ಬರೀ ಹಾವಲ್ಲ ಮೇಷ್ಟ್ರೆ 🐍ನಾಗರಹಾವು ರಾಮಾಚಾರಿ ಪಾತ್ರ ಅಭಿನಯಿಸಿ ಪುಟ್ಟಣ್ಣ ಕಣಗಾಲ್ ರವರ ಗರಡಿಯಲ್ಲಿ ಬೆಳೆದ ಮೈಸೂರಿನ ಸಂಪತ್ ಕುಮಾರ್ ನಂತರ ಹಲವಾರು ಚಿತ್ರಗಳಲ್ಲಿ ವಿಭಿನ್ನ ರೀತಿಯ ಅಭಿನಯ ನೀಡಿ ನಿಜವಾದ ಪ್ರೀತಿಯ ಆಳವನ್ನು ಜನರಿಗೆ ಪರಿಚಯಿಸಿ ಪ್ರೇಮ ಕಥೆ ಹೇಳುವ ಚಿತ್ರ ಬಂಧನ ಅವರ ನಟನೆ ಅಮೋಘ💜 ಕನಾ೯ಟಕದ ಕುಳ್ಳ ದ್ವಾರಕೀಶ್ ಜೊತೆ ಸ್ನೇಹ ಬಾಂಧವ್ಯ ಬೆಸೆದು ಕಿಟ್ಟು ಪುಟ್ಟು ರಾಯರು ಬಂದರು ಮಾವನ ಮನೆಗೆ ಆಪ್ತಮಿತ್ರ ತೋರಿಸಿ ನೆಚ್ಚಿನ ಜಲೀಲ ಅಂಬರೀಷ್ ರವರ ಜೊತೆ ಸೇರಿ ಹಬ್ಬ ಮಾಡಿ ಗೆಳೆತನದ ಸಂಕೇತವಾಗಿ ದಿಗ್ಗಜರು ಚಿತ್ರ ಮಾಡಿ ನಿಜವಾದ ಕುಚಿಕು ಅಭಿನಯ ನೀಡಿ ಪ್ರೀತಿಯ ಭಾರತಿ ಮೇಡಂ ರವರ ಜೊತೆ ಮುತ್ತಿನ ಹಾರ ಪೋಣಿಸಿ ಕುಟುಂಬದ ಯಜಮಾನ ರಾಗಿ ಮನೆಗೆ ಸಿರಿವಂತರಾಗಿ ಜನರಿಗೆ ವಿಷ್ಣು ಸೇನೆ ಶಕ್ತಿ ತೋರಿಸಿ ಸಾಹಸ ಸಿಂಹ ಮಲಯ ಮಾರುತ ಖೈದಿ ಸುಪ್ರಭಾತ ತಿಳಿಸಿ ಲಾಲಿ ಹಾಡಿ ನಮ್ಮ ಕರುನಾಡ ದೇವರ ಜೊತೆ ಗಂಧದ ಗುಡಿಯಲ್ಲಿ ತಮ್ಮನ ಪಾತ್ರವನ್ನು ಮಾಡಿ ಸೂಯ೯ವಂಶ ಸಿಂಹಾದ್ರಿಯ ಸಿಂಹ ಜಮೀನ್ದಾರ ಎಲ್ಲ ಅಭಿಮಾನಿಗಳಿಗೂ ಆಪ್ತರಕ್ಷಕರಾಗಿ ಕನ್ನಡ ಚಿತ್ರರಂಗವನ್ನು ಆಳಿದ ಸಾಹಸ ಸಿಂಹ ಅಭಿನಯ ಭಾಗ೯ವ ಅಭಿಮಾನಿಗಳ ಪ್ರೀತಿಯ ಯಜಮಾನ ಡಾ. ವಿಷ್ಣುವಧ೯ನ್ ಸರ್ ರವರು ನಮ್ಮನ್ನು ಅಗಲಿ ಇಂದಿಗೆ 11 ವಷ೯ಗಳು 🌹
ಮರೆಯದ ನೆನಪನು ಎದೆಯಲ್ಲಿ ತಂದೆ ನೀನು…
ಇವರು ನಟಿಸಿದ ಪಾತ್ರಗಳು ಎಂದಿಗೂ ಜೀವಂತ..
