ಇನ್ನೇನು ಊರು, ಕೇರಿ, ಹಳ್ಳಿ, ಪಟ್ಟಣ, ಬೀದಿ ಬೀದಿಗಳಲ್ಲೆಲ್ಲ “ಗಣಪತಿ ಬಪ್ಪ ಮೋರಯಾ” ಗಳದೇ ಸದ್ದು. ಬೀದಿ ಬೀದಿ ಗಳಲ್ಲೂ ಗಣೇಶ ನ ಉತ್ಸವಗಳೇ. ಒಂದು ಸೊಂಡಿಲು ಬರೆದರೆ ಮುಗಿಯಿತು. ಯಾವುದೇ ರೀತಿಯ ಆರ್ಟಿಸ್ಟಿಕ್ ಟಚ್ ಗಳಾದರೂ ಸರಿ, ಯಾವುದೇ ರೀತಿಯ ಶೇಪ್ ಗಳಾದರೂ ಸರಿ ಅದು ಗಣೇಶನೇ.ಧಡೂತಿ ಹೊಟ್ಟೆ, ಕೈ ಕಾಲು ಸಣ್ಣ, ಕೈ ತುಂಬಾ ಸಿಹಿ ಲಾಡು, ಹೊಟ್ಟೆಗೊಂಡು ಸ್ನೇಕ್ ಬೆಲ್ಟ್, ಇವಿಷ್ಟೇ ಇವನ ಐಡೆಂಟಿಟಿ. ಮುಂಬಯಿ ಯಲ್ಲಿ ನಡೆದ 102 ನೆಯ ಇಂಡಿಯನ್ ಸೈನ್ಸ್ ಕಾಂಗ್ರೆಸ್ ನಲ್ಲಿಯೂ ಗಣೇಶನ ಆನೆಯ ತಲೆಯ ಬಗ್ಗೆ ಚರ್ಚೆ ಆಗಿದೆಯಂತೆ. ಎಷ್ಟೋ ವಿದೇಶಿ ಗಣಿತಜ್ಞರು ಧಡೂತಿ ದೇಹದ ಗಣೇಶ ಹಾಗು ಅವನನ್ನು ಹೊತ್ತ ಬಡಪಾಯಿ ಇಲಿಯ ಕತೆಯ ಮೂಲಕ e = mc 2 ಸೂತ್ರವನ್ನು ವಿವರಿಸುತ್ತಾರಂತೆ. ಬ್ರಿಟಿಷ್ ಸರ್ಕಾರದ ಮೇಲೆ ಹೋರಾಡಲು ಭಾರತೀಯರನ್ನು ಸಂಘಟಿಸಲು ಲೋಕಮಾನ್ಯ ತಿಲಕರು ಆಯ್ಕೆ ಮಾಡಿದ್ದೂ ಕೂಡ ಗಣೇಶ ಉತ್ಸವ ಎಂದರೆ ಗಣೇಶನ ವೈಶಿಷ್ಟ್ಯ ದ ಪರಿಚಯವಾಗುತ್ತದೆ. ಹಾಗಾದರೆ ಗಣೇಶನಿಗೆ ಇರುವ ಈ ವಿಶಿಷ್ಟತೆಗೆ ಇರುವ ಅರ್ಥವಾದರೂ ಯಾವುದು? ಇಡೀ ಜಗತ್ತೇ ನಂಬಿರುವಂತೆ ಇಂದಿನ ವೈಜ್ಞಾನಿಕ, ಗಣಿತ ಹಾಗು ವೈದ್ಯ ವಿಜ್ಞಾನ ಆವಿಷ್ಕಾರಗಳಿಗೆ ಬಹು ಪಾಲು ಕೊಡುಗೆ ವೇದಗಳದ್ದೇ. ಹಾಗಾದರೆ ಈ ಗಣೇಶನ ವಿಶಿಷ್ಟತೆಯ ಅರ್ಥವಾದರೂ ಏನು?
