು ಆನೆ ತುಳಿತದಿಂದ ತಪ್ಪಿಸೋದು ವಿಪರ್ಯಾಸ ಮತ್ತು ಚಿತ್ರದ ಅಂತ್ಯ.
ಅಣ್ಣಾವ್ರ ಅಕ್ಕನಾಗಿ ಕಾಂಚನಾ ಭಾವನಾಗಿ ಕೆ ಎಸ್ ಅಶ್ವತ್ಥ್ ಮತ್ತು ಅವರ ಮಗಳು ಜಯ ಆಗಿ ಗೀತಾ.
ದುಷ್ಟತ್ರಯರು ರಾಜಾನಂದ್, ಸುಂದರ ಕೃಷ್ಣ ಅರಸ್ ಮತ್ತು ಶಿವರಾಮ್.
ಸ್ಮಶಾನ ಕಾಯುವವನಾಗಿ ಬಾಲಕೃಷ್ಣ ಒಳ್ಳೆಯ ತತ್ವ ಹೇಳುತ್ತಾರೆ. ಪದ್ಮಾ ಕುಮಟಾ, ಹೇಮಾ ಚೌಧರಿ, ಅಖಿಲಾ (ದೂರದರ್ಶನ ಧಾರಾವಾಹಿ ‘ರೀ ಮರೀಬೇಡ್ರಿ’ ನೆನಪಿದೆಯಾ) ಇತರ ಪ್ರಮುಖರು.
ಉಪೇಂದ್ರ ಕುಮಾರ್ ಸಂಗೀತ ನಿರ್ದೇಶನದಲ್ಲಿ ಹಾಲಲ್ಲಾದರು ಹಾಕು ಮತ್ತು ಫುಟ್ ಟ್ಯಾಪಿಂಗ್ ನಿನ್ನಂಥ ಅಪ್ಪ ಇಲ್ಲ ಬಿ. ಆರ್. ಛಾಯಾ ಜೊತೆಗೆ… ಮಂಜುಳಾ ಗುರುರಾಜ್ ಜೊತೆಗೆ ಹೃದಯದಲಿ ಇದೇನಿದು ಮತ್ತು ಈ ಸೊಗಸಾದ ಸಂಜೆ ವಾಣಿ ಜಯರಾಂ ಜೊತೆಗೆ ಹಾಡಿದ್ದಾರೆ ಅಣ್ಣಾವ್ರು.
ಎಸ್ಪೀಬಿ ಹಾಡು ನೇಪಥ್ಯ ಪ್ಯಾಥೋಸ್ ಹಾಡು.. ‘ಇದೇ ಜೀವನ’ ಸಿನಿಮಾ ಥೀಮ್ ಹೇಳ್ತದೆ.