ಅಶ್ವತ್ಥ್ ನಿವೃತ್ತ ನ್ಯಾಯಾಧೀಶ. ಆತನ ಮಗ ರಘು (ರಾಜ್‍ಕುಮಾರ್). ರಘು ಹರಟೆಮಲ್ಲಿ ಲಲಿತಳನ್ನು (ಆರತಿ) ಮದುವೆ ಆಗಲೆಂದು ಅವಳ ತಂದೆ (ಸಂಪತ್) ಮತ್ತು ಅಶ್ವತ್ಥ್ ಇಬ್ಬರಿಗೂ ಆಸೆ. ಆದರೆ ರಘುವಿಗೆ ಸೈಲೆಂಟ್ ಶಾಂತಿ (ಬಿ. ಸರೋಜಾದೇವಿ) ಇಷ್ಟ.
ಅಶ್ವತ್ಥ್ ಶಾಂತಿಗೆ ದುಡ್ಡು ಕೊಟ್ಟು ಮಗನನ್ನು ಮರೆಯಲು ಹೇಳಿದರೂ ಒಂದು ಮಳೆಯ ರಾತ್ರಿ ರಘು ಶಾಂತಿ ಒಂದಾಗುತ್ತಾರೆ. ಶಾಂತಿ ಆ ರಾತ್ರಿ ಅಲ್ಲಿಂದ ಯಾರಿಗೂ ಹೇಳದೇ ಹೊರಟು ಹೋದಾಗ ಇವಳ ಸೀರೆ ಉಟ್ಟು ಇವಳ ಬ್ಯಾಗ್ ಕದ್ದಾಕಿ ರೈಲಿಗೆ ಸಿಕ್ಕಿಕೊಂಡಾಗ ಶಾಂತಿ ಆತ್ಮಹತ್ಯೆ ಮಾಡಿಕೊಂಡಳೆಂದು ಎಲ್ಲರೂ ಅಂದುಕೊಳ್ಳುತ್ತಾರೆ. ಅವಳು ಅವಳ ಚಿಕ್ಕಪ್ಪ ಎಂ. ಪಿ. ಶಂಕರ್ ಕೊಲೆ ಆಪಾದನೆ ಮೇಲೆ ಕೋರ್ಟಿಗೆ ಬಂದಾಗ ಜಡ್ಜ್ ರಘುವಿಗೆ ಶಾಕ್.
ಪಾಪಮ್ಮ ಶಾಂತಿಯ ತಾಯಿ. ದಿನೇಶ್ ಕಳ್ಳ ಸಾಗಾಣಿಕೆ ಮಾಡುತ್ತಾನೆ. ಅವನ ಮಗ ವಿವೇಕ (ದಿವಂಗತ ನಟ ರಮೇಶ್) ಪಬ್ಲಿಕ್ ಪ್ರಾಸಿಕ್ಯೂಟರ್. ದ್ವಾರಕೀಶ್ ಕುಡುಕ ಲಾರಿ ಚಾಲಕ. ಅವನ ಮೂಗಿ ಪತ್ನಿ ಬಿ. ಜಯಾ.
ಆರತಿಯ ಡಯಲಾಗ್ ಡೆಲಿವರಿ ಬಲು ವಿಶಿಷ್ಟ! ಪಿಬಿಎಸ್ ಕುಣಿದಾಡುವ ವಯಸಿದು ಮತ್ತು ಎವರ್ ಗ್ರೀನ್ ಆಕಾಶವೆ ಬೀಳಲಿ ಮೇಲೆ. ಪಿ ಸುಶೀಲ ಅವರ ಎಂದೆಂದೂ ನೀವು ಸುಖವಾಗಿರಿ ಮತ್ತು ಎಸ್ ಪಿ ಬಿ ಅವರ ಪರಮಾತ್ಮ ಆಡಿಸಿದಂತೆ ಆಡುವೆ ನಾನು. ನಾಲ್ಕೂ ಚಂದದ ಹಾಡುಗಳು.
ರಾಜ್‌ಕುಮಾರ್ ಸರೋಜಾದೇವಿ ಸಲೀಂ ಅನಾರ್ಕಲಿ ನಾಟಕ ಸಿನಿಮಾಗೆ ಪೂರಕ. ಅಕ್ಬರ್ ಆಗಿ ವಜ್ರಮುನಿ ಬಹಳ ಚೆನ್ನ.
ಅಣ್ಣಾವ್ರು ಎಲ್ಲ ತರಹದ ಎಮೋಶನ್‌ಗಳನ್ನು ಅಭಿನಯಿಸಿ ಮಿಂಚಿದ್ದಾರೆ.
