ನಯನತಾರಾ ಅಭಿನಯಿಸಿದ ತಮಿಳ್ನ ಸೂಪರ್ ಹಿಟ್ ಸಿನಿಮಾ ” ಕೋಲುಮ್ಮಾವ್ ಕೋಕಿಲ” ಸಿನಿಮಾವನ್ನ ಕನ್ನಡದಲ್ಲಿ ಡಿಂಪಲ್ಕ್ವೀನ್ರಚಿತಾ ರಾಮ ಮಾಡಲಿದ್ದಾರೆ. ಡ್ರಗ್ಸ್ ಮತ್ತು ಮಾದಕ ಸಾಗಾಣಿಕೆ- ಪರಿಣಾಮಾಗಳ ಕುರಿತಾದಂತ ಸಿನಿಮಾ ಇದಾಗಿದ್ದು ಸಿನಿಮಾದಲ್ಲಿ ರಚಿತಾ ಅವರ ಪಾತ್ರ ಸಾಮಾನ್ಯವಾಗಿ ಅವರು ಮಾಡುವ ಪಾತ್ರಗಳಿಗಿಂತ ವಿಭಿನ್ನವಾಗಿರುತ್ತದೆ.

ಸಿನಿಮಾದ ನಿರ್ದೇಶನವನ್ನ ಮಯೂರ ರಾಘವೇಂದ್ರ ನಿರ್ವಹಿಸಲಿದ್ದಾರೆ, ಇದಕ್ಕೂ ಮುಂಚೆ ಮಯೂರ್ ಅವರು ಹರಿಪ್ರಿಯ ಅಭಿನಯದ “ಕನ್ನಡ ಗೊತ್ತಿಲ್ಲ” ಅನ್ನುವ ಸಿನಿಮಾ ನಿರ್ದೇಶಿಸಿದ್ರು.