ನಾನು ನೋಡಿದ ಕನ್ನಡ ಚಿತ್ರ

ದ್ರೋಣ (೦೬/೦೩/೨೦೨೦)
ತಾ: ಡಾ.ಶಿವರಾಜ್ ಕುಮಾರ್,ಇನಿಯಾ
ರಂಗಾಯಣ ರಘು
ನಿರ್ದೇಶಕರು: ಪ್ರಮೋದ್ ಚಕ್ರವರ್ತಿ

ಇಂದಿನ ಶಿಕ್ಷಕರಿಗೆ ರೋಲ್ ಮಾಡೆಲ್ ಆದ ದ್ರೋಣ
ನಾಯಕ ಗುರು (ಡಾ.ಶಿವರಾಜ ಕುಮಾರ್) ಸರ್ಕಾರಿ ಶಾಲೆಯ ಶಿಕ್ಷಕ ತನ್ನ ಶಾಲೆಯನ್ನು ಉದ್ಧರಿಸಲು ಎದುರಾಗುವ ಸವಾಲುಗಳನ್ನು ಎದುರಿಸಬೇಕು. ಆದರೆ ಶಾಲಾ ಮಂಡಳಿಯ, ಶಿಕ್ಷಕರ ತಾತ್ಸಾರ,ಪರಿಸರ, ಅಸಹಾಯಕ ಸ್ಥಿತಿಯಲ್ಲಿರುವ ವಿದ್ಯಾರ್ಥಿಗಳು, ಅಸಿಸ್ಟೆಂಟ್ ಹೆಡ್ ಮಾಸ್ಟರ್ ನ ಸೇಡು ಇವೆಲ್ಲವನ್ನು ಎದುರಿಸಿ ಹೇಗೆ ಯಶಸ್ವಿ ಶಿಕ್ಷಕರಾಗುತ್ತಾರೆ ಎನ್ನುವುದೇ ಈ ಕಥೆಯ ಹೈಲೈಟ್. ನಿರ್ದೇಶಕ ಪ್ರಮೋದ್ ಚಕ್ರವರ್ತಿ ಒಂದು ಉತ್ತಮ ವಿಷಯವನ್ನೊಳಗೊಂಡ ಕಥೆಯನ್ನು ಚಿತ್ರ ರೂಪದಲ್ಲಿ ತರುವಲ್ಲಿ ಯಶಸ್ವಿಯಾಗಿದ್ದಾರೆ. ಅದೇ ಶಾಲೆಯ ಅಸಿಸ್ಟೆಂಟ್ ಹೆಡ್ ಮಾಸ್ಟರ್ ಶಾಲೆಗೆ ಬರುವ ಕಂಪ್ಯೂಟರ್, ಆಹಾರ ಸಾಮಗ್ರಿಗಳನ್ನು ಕೊಳ್ಳೆ ಹೊಡೆದು ಹಣ ಮಾಡುವ ಬಾಕ ಕುತಂತ್ರದಿಂದ ನಾಯಕ ಗುರು (ಡಾ.ಶಿವರಾಜ ಕುಮಾರ್) ನನ್ನು ಜೈಲಿಗೆ ಕಳುಹಿಸುತ್ತಾನೆ. ಅವನ ಶಾಲೆಯ ಹೀನ ಸ್ಥಿತಿಗೆ ಕಾರಣ ಕೂಡ.

ಇವನ ಅವ್ಯವಹಾರಗಳನ್ನು ಬಯಲು ಮಾಡುವ ಗುರು ವಿದ್ಯಾರ್ಥಿಗಳಿಗೆ ರೋಲ್ ಮಾಡೆಲ್ ಆಗುತ್ತಾರೆ. ಮತ್ತು ಇತರೆ ಶಿಕ್ಷಕರಿಗೂ ಮಾದರಿಯಾಗುತ್ತಾರೆ. ಹಿಂದಿನ ಶಾಲೆಯಲ್ಲಿ ಚುನಾವಣೆಯ ಅವ್ಯವಹಾರವನ್ನು ತಡೆದ ಸಿಟ್ಟಿಗಾಗಿ ಕಾಯುವ ಖಳನಾಯಕ ಅಸಿಸ್ಟೆಂಟ್ ಹೆಡ್ ಮಾಸ್ಟರ್ ನ ಸಂಬಂಧಿ ಶಿಕ್ಷಕ ಗುರುವಿನ ವಿರುದ್ಧ ಏನೆಲ್ಲ ಸಂಚು ಮಾಡಿದರೂ ಎಲ್ಲವನ್ನೂ ದಾಟಿ ತನ್ನ ವಿದ್ಯಾರ್ಥಿಗಳನ್ನು ಗೆಲ್ಲಿಸುತ್ತಾರೆ. ನಂತರ ಖಳನಾಯಕನಿಂದ ಮಾರಣಾಂತಿಕ ಹಲ್ಲೆಗೊಳಗಾದರೂ ಕಡೆಗೆ ಏನಾಗುತ್ತದೆ ಎನ್ನುವ ಕುತೂಹಲ ಕಾರಿ ಅಂಶಗಳು ಚಿತ್ರದಲ್ಲಿವೆ.