ಯತಿರಾಜ್ ವೀರಾಂಬುಧಿ
ಯತಿರಾಜ್ ವೀರಾಂಬುಧಿ ವೃತ್ತಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್. ಬೆಂಗಳೂರು ಮತ್ತು ಮಸ್ಕತ್ನಲ್ಲಿ ಮೂವತ್ತಮೂರು ವರ್ಷಗಳ ಕಾಲ ಅನೇಕ ಕಂಪೆನಿಗಳಲ್ಲಿ ಸೇಲ್ಸ್ ಇಂಜಿನಿಯರ್ ಆಗಿ ದುಡಿತ. 1991ರಲ್ಲಿ ಮಂಗಳ ವಾರಪತ್ರಿಕೆಯಲ್ಲಿ ಮೊಟ್ಟಮೊದಲ ಕಥೆ ‘ವಿಪರ್ಯಾಸ’ ಪ್ರಕಟ. ನಂತರ ಮೊದಲ ಕಾದಂಬರಿ ‘ಆಪತ್ತಿಗೆ ಆಹ್ವಾನ’ ಕನ್ನಡಪ್ರಭದಲ್ಲಿ ಧಾರಾವಾಹಿ. ಹದಿನಾರು ಕಾದಂಬರಿಗಳು ವಿವಿಧ ದಿನ ಮತ್ತು ವಾರ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ, ಮಾಸಪತ್ರಿಕೆಯ ಒಂದೇ ಸಂಚಿಕೆಯಲ್ಲಿ ಪ್ರಕಟ. ಹದಿನೆಂಟು ಕಾದಂಬರಿಗಳು, ನಾಲ್ಕು ಕಥಾ ಸಂಕಲನಗಳು(ಮಂಗಳ, ಸುಧಾ, ತರಂಗ, ಮಯೂರ, ತುಷಾರ, ಈ ವಾರ, ಚಂದನ, ಮಂದಾರ ಮಲ್ಲಿಗೆ, ಕನ್ನಡಪ್ರಭ, ಚೇತನ, ಕನ್ನಡ ಜ್ಯೋತಿ, ಉಷಾ ಪತ್ರಿಕೆ, ಪ್ರಜಾವಾಣಿ, ಮಧುರಪಲ್ಲವಿ, ಮಲ್ಲಿಗೆ, ಪ್ರಜಾಮತ, ರಾಗಸಂಗಮ, ಧಾರಾವಾಹಿ, ಕ್ರೈಂ ಪತ್ರಿಕೆಗಳಲ್ಲಿ ಪ್ರಕಟ.) ನಾಲ್ಕು ಲೇಖನ ಮಾಲೆ. ಮನೆ ಮಾತು (ವಿಜಯ ಕರ್ನಾಟಕ), ಮಾಸದ ಮಾತು (ಸುವರ್ಣ ಟೈಮ್ಸ್ ಆಫ್ ಕರ್ನಾಟಕ ದೈನಿಕ), ಮಾಸದ ಸುಖ (ಯು ಲವ್ ಯು - ಉದಯವಾಣಿ ಜೋಶ್ ಪುರವಣಿ), ಮಾಸದ ದಾಸವಾಣಿ (ಮಲ್ಲಾರ ಮಾಸ ಪತ್ರಿಕೆ) ಜೋಕ್ಗಳ ಒಂದು ಪುಸ್ತಕ ವೀರಾಂಬುಧಿ ಜೋಕ್ಸ್. ಜನಪ್ರಿಯ ಲೇಖಕ ಶ್ರೀ ಯಂಡಮೂರಿ ವೀರೇಂದ್ರನಾಥ್ ಅವರ ಹೊಸ ವ್ಯಕ್ತಿತ್ವ ವಿಕಸನದ ಪುಸ್ತಕದ ಕನ್ನಡ ಅನುವಾದ (ಕಣಿವೆಯಿಂದ ಶಿಖರಕ್ಕೆ) ಕನ್ನಡಪ್ರಭದ ಬೈಟು ಕಾಫಿಯಲ್ಲಿ ಧಾರಾವಾಹಿ. ಈ ಪುಸ್ತಕ ಸತತವಾಗಿ ನಾಲ್ಕು ವಾರಗಳ ಕಾಲ ಟಾಪ್ಟೆನ್ ಬುಕ್ಸ್ ಲಿಸ್ಟ್ನಲ್ಲಿ ನಂಬರ್ ಒನ್!