ಗಂಗರಾಜು ಗೋವಿಂದರಾಜು “ಹಂಸಲೇಕ” ಅವರ ಮೂಲ ನಾಮ,1951 ಜೂನ್ 23 ರಂದು ಮ0ಡ್ಯಾದಲ್ಲಿ ಜನಿಸಿದರು. ವಿದ್ಯಾರ್ಥಿ ಆಗಿರುವ ಸಮಯದಿಂದಲು ಕವಿತೆ, ಹಾಡುಗಳನ್ನ ಬರೆಯುವ ಅಭ್ಯಾಸವಿತ್ತು, swan ಕಂಪನಿಯ ಲೇಖನ (pen) ಅಂದ್ರೆ ಬಹಳ ಇಷ್ಟ, ಹಾಡು ಕವನಗಳನ್ನರಚಿಸಲು ಅದನ್ನೇ ಹೆಚ್ಚಾಗಿ ಬಳಸುತ್ತಿದ್ದರಿಂದ ತಮ್ಮ ಹೆಸರನ್ನ “ಹಂಸಲೇಖ” ಎಂದು ಮರು ನಾಮಕರಣ ಮಾಡಿಕೊಂಡರು.
1973ರಲ್ಲಿ ಉದಯ್ ಕುಮಾರ್ ಅಭಿನಯಿಸಿದ ತ್ರಿವೇಣಿ ಸಿನಿಮಾಗೆ “ನೀನಾ ಭಗವಂತ” ಅನ್ನೋ ಹಾಡು ಮುಖಾಂತರ ಸಿನಿಮಗಳಿಗೆ ಚಿತ್ರ ಗೀತೆ ಬರೆಯಲು ಆರಂಭವಾಯಿತು. 1986-1987 ಸಾಲಿನಲ್ಲಿ ತೆರೆಕಂಡ, ವಿ.ರವಿಚಂದ್ರನ್ ಅವರ “ನಾನು ನಾನ್ನ ಹೆಂಡತಿ”,”ಪ್ರೇಮಲೋಕ” ಸಿನಿಮಾಗಳಲ್ಲಿ ಪೂರ್ಣ ಪ್ರಮಾಣದ ಸಾಹಿತ್ಯಗಾರನಾಗಿ ಮತ್ತು ಸಂಗೀತ ನಿರ್ದೇಶಕನಾಗಿ ಕೆಲಸ ಮಾಡಿದರು. ಅದಕ್ಕೆ ಸಿಕ್ಕ ಯಶಸ್ಸು ಮಾತ್ತು ಜನಪ್ರಿಯತೆ ಕೇವಲ ಎರಡು ಸಾಲುಗಳಲ್ಲಿ ವರ್ಣಿಸಲಾಗದು.
ಹಿರಿಯರುಕಿರಿಯರು ಎನ್ನದೆ ಎಲ್ಲರೂ ಹಂಸಲೇಖಾರ ಹಾಡಿಗೆ ಅಭಿಮಾನಿಗಳಾಗಿ ಬಿಟ್ಟರು. ಪ್ರೇಮಲೋಕದ ನಂತರ ಅವರ ವೃತ್ತಿ ಜೀವನದಲ್ಲಿ ಹಿಂತುರುಗಿ ನೋಡಲೇ ಇಲ್ಲ ಅಂತಹ ಸಂದರ್ಭವು ಬರಲಿಲ್ಲ.. ರಾಜ್ಕುಮಾರ್, ವಿಷ್ಣುವರ್ಧನ್, ಅಂಬರೀಷ್ಶಂಕರನಾಗ್, ಅನಂತನಾಗ್, ಶಿವರಾಜ್ಕುಮಾರ್, ರಮೇಶ್ಅರವಿಂದ್, ಕಾಶಿನಾಥ್, ಉಪೇಂದ್ರ, ಹಾಗೂ ಕನ್ನಡದ ಎಲ್ಲಾ ಹೀರೋಗಳಿಗೆ ಸೂಪರ್ ಹಿಟ್ಹಾಡುಗಳನ್ನನೀದುವುದರೆ ಜೊತೆಗೆ ಅವರ ಅಭಿಮಾನಿಗಳು ನೆಚ್ಚಿನ ನಾಯಕನನ್ನು ಹೇಗೆ ನೋಡಲು ಬಯಸುತ್ತಿದ್ದರೋ,ಅವರ ನಾಡಿ ಮಿಡಿತ ಅರಿತು ಹಾಡಿನಲ್ಲಿ ಆಯಾ ನಟರಿಗೆಅನುಗುಣವಾಗುವಂತೆಬಿಂಬಿಸುವುದರಲ್ಲಿ ಪರಿಣಿತರು.