ಡಾ.ಶಿವರಾಜ ಕುಮಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡು ಚಿತ್ರ ಪೂರ್ತಿ ಆವರಿಸಿಕೊಂಡಿದ್ದಾರೆ. ಉಳಿದಂತೆ ರಂಗಾಯಣ ರಘು, ರವಿಕಿಶನ್, ಸ್ವಾತಿ ಶರ್ಮಾ, ಶಾಲಾ ಮಕ್ಕಳ ಪಾತ್ರಗಳು ಪ್ರೇಕ್ಷಕರ ಮನಸ್ಸನ್ನು ಗೆದ್ದಿವೆ. ಚಿತ್ರದಲ್ಲಿ ಬರುವ ಸನ್ನಿವೇಶ, ಹಾಡು, ಫೈಟ್ ಎಲ್ಲ ಸೇರಿದ್ದು ತಾಂತ್ರಿಕ ತಂಡವು ಚಿತ್ರವನ್ನು ಸುಂದರವಾಗಿ ತಯಾರಿಸಿದ್ದರೂ ಮಧ್ಯದಲ್ಲಿ ಸ್ವಲ್ಪ ಬೇಸರ ಮೂಡಿಸುತ್ತಾದರೂ ಕಥೆಯೇ ಆಕರ್ಷಕವಾಗಿರುವುದರಿಂದ ಎಲ್ಲಿಯೂ ತಪ್ಪು ಕಂಡು ಬರುವುದಿಲ್ಲ. ಪ್ರತಿಯೊಬ್ಬರೂ ಕುಳಿತು ನೋಡಿ ಸಂದೇಶವನ್ನು ತಿಳಿದುಕೊಳ್ಳುವ ಚಿತ್ರವಾಗಿದೆ.

ಸಂದೀಪ ಜೋಶಿ

ಸಂದೀಪ ಜೋಶಿ

ಸಂದೀಪ್ ಜೋಶಿ - ಇವರು ಕೊಪ್ಪಳ ಜಿಲ್ಲೆಯ ಗಂಗಾವತಿ ನಿವಾಸಿಯಾಗಿದ್ದು ಪ್ರಸ್ತುತ ಸ್ವ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಬಿ.ಎ.ಮತ್ತು ಡಿಪ್ಲೊಮಾ ಇನ್ ಹಾರ್ಟಿಕಲ್ಚರ್, ಸಿ.ಟಿ.ಟಿ.ಸಿ ತರಬೇತಿ, ರೇಕಿ ಚಿಕಿತ್ಸೆ ತರಬೇತಿಯನ್ನು ಪಡೆದಿದ್ದು 13 ವರ್ಷಗಳ ಕಾಲ ರಾಯಚೂರು, ಧಾರವಾಡ ಕೃಷಿ ವಿಶ್ವವಿದ್ಯಾಲಯ ಮತ್ತು ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾನಿಲಯದಲ್ಲಿ ಕ್ಷೇತ್ರ ಸಹಾಯಕ, ಗಣಕಯಂತ್ರ ನಿರ್ವಾಹಕ ಕೆಲಸವನ್ನು ನಿರ್ವಹಿಸಿದ್ದಾರೆ. ಇವರು ಲೇಖಕರಷ್ಟೇ ಅಲ್ಲ.‌ನಟರು ಕೂಡ. ವೃತ್ತಿಯ ಜೊತೆಗೆ ರೇಕಿ ಚಿಕಿತ್ಸೆ ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಸಂದೀಪ್‌ ಜೋಶಿ ಚಿತ್ರೋದ್ಯಮ.ಕಾಂ ಬರಹಗಾರರ ತಂಡದ ಬಹು ಮುಖ್ಯ ಸದಸ್ಯ. ಸಂದೀಪ್ ಜೋಶಿಯವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply