ಕನ್ನಡ ಸಿನಿಮಾಗಳಲ್ಲಿ ಪೋಷಕ ಪಾತ್ರ ನಿರ್ವಹಿಸುತ್ತಿದ್ದ ನಟ ರಾಜಗೋಪಾಲ(66 ವಯಸ್ಸು) ಇಂದು ಅಸ್ತಂಗತರಾಗಿದ್ದರೆ. ಅಸ್ತಮಾ ಮತ್ತು ಕಿಡ್ನಿ ಸಮಸ್ಯೆಯಿಂದಬಳಲುತ್ತಿದ್ದರು.
ನಾಟಕ , ರಂಗಭಿಯಲ್ಲಿ ಕಲಾ ಸೇವೆ ಪ್ರಾರಂಭ ಮಾಡಿದ್ದು, ಮಾಸ್ಟರ್ ಹಿರಣಯ್ಯ ಅವರ ನಾಟಕದ ಕಂಪನಿಯಲ್ಲಿ ಬಹಳ ವರ್ಷಗಳ ಕಾಲ ಜೊತೆಗಿದ್ದರು. ಮಿಮಿಕ್ರಿ ಮಾಡುವುದರಲ್ಲಿ ಪರಿಣಿತರಾದ ಕಾರಣ ಇವರನ್ನ “ಮಿಮಿಕ್ರಿರಾಜಗೋಪಾಲ್” ಎಂದೇ ಎಲ್ಲರು ಕರೆಯುತ್ತಿದ್ದರು.
ನಟನೆಯ ಜೊತೆಗೆ ಡಬ್ಬಿಂಗ್ ಕೂಡ ಮಾಡ್ತಿದ್ರು.. 35 ವರ್ಷಗಳ ಪಯಣದಲ್ಲಿ 250 ಸಿನಿಮಾಗಳಲ್ಲಿ ಅಭಿನಯ.
ಸಿನಿಮಾ ನಾಟಕದಲ್ಲಿಎಲ್ಲರನ್ನನಾಗಿಸುತ್ತಿದ್ದ ಹಾಸ್ಯ ದೊರೆಯ ವಯ್ಯಕ್ತಿಕ ಬದುಕು ಹೇಳಿಕೊಳ್ಳುವಷ್ಟುಸುಂದರವಾಗಿರಲಿಲ್ಲ.. ಆರ್ಥಿಕ ಬಿಕಟ್ಟು, ಅವಕಾಶಗಳ ಕೊರತೆ, ಸಿಕ್ಕ ಪಾತ್ರಗಳು ಅವರ ಸಾಮರ್ಥ್ಯಕ್ಕೆ ನ್ಯಾಯ ಒದಗಿಸದಿದ್ದರು,ದೊರೆತ ಪಾತ್ರಕ್ಕೆ ಜೀವ ತುಂಬುತ್ತಿದ್ದ ನಿಷ್ಠಾವಂತ ಕಲಾವಿದ.ತನ್ನನೋವ ಮರೆತು ನಮ್ಮ ವಿನೋದಕ್ಕಾಗಿ ಕಾಯ ವಾಚ ಮನಸದುಡಿದ, ಸದಾ ಹಸನ್ಮುಖಿಯಾಗಿದ್ದರಾಜಗೋಪಾಲರಜೇವನಸ್ಮರಣೀಯ … ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿಎಂದುಚಿತ್ರೋದ್ಯಮ.ಕಾಂಪ್ರಾರ್ಥಿಸುತ್ತದೆ..