“ಯಾಕ್ ಬಂದೆ ಇಲ್ಲಿಗೆ ನಿನ್ನೇ ನೋಡಕ್ ಬಂದೆ
ನನ್ನನ್ನೇ ಏಕವಚನದಲ್ಲಿ ಮಾತಾಡೋಕೆ ಸೊಕ್ಕೇ ನಿನಗೆ “
“ಅವನ್ ತಿಂತಾರೋ ಅನ್ನ ನಮ್ದು
ಅವನ್ ಉಡ್ತಾಯಿರೋ ಬಟ್ಟೆ ನಮ್ದು
ಅವನ್ ಇರೋ ಮನೆ ನಮ್ದು “
“ಇಷ್ಟು ದಿವಸ ನಾನು ಯಾರು ಅಂತತೋರ್ಸಿಲಿಲಲ್ಲ
ಈಗ ತೋರ್ಸ್ತೀನಿ ಇರು “
“ಗೆದ್ದೆ ಯಮನನ್ನು ಗೆದ್ದೆ
ಎದ್ದೆ ಮೇಲಕೆ ಎದ್ದೆ “
ಈ ಡೈಲಾಗ್ ಗಳು ನೋಡ್ತಿದ್ರೆ ಯಾವುದೋ ಚಿತ್ರದ ಸನ್ನಿವೇಶ ಜ್ನಾಪಕ ಬರುತ್ತೆ, ನೋಡೋಕೆ ಕಪ್ಪಗಿದ್ದು, ದಪ್ಪನೆಯ ಕಣ್ಣುಗಳು, ಉದ್ದವಾದ ಮೀಸೆ, ದೊಡ್ಡ ದೇಹ, ಕಂಚಿನ ಕಂಠದ ಮೂಲಕ ಕನ್ನಡ ಚಿತ್ರರಂಗದಲ್ಲಿ ನೆನಪಿನಲ್ಲಿ ಉಳಿಯುವ ಹಾಗೆ ಸಾಕಷ್ಟು ಚಿತ್ರಗಳಲ್ಲಿ ಖಳ ನಾಯಕ ,ಪೋಷಕ ನಟ, ಸಹ್ರುದಯಿ, ಅಣ್ಣಾವ್ರ ಆಪ್ತರು ಆದ ಸದಾನಂದ್ ಸಾಗರ್ ,ನಟಭಯಂಕರ (ವಜ್ರಮುನಿ) ರವರಿಗೆ ಜನುಮ ದಿನದ ಶುಭಾಶಯಗಳು 🌹💐❤
ಅವರು ಮೊದಲು ಸ್ಟೇಜ್ ಆರ್ಟಿಸ್ಟ್ ಆಗಿ ರಾವಣನ ಪಾತ್ರ ಕಣಗಾಲ್ ಪ್ರಭಾಕರ ಶಾಸ್ತ್ರಿ ರವರು ಬರೆದ “ಪ್ರಚಂಡ ರಾವಣ ” ನಾಟಕದಲ್ಲಿ ಅಭಿನಯಿಸುತ್ತಿದ್ದರು, ಕಣಗಾಲ್ ಪ್ರಭಾಕರ್ ಶಾಸ್ತ್ರೀ ರವರು ಇವರಿಗೆ ಇವರ ನಟನೆಯನ್ನು ಗಮನಿಸಿ “ಮಲ್ಲಮ್ಮನ ಪವಾಡ ” ಚಿತ್ರದಲ್ಲಿ ನಟಿಸಲು ಅವಕಾಶ ನೀಡಿದರು.
ಪುಟ್ಟಣ್ಣ ಕಣಗಾಲ್ ರವರ ಗರಡಿಯಲ್ಲಿ ಬೆಳೆದ ಇವರು ನಾಗರಹಾವು ಚಿತ್ರದಲ್ಲಿ ಒಂದು ಸಣ್ಣ ಪಾತ್ರದಲ್ಲಿ ಸಾಕ್ಷಾತ್ಕಾರ, ಗೆಜ್ಜೆಪೂಜೆ ಆನಂತರ ಚಿತ್ರಗಳು ಸಾಲಾಗಿ ಸಂಪತ್ತಿಗೆ ಸವಾಲ್ ಚಿತ್ರದ ಸಾಹುಕಾರ ಪಾತ್ರ ಪೂರ್ಣ ಪ್ರಮಾಣದ ಖಳನಾಯಕ ಎಂಬ ಭರವಸೆಗೆ ಪಾತ್ರರಾದರು, ಮಯೂರ, ಸಿ. ಬಿ. ಐ ಶಂಕರ್, ಕಳ್ಳ ಕುಳ್ಳ, ಸಾಂಗ್ಲಿಯಾನ 2, ಗಿರಿಕನ್ಯೆ, ಬಬ್ರುವಾಹನ, ಅಪೂರ್ವ ಸಂಗಮ, ಸಾಹಸ ಸಿಂಹ, ಬಂಗಾರದ ಮನುಷ್ಯ, ಭಕ್ತ ಕುಂಬಾರ, ಗರುಡರೇಖೆ, ದಾರಿ ತಪ್ಪಿದ ಮಗ, ಜಯಸಿಂಹ, ಒಂಟಿ ಸಲಗ, ಗಂಡಭೇರುಂಡ, ಅಂತ, ಭಜ೯ರಿ ಬೇಟೆ, ಶಂಕರ್ ಗುರು, ಬಹದ್ದೂರ್ ಗಂಡು, ಕಿಲಾಡಿ ಕಿಟ್ಟು, ಪ್ರೇಮದ ಕಾಣಿಕೆ, ಆಪರೇಷನ್ ಡೈಮಂಡ್ ರಾಕೆಟ್, ಸಿಪಾಯಿ ರಾಮು, ಮೂರುವರೆ ವಜ್ರಗಳು, ಭಲೇಹುಚ್ಚ, ನಾನೊಬ್ಬ ಕಳ್ಳ, ಹುಲಿಯ ಹಾಲಿನ ಮೇವು, ಚಕ್ರವ್ಯೂಹ, ಮಲ್ಲಮ್ಮನ ಪವಾಡ, ರಾಯರು ಬಂದರು ಮಾವನ ಮನೆಗೆ, ಗಲಾಟೆ ಸಂಸಾರ, ಯುಗಪುರುಷ, ಸೊಸೆ ತಂದ ಸೌಭಾಗ್ಯ, ಸಿರಿತನಕ್ಕೆ ಸವಾಲ್, ರವಿಚಂದ್ರ, ಆಕಸ್ಮಿಕ, ಜೀವನಚೈತ್ರ, ಒಡಹುಟ್ಟಿದವರು ಇನ್ನೂ ಮುಂತಾದವು.