🍀ನಾಗರಹಾವು ರಾಮಾಚಾರಿ
👒ಮುತ್ತಿನ ಹಾರ ಮೇಜರ್ ಅಚ್ಚಪ್ಪ
🌺ಬಂಧನ ಡಾ ಹರೀಶ್ – ಲವ್ ಪ್ರಪೋಸ್ ಮತ್ತು ಹಾಟ್೯ ಬ್ರೇಕಿಂಗ್ ಸೀನ್.
🌲ಸಿರಿವಂತ ನಾರಾಯಣ ಮೂರ್ತಿ.
🌻ದಿಗ್ಗಜರು ದೊಡ್ಡಯ್ಯ ಚಿಕ್ಕಯ್ಯ.
💐ಸೂಯ೯ವಂಶ ಸತ್ಯಮೂತಿ೯, ಕನಕಮೂತಿ೯.
💜ಹೃದಯವಂತ ಶಿವಪ್ಪ.
🔫 ಕದಂಬ ಎಸಿಪಿ ಮಧುಕೇಶ್ವರ್.
🦚ಸಿಂಹಾದ್ರಿಯ ಸಿಂಹ ತ್ರಿಪಾತ್ರ.
🏍ಆಪ್ತಮಿತ್ರ ಡಾ ವಿಜಯ್
🌺ಮಾತಾಡ್ ಮಾತಾಡ್ ಮಲ್ಲಿಗೆ ಹೂವಯ್ಯ.
🌲ಯಜಮಾನ ಶಂಕರ ಗಣೇಶ.
👁🗨ಆಪ್ತರಕ್ಷಕ ಡಾ ವಿಜಯ್, ವಿಜಯ ರಾಜೇಂದ್ರ ಬಹದ್ದೂರ್.
ಕನ್ನಡವಲ್ಲದೆ ಹಿಂದಿ, ತಮಿಳು, ತೆಲುಗು ಮಲಯಾಳಂ ಭಾಷೆಯಲ್ಲಿ ನಟನೆ.
ಬಾಲಿವುಡ್ ನಟ ಅಕ್ಷಯ್ ಕುಮಾರ್ ಇವರ ಜೊತೆ ವಿಷ್ಣು ವಿಜಯ ಚಿತ್ರದಲ್ಲಿ ನಟನೆ.
ಖ್ಯಾತ ನಟಿ ಭಾರತಿ ರವರೊಡನೆ 17 ಫೆಬ್ರುವರಿ 1975 ರಂದು ವಿವಾಹ , ಕೀತಿ೯ ಮತ್ತು ಚಂದನ ದತ್ತು ಪುತ್ರಿಯರು, ಕೀತಿ೯ ಖ್ಯಾತ ನಟ ಹಾಗೂ ಕಿರುತೆರೆ ಕಲಾವಿದ ಅನಿರುಧ್ ಜೊತೆ ವಿವಾಹ, ಇಬ್ಬರು ಮಕ್ಕಳು.
ನಟರಾಗಲ್ಲದೆ ಗಾಯಕರಾಗಿ ಗಮನ ಸೆಳೆದ ಸಂಪತ್ ಕುಮಾರ್.
🌺ಜಿಮ್ಮಿಗಲ್ಲು – ತುತ್ತು ಅನ್ನ ತಿನ್ನೋಕೆ.
🌲ನಾಗ ಕಾಳ ಭೈರವ -ನಗುವುದೇ ಸ್ವಗ೯ .
🦁 ಸಾಹಸ ಸಿಂಹ – ಹೇಗಿದ್ದರೂ ನೀನೇ ಚೆನ್ನ.
🐯 ಹುಲಿ ಹೆಜ್ಜೆ -ಕಂಡದ್ದ ಕಂಡಾಂಗೆ.
🌻ಮೋಜುಗಾರ ಸೊಗಸುಗಾರ -ಕನ್ನಡವೇ ನಮ್ಮಮ್ಮ.
🦚ವಿಷ್ಣು ಸೇನ – ಅಭಿಮಾನಿಗಳೇ ನನ್ನ ಪ್ರಾಣ.
