ಕನ್ನಡದ ಸಿನಿರಸಿಕರ ಪಾಲಿನ ಅಚ್ಚುಮೆಚ್ಚಿನ ಹೀರೋ – ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಅಭಿಮಾನಿಗಳ ಪಾಲಿಗೆ ಪ್ರೀತಿಯ “ಅಪ್ಪು” ಕೈಲಿ ಚಿತ್ರೋದ್ಯಮದ ಚಿತ್ತಾರಗಳು.
ದೂರದ ಮಲೇಷಿಯಾ ದೇಶದಲ್ಲಿದ್ದುಕೊಂಡು ನಾನು ಚಿತ್ರೋದ್ಯಮ.ಕಾಮ್ ಅನ್ನು ಆರಂಭಿಸಿದಾಗ ಅಲ್ಲಿದ್ದುಕೊಂಡು ಈ ಕೆಲಸ ಮಾಡೋದು ಕಷ್ಟ, ಅದೆಲ್ಲಾ ಅಷ್ಟು ಸುಲಭ ಅಲ್ಲ, ಆಗಲ್ಲ. ಸುಮ್ಮನಾಗು ಅಂತ ನೆಗೆಟಿವ್ ಆಗಿ ಮಾತನಾಡಿದವರೇ ಹೆಚ್ಚು. ಆದರೂ ಆದದ್ದಾಗಲಿ, ಕನ್ನಡಮ್ಮನಿಗೆ ಒಂದು ಸೇವೆ ಸಲ್ಲಿಸುವ ಅವಕಾಶ ಸಿಕ್ಕಿರುವಾಗ ಅಷ್ಟು ಸುಲಭದಲ್ಲಿ ಕೈ ಬಿಡುವುದು ಏಕೆ? ಆದದ್ದಾಗಲಿ, ಆ ತಾಯಿ ಕನ್ನಡಾಂಬೆಯ ಮೇಲೆ ಭಾರ ಹಾಕಿ ನಡೆಯೋಣ. ಆ ತಾಯಿ ಕಾಪಾಡುತ್ತಾಳೆ ಎಂದು ಧೈರ್ಯವಾಗಿ ಆರಂಭಿಸಿಯೇಬಿಟ್ಟೆ. ಕನ್ನಡ ತಾಯಿಯ ಆಶೀರ್ವಾದ ನಮ್ಮ ಮೇಲಿರುವಾಗ ಸೋಲುವುದು ಉಂಟೆ? ಚಿತ್ರೋದ್ಯಮ.ಕಾಮ್ ನ ಗೆಲುವಿಗೆ ಅತಿ ದೊಡ್ಡ ಪಾಲು ಸ್ನೇಹಿತರಾದ ಘನಶ್ಯಾಮ್, ಶ್ರೀನಿವಾಸ್, ಸಂದೀಪ್ ಜೋಶಿ ರವರಿಗೆ ಸಲ್ಲಬೇಕು.
ನನ್ನ ದುರಾದೃಷ್ಟವೇನೋ, ಅಣ್ಣಾವ್ರ ಅತಿ ದೊಡ್ಡ ಅಭಿಮಾನಿಯಾದ ನನಗೆ, ಅವರನ್ನು ಒಮ್ಮೆಯೂ ಭೇಟಿ ಮಾಡುವ ಅದೃಷ್ಟವೇ ಕೂಡಿ ಬರಲಿಲ್ಲ. ಇಂದು ಅದೇ ಅಣ್ಣಾವ್ರ ಕುಡಿಯಾದ “ಅಪ್ಪು” ಕೈಲಿ ನಮ್ಮ ಚಿತ್ರೋದ್ಯಮದ ಚಿತ್ತಾರಗಳು ಪುಸ್ತಕವನ್ನು ನೋಡಿ, ನಿಮ್ಮ ಚಿತ್ರೋದ್ಯಮ.ಕಾಮ್ ತಂಡಕ್ಕೆ ಒಳ್ಳೆದಾಗಲಿ ಎಂಬ ಅವರ ಆಶೀರ್ವಾದವನ್ನು ಕೇಳಿ ಆದ ಸಂತೋಷ ಅಷ್ಟಿಷ್ಟಲ್ಲ. ಕನ್ನಡ ತಾಯಿಗೆ, ಕನ್ನಡ ಚಿತ್ರರಂಗಕ್ಕೆ, ಹಗಲು ರಾತ್ರಿ ಸೇವೆ ಸಲ್ಲಿಸಿದ, ಜೀವವನ್ನೇ ಅರ್ಪಿಸಿದ ಎಂದರೋ ಮಹಾನುಭಾವುಲುರೆಲ್ಲರ ಪದತಲಗಳಿಗೆ ಈ ಚಿತ್ರೋದ್ಯಮ.ಕಾಮ್ ನ ಸೇವೆಗಳು ಅರ್ಪಣೆ.
ಕನ್ನಡ ಕಲಾ ಲೋಕದ ಅನರ್ಘ್ಯ ಮುತ್ತು ನೀವು. ಸ್ಯಾಂಡಲ್ವುಡ್ ನ ಕೊಹಿನೂರ್ ವಜ್ರ ನೀವು.ನಿಮ್ಮ ಒಂದು ಆಶೀರ್ವಾದ ನಮಗೆ ನೂರಾನೆ ಬಲ ತಂದಿದೆ ಅಪ್ಪು ಸಾರ್. ಲವ್ ಯು.
ಚಿತ್ರೋದ್ಯಮ.ಕಾಮ್ ಬಳಗದ ಘನಶ್ಯಾಮ್, ಸಂದೀಪ್ ಜೋಶಿ, ಶ್ರೀನಿವಾಸ್,ಸೌಮ್ಯ,ಶ್ರೀಯುತ ಯತಿರಾಜ್ ವೀರಾಂಬುಧಿ,ರವಿಕುಮಾರ್, ಅಡ್ಮಿನ್ ಅಕ್ಷಯ ರಾವ್ ಎಲ್ಲರಿಗೂ ಒಂದು ಸ್ಪೆಷಲ್ ಥ್ಯಾಂಕ್ಸ್.
ಸಿನಿಮಾ ಸುದ್ದಿಗಳ ಸೂಪರ್ ಮಾರ್ಕೆಟ್ – www.chitrodyama.com ಅನ್ನು ತಪ್ಪದೆ ನೋಡಿ. ಆಶೀರ್ವಾದ ಮಾಡಿ.
ತಪ್ಪದೆ ನಮ್ಮ ಫೇಸ್ಬುಕ್ ಪೇಜ್ ಅನ್ನು ಇಲ್ಲಿ ಲೈಕ್ ಮಾಡಿ: https://www.facebook.com/chitrodyama
- ಟಿಎನ್ನೆಸ್