ಧೀರ ರಾಕ್ಲೈನ್ ವೆಂಕಟೇಶ್ 💐💜💐

ಕನ್ನಡ ಚಿತ್ರರಂಗದಲ್ಲಿ ಹಲವಾರು ಸದಭಿರುಚಿಯ, ಹಾಸ್ಯ ಪ್ರಧಾನ, ಸಾಹಸಮಯ ಚಿತ್ರಗಳಾದ ಬೆಳ್ಳಿ ಮೋಡಗಳು, ರಸಿಕ, ಪ್ರೀತ್ಸೆ, ನಾಗರಹಾವು, ಪ್ರೀತ್ಸೋದ್ ತಪ್ಪಾ, ದಿಗ್ಗಜರು, ಮೌಯ೯, ಡಕೋಟ ಎಕ್ಸ್‌ಪ್ರೆಸ್, ಸಿರಿವಂತ, ಕುರುಬನ ರಾಣಿ, ಆನಂದ ಜ್ಯೋತಿ, ಯಾರೇ ನೀನು ಚೆಲುವೆ, ಸೂಪರ್, ನಟಸಾವ೯ಭೌಮ , ಕುರುಕ್ಷೇತ್ರ ಮುಂತಾದ ಚಿತ್ರಗಳ ನಿಮಾ೯ಣ ಮತ್ತು ನಿಮಾ೯ಪಕರು, ನಟ , ರಾಕ್ ಲೈನ್ ಪ್ರೊಡಕ್ಷನ್ಸ್, ರಾಕ್ ಲೈನ್ ಎಂಟಟೈ೯ನ್ , ಹಿಲ್ ರಾಕ್ ಇಂಟರ್ ನ್ಯಾಷನಲ್ ಸ್ಕೂಲ್, ರಾಕ್ ಲೈನ್ ಸಿನಿಮಾಸ್, ರಾಕ್ ಲೈನ್ ಮಾಲಿನ ಮಾಲೀಕರು, ಧೀರ ರಾಕ್ ಲೈನ್ ವೆಂಕಟೇಶ್ .

ನಿಮಾ೯ಣವಲ್ಲದೆ ಇವರ ನಟನೆಯನ್ನು ಪೊಲೀಸ್ ಸ್ಟೋರಿ, ಅಗ್ನಿ ಐ ಪಿ ಎಸ್, ಕದಂಬ, ಹಿಮಪಾತ ಹೆಚ್ಚಾಗಿ ಪೋಲೀಸ್ ಪಾತ್ರಗಳಲ್ಲಿ ನೋಡಿದ್ದೇವೆ, ಕಾಮಣ್ಣನ ಮಕ್ಕಳು, ಇವರ ಜೊತೆ ದೊಡ್ಡಣ್ಣ ಕಾಂಬಿನೇಶನ್ ತುಂಬಾನೇ ಮಜಾ ಕೊಟ್ಟಿದ್ದು ಡಕೋಟ ಎಕ್ಸ್‌ಪ್ರೆಸ್ ಚಿತ್ರದಲ್ಲಿ ಮತ್ತು ಓಂ ಪ್ರಕಾಶ್ ಜೊತೆ ಕಾಮಿಡಿ ಒಂದೊಂದು ಸೀನ್ ನಕ್ಕು ನಕ್ಕು ಸುಸ್ತಾದ್ರೂ ನೋಡ್ತಿದ್ದ ಸಿನಿಮಾ.
ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ‘ಲಿಂಗ’ ಚಿತ್ರದ ನಿಮಾ೯ಪಕರು, ಬಾಲಿವುಡ್ ಸಲ್ಮಾನ್ ಖಾನ್ ಚಿತ್ರ ‘ಭಜರಂಗಿ ಭಾಯಿಜಾನ್ ‘ ಚಿತ್ರದ ಸಹ ನಿಮಾ೯ಪಕರೂ ಕೂಡ, ಎರಡು ಚಿತ್ರಗಳ ಒಂದು ಹಾಡಿನಲ್ಲಿ ಕಾಣಿಸಿಕೋಂಡಿದ್ದಾರೆ.