ಗಾನ ಗಾರುಡಿಗ ಎಸ್ ಪಿ ಬಿ ಮತ್ತು ಇವರ ಸ್ನೇಹ ಹೇಗಿತ್ತನ್ನೋದು ಹಾಡುಗಳಲ್ಲೇ ಗೊತ್ತಾಗುತ್ತೆ, ವಿಷ್ಣು ರವರಿಗೆ ಮೊದಲ ಹಾಡನ್ನು ಹಾಡಿದ ‘ಮಾಮರವೆಲ್ಲೊ ಕೋಗಿಲೆಯೆಲ್ಲೋ ಕೊನೆ ಹಾಡಿನವರೆಗೂ ಇಬ್ಬರ ಬಾಂಧವ್ಯ ಹಾಗೆ ಉಳಿದಿತ್ತು. ವಿಷ್ಣು ರವರೇ ಎಸ್ ಪಿ ಬಿ ಹತ್ತಿರ ಕೇಳಿಕೊಂಡ ಹಾಗೆ ಇವರ ಚಿತ್ರದಲ್ಲಿ ಎಸ್ ಪಿ ಬಿ ಹಾಡು ಇರಲೇಬೇಕು ಅಂತ. ಎಸ್ ಪಿ ಬಿ ರವರ ಯಾವುದೇ ಹುಟ್ಟಿದ ಹಬ್ಬ ಮಿಸ್ ಮಾಡ್ಕೊತಿಲಿ೯ಲ್ಲ.
ಇನ್ನೂ ನಮಗೆಲ್ಲ ಗೊತ್ತಿದೆ ಜಲೀಲ ಅಂಬರೀಷ್ ಮತ್ತು ಇಬ್ಬರ ಸ್ನೇಹ ಎಂಥದು ಅನ್ನೋದು ಹಾಗೆ ಜೊತೆ ನಟಿಸಿದ ಚಿತ್ರಗಳು ಸಾಕ್ಷಿ.
ರಾಜ್ ಕುಮಾರ್, ರಜಿನಿಕಾಂತ್, ಶ್ರೀನಾಥ್, ದ್ವಾಕೀ೯ಶ್, ಶಂಕರ್ ನಾಗ್, ಅನಂತ್ ನಾಗ್, ರಮೇಶ್ ಅರವಿಂದ್ , ಸುದೀಪ್, ದಶ೯ನ್ ಜೊತೆ ನಟಿಸಿದ್ದಾರೆ .
ಕನಾ೯ಟಕ ಸಕಾ೯ರದ ಪ್ರಶಸ್ತಿ ಪಟ್ಟಿ :
🌹ಅತ್ಯುತ್ತಮ ನಟ -ನಾಗರಹಾವು, ಹೊಂಬಿಸಿಲು, ಬಂಧನ, ಲಯನ್ ಜಗಪತಿ ರಾವ್, ಲಾಲಿ, ವೀರಪ್ಪ ನಾಯಕ, ಆಪ್ತರಕ್ಷಕ ಚಿತ್ರಗಳಿಗೆ ಲಭಿಸಿವೆ.
🍀ಜೀವಮಾನ ಸಾಧನೆ ಪ್ರಶಸ್ತಿ ಡಾ ರಾಜ್ ಕುಮಾರ್ ಲೈಫ್ ಆಚಿವ್ ಮೆಂಟ್ ಅವಾಡ್೯.
👒ಭಾರತ ಸರ್ಕಾರದಿಂದ ಅಂಚೆ ಚೀಟಿ ಬಿಡುಗಡೆ.
ಇಂಥ ಮಹಾನ್ ನಟ ಮತ್ತೊಮ್ಮೆ ಕರುನಾಡಿನಲ್ಲಿ ಹುಟ್ಟಿ ಬರಲಿ ಸಾಹಸ ಸಿಂಹ ಘಜ೯ನೆ ನೋಡಲು ಕೋಟ್ಯಾಂತರ ಅಭಿಮಾನಿಗಳ ಆಸೆ 🙏
ಚಾಮುಂಡಿ ತಾಯಿ ಆಣೆ ನಾನೆಂದು ನಿಮ್ಮೋನೆ, ಇನ್ನೆಲ್ಲ ಜನ್ಮದಲ್ಲೂ ಹುಟ್ಟೋದು ಇಲ್ಲೇನೆ ಪ್ರೀತ್ಸೋದು ಎಂದೂ ನಿಮ್ಮನೇ..