ಸಿನಿಮಾಗಳಲ್ಲಿ ಮುದ್ದಾದ ಹುಡುಗಿಯರ ಒಲವು ಪಡೆಯಲು, ಸನಿಹ ಸೇರಲು ಪ್ರಾಸಬದ್ಧವಾಗಿ ಪ್ರಣಯ ಕವಿತೆ ಹೇಳ್ತಾ ಇದ್ದ ಗೋಳ್ಡೆನ್ ಸ್ಟಾರ್ ಗಣೇಶ್ ಈಗ “ದ ಸ್ಟೋರಿ ಆಫ್ ರಾಯ್ಘಡ್” ಅನ್ನೋ ಪಕ್ಕಾ ಮಾಸ್, ಗಾಂಗ್ಸ್ಟರ್ ಸಿನಿಮಾ ಒಂದಿಗೆ ಪ್ರತ್ಯಕ್ಷವಾಗಿದ್ದಾರೆ. ಕೆಂಪು ಗುಲಾಬಿಯನ್ನ ಹಿಡಿದು ಹುಡುಗಿಯರಿಗೆ ಲವ್ಪ್ರಪೋಸ್ ಮಾಡೋ ಹೀರೊ ಕೈಗೆ ಈಗ ನೆತ್ತರು ಅಂಟಿದೆ. ಲವರ್ ಬಾಯ್ ಛಾಯೆ ಇಂದ ಗಣೇಶ್ ರನ್ನ ಹೊರ ತಂದು ಹೊಸ ರೂಪದಲ್ಲಿ ಆವರನ್ನಬಿಂಬಿಸಲು ನಿರ್ದೇಶಕ “ಸಿಂಪಲ್ ಸುನಿ” ಕೆಲಸ ಮಾಡ್ತಿದ್ದಾರೆ.ಚಿತ್ರದ ಮೊದಲ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ.
ಚಮಕ್ ಸಿನಿಮಾದ ಯಶಸ್ಸಿನ ಬಳಿಕ ಮತ್ತೇಒಂದಾಗಲಿದ್ದಾರೆ ನಟ ಗಣೇಶ್ ಮತ್ತು ನಿರ್ದೇಶಕ ಸುನಿ.ಸಿನಿಮಾದ ಇನ್ನು ಉಳಿದ ಮಾಹಿತಿ ಅತಿ ಶೀಘ್ರದಲ್ಲೇಹೊರಬರಲಿದೆ.