ಗಣೇಶನಿಗೆ ಆನೆಯ ತಲೆ ಬಂದ ಕತೆಯಂತೂ ನಮ್ಮೆಲ್ಲಾರೀಗೂ ಪರಿಚಿತ.ಪಾರ್ವತಿಯು ತನ್ನ ಟಿಶ್ಯೂ ಗಳಿಂದ ಗಣೇಶನನ್ನು ಸೃಸ್ಟಿಸಿದ್ದು, ತಾಯಿಯ ಮಾತಿನಂತೆ ಗಣೇಶ ಶಿವನನ್ನು ತಡೆದದ್ದು, ಕೋಪಗೊಂಡ ಶಿವ ಗಣೇಶನ ತಲೆಯನ್ನು ಕಡಿದದ್ದು, ನಂತರ ಪಾರ್ವತಿಯ ಕೋರಿಕೆಯಂತೆ ಆನೆಯ ತಲೆಯನ್ನು ತಂದು, ಪ್ಲಾಸ್ಟಿಕ್ ಸರ್ಜರಿ ಮೂಲಕ ಜೋಡಿಸಿದ್ದು ನಮೆಗೆಲ್ಲ ತಿಳಿದ ಕತೆಯೇ. ಹಾಗಾದರೆ ಗಣೇಶ ಹುಟ್ಟಿದ್ದೇ ಸ್ತ್ರೀ – ಪುರುಷ ಸಮಾಗಮ ವಿಲ್ಲದೆಯೇ ಎಂದಾಯಿತು. ಈ ರೀತಿ ಕೂಡ ಜೀವಿಗಳು ಹುಟ್ಟಬಹುದು ಎಂಬ ಫಿಕ್ಷನ್ ನಮಗೆ ದೊರೆತದ್ದು ಈ ಕತೆಯಿಂದ. (ಇದನ್ನು ಇಂಗ್ಲಿಷ್ ನಲ್ಲಿ Parthenogenisis ಅಂತಾರೆ). ಗಣೇಶನಷ್ಟೇ ಅಲ್ಲದೆ, ಕರ್ಣ, ಆಂಜನೇಯ,ವಸಿಷ್ಠ,ಅಗಸ್ತ್ಯ ಮುಂತಾದವರು ಈ ಪಾರ್ಥೇನೋಜೆನಿಸಿಸ್ ಎಂಬ ಟೆಕ್ನಾಲಜಿಯ ಮೂಲಕ ಹುಟ್ಟಿದ್ದು ಎಂದು ಪುರಾಣಗಳಲ್ಲಿ ಉಲ್ಲೇಖವಿದೆ.
ಇನ್ನು ಗಣೇಶನ ತಲೆಯ ಬದಲು ಆನೆಯ ತಲೆ ಜೋಡಿಸಲು ನಡೆದ ಪ್ಲಾಸ್ಟಿಕ್ ಸರ್ಜರಿ (ಇದನ್ನು ವೈದ್ಯ ವಿಜ್ಞಾನದಲ್ಲಿ hetero – transplant ಅಂತಾರೆ) ಯಲ್ಲಿ ಬಿಸಿ ಸಕ್ಕರೆ ಪಾಕವನ್ನು ಉಪಯೋಗಿಸಲಾಯಿತು ಎಂಬುದು ನಮಗೆ ಈ ಕತೆಯಿಂದ ದೊರೆತ ಫಿಕ್ಷನ್. ಈ ರೀತಿಯ hetero – transplant ಗಳ ಪ್ರಯೋಗ ಬರೀ ಗಣೇಶನ ಮೇಲಷ್ಟೇ ಅಲ್ಲ ಶಿವನ ತಂದೆ ದಕ್ಷ (ಆಡಿನ ತಲೆ), ಹಯಗ್ರೀವ (ಕುದುರೆಯ ತಲೆ) ರ ಮೇಲೂ ನಡೆದಿದೆಯಂತೆ. ಅಷ್ಟೇ ಅಲ್ಲ ಆನೆಯ ತಲೆಯೇ ಯಾಕೆ ಎಂಬ ಪ್ರಶ್ನೆಗೂ ಇಲ್ಲೇ ಉತ್ತರ ಅಡಗಿದೆ. ಮನುಷ್ಯನ ಅತಿ ಸಮೀಪ ಸಸ್ತನಿ ಎಂದರೆ ಆನೆಯೇ ಅಲ್ಲವೇ? (ಈ ರೀತಿ ಅರ್ಧ ಮಾನವ ಇನ್ನರ್ಧ ಪ್ರಾಣಿ ರೀತಿಯ ಹೋಲಿಕೆಗಳನ್ನು ಹೊಂದಿರುವ ಜೀವಿಗಳನ್ನು zoomorphic ಅಂತಾರೆ )
ಇನ್ನು ಗಣೇಶನ ಹೊಟ್ಟೆ ನೋಡಿದೊಡನೆ ನಮಗೆ ಬರುವ ಮೊದಲ ಶಂಕೆ – ಇಷ್ಟು ದಪ್ಪ ಹೊಟ್ಟೆ ಇದ್ದರೆ ಖಂಡಿತ acidity ಬರುತ್ತೆ. ಹಾಗಾದರೆ ಗಣೇಶನಿಗೆ acidity ಬಂದಿಲ್ಲವಾದರೂ ಯಾಕೆ? ಗಣೇಶನ ಶ್ಲೋಕವೊಂದರಲ್ಲೇ ಇದಕ್ಕೆ ಉತ್ತರ ಅಡಗಿದೆ – ” ಕಪಿತ್ಥ ಜಂಬೂಫಲ ಸಾರ ಭಕ್ಷಿತಂ ” ಅಂದರೆ ಗಣೇಶ ಯಾವಾಗಲೂ ಜಂಬೂಫಲ (White apple ಅಥವಾ rose apple ) ಗಳನ್ನು ತಿನ್ನುತ್ತಿದ್ದನಂತೆ. ನಮಗೆಲ್ಲ ತಿಳಿದಿರುವಂತೆ Rose apple helps to detoxify the liver, improve digestion and protects against diabetes.