ವಜ್ರಮುನಿ ರವರನ್ನು ಅಭಿಮಾನಿಗಳು, ಜನಗಳು ಮೊದ ಮೊದಲು ಭೇಟಿ ಮಾಡಿ ಮಾತನಾಡಿಸಲು ಹೆದರುತ್ತಿದ್ದರು ಕಾರಣ ಅವರ ಗಡುಸಾದ ಮಾತು ತೆರೆಯ ಮೇಲೆ ಇವರು ಬಂದರೆ ಜನರು ಹೆದರುತ್ತಿದ್ದರಂತೆ ಆ ಕೂಗು, ಆ ನೋಟ, ಆದರೆ ಅವರನ್ನು ಪರಸ್ಪರ ಭೇಟಿ ಮಾಡಿದಾಗ ಎಂಥ ಮನಸ್ಸಿನವರೆಂದು, ಮೃದು ಸ್ವಭಾವದವರು, ಬಹಳ ಚೆನ್ನಾಗಿ ಮಾತನಾಡುತ್ತಾರೆ, ತೆರೆಯಲ್ಲಿ ಮಾತ್ರ ಪಾತ್ರವನ್ನು ನಿವ೯ಹಿಸುತ್ತಿದ್ದರು .
ಕೆಲವು ಸನ್ನಿವೇಶಗಳಲ್ಲಿ ಅಭಿನಯಿಸೋಕೆ ಮುಜುಗರವಾದರೂ ನೈಜತೆ ಇರಬೇಕೆಂಬ ನಿದೇ೯ಶಕರ ಒತ್ತಾಯದ ಮೇರೆಗೆ ಅಭಿನಯಿಸುತ್ತಿದ್ದರು, ನಂತರ ಸಹ ಕಲಾವಿದರಿಗೆ ಕ್ಷಮೆ ಕೇಳುವ ಮೇರು ವ್ಯಕ್ತಿತ್ವವನ್ನು ಹೊಂದಿದ್ದರು.
ಅವರ ಕುಟುಂಬದೊಡನೆ ತಾವೂ ಎಲ್ಲರಂತೆ ಖುಷಿ ಖುಷಿಯಾಗಿ ಜೀವನ ಮಾಡಿದ್ಧರು, ಇವರ ಮೊಮ್ಮಗ ತನ್ನ ತಾತನ ಶೈಲಿಯಲ್ಲಿ ಪ್ರಚಂಡ ರಾವಣ ರ ಸನ್ನಿವೇಶ ಬಹಳ ಚೆನ್ನಾಗಿ ಮಾಡುತ್ತಾರೆ, ಅವರ ತಾತನ ಛಾಯೆ ಅವರಿಗಿದೆ, ಒಳ್ಳೆಯದಾಗಲಿ.
ನಿಜಕ್ಕೂ ನಮ್ಮ ಕನ್ನಡ ಚಿತ್ರರಂಗ ಹೆಮ್ಮೆ ಪಡಬೇಕು ಇಂಥಾ ದೊಡ್ಡ ಖಳನಟರು ಸಿಕ್ಕಿದ್ದು, ದಂತಕಥೆಯಾಗಿ ಮೆರೆದದ್ದು, ಇಂಥವರ ಸಾಲಿಗೆ ಮತ್ಯಾರೂ ಬರಲಾರರು ಅನ್ನೋದು ನನ್ನ ಅನಿಸಿಕೆ ನೀವೇನಂತೀರಿ…
ಚಂದದ ಬರವಣಿಗೆ ಸರ್… ನಿಮ್ಮ ಬರಹಗಳು ಹೀಗೆಯೇ ಮುಂದುವರೆಯಲಿ..
ಸರ್ ನಮಸ್ತೆ ಬಹಳ ಅತ್ಯುತ್ತಮ ಅದ್ಬುತ ಲೇಖನ ಸರ್ ನಿಜಕ್ಕೂ ತಮ್ಮ ಕಾರ್ಯ ಶ್ಲ್ಯಾಘನೀಯ ನಿಮ್ಮಂಥ ಯುವ ಪ್ರತಿಭೆ ಬರಹ ಗಾರರು ಕನ್ನಡ ಭಾಷೆ ಕನ್ನಡ ನಾಡು ನುಡಿ ಕನ್ನಡ ಚಿತ್ರ ರಂಗಕ್ಕೆ ಬೇಕು ಸರ್ ಧನ್ಯವಾದಗಳು ನಮಸ್ಕಾರ
Thank u.
Please tell your friends to read the articles also regularly.