ಕನ್ನಡ ಚಿತ್ರರಂಗದ ಹಾಸ್ಯ ಕಲಾವಿದರು ಹಾಗೂ ರಾಕ್ಲೈನ್ವೆಂಕಟೇಶ್ ಅವರ ಸಿನಿ ನಿರ್ಮಾಣ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ “ರಾಕ್ಲೈನ್ ಸುಧಾಕರ್” ಇಂದು ಬೆಳಗ್ಗೆ ತೀವ್ರ ಹೃದಯಾಘಾತದಿಂದ ಕೊನೆ ಉಸಿರೆಳೆದಿದ್ದಾರೆ.
ತಮ್ಮದೇ ಆದ ವಿಭಿನ್ನ ಧ್ವನಿ ಮುತ್ತು ಅದರ ಎರಿಳಿತದಿಂದನೋಡುಗರನ್ನರಂಜಿಸುತ್ತಿದ್ದರು.
ಅದೇ ಹಳಸು ಹಾಸ್ಯಕ್ಕೆ ನಕ್ಕು ಬೇಸರವಾಗಿದ್ದ ಪ್ರೇಕ್ಷಕನಿಗೆ ಹೊಸ ರೀತಿಯ ಕಾಮಿಡಿಯಕಿಕ್ ನೀಡಿದ ಮಾಹನುಭಾವರು ಇವರು. ಪಾತ್ರ ಚಿಕ್ಕದೋದೊಡ್ಡದೊ ಅನ್ನೋದು ಮುಖ್ಯವಲ್ಲ ಅದನ್ನ ನಾವು ಹೇಗೆ ನಿಭಾಯಿಸಿ ಜನರಿಗೆ ಹತ್ತಿರವಾಗುತ್ತಿವಿ ಅನ್ನೋದು ಮುಖ್ಯ ಎಂಬ ಮಾತನ್ನ ಇವರು ಹಿಂದೊಮ್ಮೆ ಹೇಳಿದ್ದು ಉಂಟು.
ಜಾಕಿ,ಸೂಪರ್,ತೋಪಿವಾಲ, ಲವ್ ಇನ್ ಮಂಡ್ಯ, ಪಂಚರಂಗಿ,ಅಧ್ಯಕ್ಷ,ಸೇರಿ 100 ಕ್ಕು ಅಧಿಕ ಸಿನಿಮಾದಲ್ಲಿ ಅಭಿನಯಸಿದ್ದರು.
ನಮ್ಮನ್ನು ಮನೋರಂಜಿಸಿ,ನಲಿವಿಗೆಕಾರಣರಾದ ನೀವು ಎಂದಿಗೂ ಅಮರ.ಪರಮಾತ್ಮನು ನಿಮ್ಮ ಆತ್ಮಕ್ಕೆ ಶಾಂತಿ ಕರುಣಿಸಲಿ ಎಂದು ಚಿತ್ರೋದ್ಯಮ.ಕಾಂಸ್ಮರಿಸುತ್ತದೆ.