ಇನ್ನು ಮನುಷ್ಯನಲ್ಲಿರುವ ಬೊಜ್ಜಿಗೂ ಅವನ ಆರೋಗ್ಯಕ್ಕೂ ಯಾವುದೇ ಸಂಬಂಧವಿಲ್ಲ. ದಪ್ಪಗಿರುವವರ ಆಯಸ್ಸು ಇತರರ ಆಯಸ್ಸಿಗಿಂತ ಅಧಿಕ ಎಂದು ಪದ್ಮಭೂಷಣ ಡಾ.ಹೆಗ್ಡೆ ಯವರ ಭಾಷಣದಲ್ಲಿ ಕೇಳಿದ ನೆನಪು. ಅದೇ ರೀತಿ ಗಣೇಶನ ಕೈಲಿರುವ ಸಿಹಿ ಕೂಡ. ಸಿಹಿ ತಿನ್ನುವುದಕ್ಕೂ ಮನುಷ್ಯನ ಆರೋಗ್ಯಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದು ಸಹ ಆಯುರ್ವೇದದಲ್ಲಿ ಲಿಖಿತವಂತೆ (ಸಿಹಿ ಬೇರೆ ಸಕ್ಕರೆ ಬೇರೆ. ಸಕ್ಕರೆ ತಿನ್ನುವುದರಿಂದ ಖಾಯಿಲೆ ಬರಬಹುದು ಆದರೆ ಸಿಹಿ ತಿನ್ನುವುದರಿಂದ ಅಲ್ಲ.. ನೆನಪಿಡಿ- ಬೆಲ್ಲ ಕೂಡ ಸಿಹಿ ಪದಾರ್ಥ)
ಇನ್ನು ಗಣಿತ ಕ್ಷೇತ್ರಕ್ಕೂ ಗಣೇಶನ ಕೊಡುಗೆ ಅಪಾರ. ನಮಗೆಲ್ಲ ತಿಳಿದ ಹಾಗೆ ಗಣ ಎಂದರೆ ಗುಂಪು (In mathematics, it is called as Groups or set theory) ಇಂತಹ ಗಣಗಳಿಗೆ ಈಶನೇ ಗಣೇಶ (derivatives of groups is called as Ganitham). ಅಷ್ಟೇ ಅಲ್ಲ ಶಿವನು ಆತ್ಮ ತತ್ವಕ್ಕೂ,ಶಕ್ತಿಮಾತೆಯು ಜಗತ್ ತತ್ವಕ್ಕೂ, ಸ್ಕಂದನು ಜೀವ ತತ್ವಕ್ಕೂ, ಒಡೆಯನ್ನಾದರೆ ವಾಕ್ ತತ್ವದ ಒಡೆಯ ಈ ಗಣೇಶ. ಹಾಗಾಗಿಯೇ ಮಹಾಭಾರತವನ್ನು ಬರೆಯಲು ವೇದವ್ಯಾಸರು ಕ್ಯಾಲಿಗ್ರಫಿ ಗಾಗಿ ಆಯ್ದುಕೊಂಡಿದ್ದು ಗಣೇಶನನ್ನೇ. “ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ” ಎಂಬ ಶ್ಲೋಕದಲ್ಲಿ ಕೂಡ ಸೂರ್ಯನ ವಿಕಿರಣಗಳು ಶಕ್ತಿಯ ರೂಪವೆಂದು ಸಹ ಹೇಳಲಾಗಿದೆ.
ಹೇ ಗಣೇಶ.. ನೀನೆಷ್ಟು ವಿಶಿಷ್ಟನೋ, ಅಷ್ಟೇ ವಿಚಿತ್ರ ಕೂಡ. ನೀನೆಷ್ಟು ವಿಚಿತ್ರನೋ ಅಷ್ಟೇ ವಿಜ್ಞಾನ ಕೂಡ. ನಮ್ಮೆಲ್ಲರ ವಿಘ್ನಗಳನ್ನೂ ಪರಿಹರಿಸಿ, ನಮಗೆ ಸುಖ ಶಾಂತಿ ನೀಡು…”ಗಣಪತಿ ಬಪ್ಪ ಮೋರಯಾ”
ಚಿತ್ರೋದ್ಯಮ.ಕಾಂ ನ ಎಲ್ಲ ಲೇಖಕರಿಗೂ, ಓದುಗರಿಗೂ, ಜಾಹಿರಾತುದಾರರಿಗೂ ಗಣೇಶ ಹಬ್ಬದ ಶುಭಾಶಯಗಳು. ಈ ಕರೋನ ಸಮಯದಲ್ಲಿ ಆ ಗಣೇಶ ನಿಮಗೆಲ್ಲ ಒಳ್ಳೆಯ ಆರೋಗ್ಯಭಾಗ್ಯ ವನ್ನು ದಯಪಾಲಿಸಲಿ ಎಂದು ಆ ವಿಘ್ನ ವಿನಾಯಕನಲ್ಲಿ ನಮ್ಮ ಪ್ರಾರ್ಥನೆ.