ಇವರ ಮತ್ತು ದೊಡ್ಮನೆ ಸಂಬಂಧ ಪಾವ೯ತಮ್ಮ ರಾಜ್ ಕುಮಾರ್ ರವರನ್ನು ಅಮ್ಮ ಎಂದು ಕರೀತಿದ್ರು, ಅಣ್ಣಾವ್ರೆಂದರೆ ಅಷ್ಟೇ ಗೌರವ, ಭಕ್ತಿ, ಅಮ್ಮಾವೃ ಯಾವುದೇ ಕೆಲಸ ಹೇಳಿದರೂ ಆಗಲ್ಲ ಅನ್ನೋ ಮಾತಿಲ್ಲ ಹೇಳಿದ್ದನ್ನು ಮಾಡುತ್ತಿದ್ದರು, ದೊಡ್ಡ ದೊಡ್ಡ ಸಮಾರಂಭಗಳು ಇವರ ಅಧ್ಯಕ್ಷತೆಯಲ್ಲಿ ನಡೆಯೋದು, ಧನ್ಯ ಮಿಲನ, ಸಾಥ೯ಕ ಸುವಣ೯, ಅಂಬಿ ಸಂಭ್ರಮ ಹೀಗೆ.

ಇನ್ನೂ ಇವರ ಮತ್ತು ರೆಬಲ್ ಸ್ಟಾರ್ ಅಂಬರೀಷ್ ಹಾಗೂ ವಿಷ್ಣು ವಧ೯ನ್ ಬಾಂಧವ್ಯಕ್ಕೆ ಸಾಕ್ಷಿ ‘ದಿಗ್ಗಜರು’ ಚಿತ್ರ ಎಷ್ಟು ಸೂಪರ್ ಹಿಟ್ ಆಗಿದೆ ಅನ್ನೋದು ಎಲ್ಲರಿಗೂ ತಿಳಿದಿದೆ. ಇವರನ್ನ ನೋಡಲು ಅಂಬರೀಷ್ ಥರ ಇರೋದು ,ಮಾತನಾಡೋದು, ಅಂಬರೀಷ್ ರವರೆಂದರೆ ಇನ್ನಿಲ್ಲದ ಪ್ರೀತಿ, ಇವರ ಬಾಲ್ಯದ ದಿನಗಳಲ್ಲಿ ಅಂಬರೀಷ್ ನೋಡಬೇಕೆಂಬ ಆಸೆ ಕೊನೆಗೆ ಅವರಿಗೆ ಚಿತ್ರ ಮಾಡಿದ್ದಾರೆ.

ಶಿವರಾಜ್ ಕುಮಾರ್, ರವಿಚಂದ್ರನ್, ಉಪೇಂದ್ರ, ಸುದೀಪ್, ಪುನೀತ್ ರಾಜಕುಮಾರ್, ದಶ೯ನ್, ವಿಜಯ್ ಇನ್ನೂ ಹಲವಾರು ಕಲಾವಿದರ ಚಿತ್ರಗಳ ನಿಮಾ೯ಣ.

63ನೇ ರಾಷ್ಟ್ರೀಯ ಪ್ರಶಸ್ತಿ ‘ಭಜರಂಗಿ ಭಾಯ್ ಜಾನ್ ‘ ಜನಪ್ರಿಯ ಚಿತ್ರಕ್ಕೆ ಗೌರವ ನೀಡಿದೆ.

ಕನ್ನಡ ಚಿತ್ರರಂಗಕ್ಕೆ ತಮ್ಮದೇ ಆದ ಸೇವೆ ಸಲ್ಲಿಸುತ್ತಿದ್ದಾರೆ 🌹

ನಾನೂ ಯಾರ ಪರವಾಗಿ ಅಲ್ಲ ಎಲ್ಲರೂ ಕಲಾವಿದರನ್ನು ಗೌರವಿಸೋಣ ಹೆಚ್ಚು ಪ್ರೀತಿಸೋದು ರಾಜವಂಶ 😍

ದೇವರು ಅವರಿಗೆ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ಇನ್ನೂ ಹೆಚ್ಚಿನ ಚಿತ್ರಗಳು ಅವರ ಕಡೆಯಿಂದ ನಿರೀಕ್ಷಿಸೋಣ 🙏

ಶ್ರೀನಿವಾಸ್ ಎ

ಶ್ರೀನಿವಾಸ್ ಎ

ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು. ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ. ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏

Leave a Reply