500ಸಿನಿಮಾಗಳಿಗೆ ಸದಭಿರುಚಿಯ ಸಂಗೀತ ನೀಡಿರುವ ಕೀರ್ತಿಇವರಿಗೆಸಲ್ಲುತ್ತದೆ ಹತ್ತು ಹಲವು ಯುವ ಗಾಯಕರನ್ನಪರಿಚಯಿಸಿ ಅವರನ್ನ ಕೂಡ ಸ್ಟಾರ್ ಸಿಂಗರ್, ಮ್ಯೂಸಿಕ್ಡೈರೆಕ್ಟಿರ್ಸ್ಗಳನ್ನಾಗಿಮಾಡಿದ್ದಾರೆ. ಸಿನಿಮಾ ಸಂಗೀತ್ ಕ್ಷೇತ್ರಗಳಲ್ಲಿ ಇವರ ಕೊಡುಗೆ ಸಾಧನೆಗಳನ್ನು ಪರಿಗಣಿಸಿ ಹಲವು ಸಂಸ್ಥೆಗಳು ಜೀವಮಾನ ಸಾಧನೆ ಪ್ರಶಸ್ತಿ ನೀಡಿದೆ. ಉತ್ತಮ ಸಂಗೀತ ನಿರ್ದೇಶನಕ್ಕೆ 6 ಫೈಲ್ಮ್ಫೆರ್ ಪ್ರಶಸ್ತಿ 5 ರಾಜ್ಯ ಪ್ರಶಸ್ತಿ ಹಾಗೂ 1 ರಾಷ್ಟ್ರ ಪ್ರಶಸ್ತಿ ಕೂಡ ಲಭಿಸಿದೆ,ಹಂಸಲೇಖ ಅವರ ಸಾಧನೆ ಮತ್ತು ಅವರು ಕೈಂಕರ್ಯಗಳ ಬಗ್ಗೆ ಎಷ್ಟು ಬರೆದರು ಕಡಿಮೆಯೇ….. ಒಂದು ಕೈಯಲ್ಲಿ ವಾದ್ಯ ಮತ್ತೊಂದು ಕೈಯ್ಯಲ್ಲಿ ಲೇಖನ ಹಿಡಿದ ಸರಸ್ವತಿ ಪುತ್ರ.
ಮುಖ್ಯವಾಗಿ ರವಿಚಂದ್ರನ್ ಅವರ ವರ್ಣರಂಜಿತಕನಸನ್ನ, ಹಂಪೆಯಶೀಲಾಶಾಸನವನ್ನ , ಕನ್ನಡದ ಕಂಪನ್ನ, ಕರ್ನಾಟಕದ ಕೀರ್ತಿಯನ್ನ, ಹೆಣ್ಣಿನಹಿರಿಮೆಯನ್ನ, ಗಂಡಿನಗರಿಮೇಯನ್ನ, ನೋಂದವರಿಗೆ ಸಾಂತ್ವನ, ಭಕ್ತಿ ಸುಧೆಯನ್ನ, ಪ್ರಕೃತಿಯ ಸೊಬಗನ್ನ, ಗ್ರಾಮೀಣ ಸೊಗಡನ್ನ ಪದಗಳಾಗಿ ಇಂಕಿಸಿ,
ಶ್ರುತಿಯೆಂಬ ಉಯ್ಯಾಲೆಯಲ್ಲಿ ಕೂಡಿಸಿ ಆಡಲು ಬಿಟ್ಟ ಕಲಾ ಮಾಂತ್ರಿಕನಾದ ಬ್ರಹ್ಮ, ಸಂಗೀತ ಸಾಮ್ರಾಟ್ಡಾ. ಹಂಸಲೇಖ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು…