ಪಾಪ್ ಕಾರ್ನ್ ಮಂಕಿ ಟೈಗರ್

ನಿರ್ದೇಶನ- ಸೂರಿ

ನಿರ್ಮಾಪಕರು -ಸುಧಾಕರ್. K.M

ಸಂಗೀತ- ಚರಣ್ ರಾಜ್

ಛಾಯಾಗ್ರಹಣ- ಶೇಖರ್ S.ಛಾಯಾಗ್ರಹಣ- ಶೇಖರ್ S.

ಸಿನಿಮಾ ಪ್ರಾರಂಭದಲ್ಲೇ ಬರುವ ಒಂದು ಡೈಲಾಗ್ ಸಿನಿಮಾಗೆ ಅದೇ ಬೇರು

ಜೀವಿ ತೆಗ್ಯೋದು ಸುಲಭ ಆದ್ರೆ ಸತ್ತ್ತೋರಿಗೆ ಜೀವ  ಕೊಡೋಕೆಸಾಧ್ಯನೇ ಇಲ್ಲ”!!.

ಕಪ್ಪು ಹಾಳೆಯ ಮೇಲೆ ಕೆಂಪು ಅಕ್ಷರಗಳ ಕವಿತೆ ,ರಕ್ತದ ಕಲೆಯ ಹಿಂದೆ ಸೇಡಿನ ಕಥೆ!!

ಟೈಗರ್ ಸೀನ (ಧನಂಜಯ್) ಒಬ್ಬ ಸಾಧಾರಣ ಮೆಕ್ಯಾನಿಕ್ , ಬದುಕಲ್ಲಿ ಹೆಚ್ಚೇನೂ ಅಪೇಕ್ಷಗಳಿಲ್ಲದೆ ಸಾಧಾರಣವಾಗಿ ಜೀವನ ಸಾಗುತ್ತಿದ್ದಾಗ ತನಗೆ ತಿಳಿಯದೆ  ಹಲವು ಗೊಂದಲಗಳಿಗೆ ಒಳಗಾಗಿ ಜೀವನ         ಸರಿಪಡಿಸಲಾಗದ ಹಂತಕ್ಕೆ ತಲುಪಿ, ನೊಂದು ಬೇಸತ್ತು,ನೋವು ಕಾಣುತ್ತಾನೆ.ಪ್ರೀತಿಸಿದ ಹುಡುಗಿ ಗುಡ್ಬೈ ಹೇಳ್ತಾಳೆ, ಬೇರೆ ರೀತಿಯ ಅವಮಾನಗಳು ಎದುರಾಗುತ್ತದೆ ಸಂಪೂರ್ಣವಾಗಿ ಕುಗ್ಗಿ ಹೋಗ್ತಾನೆ . ಇದು ಸಿನೆಮಾದ ಒಂದು ಭಾಗವಾದರೆ ಮತ್ತೊಂದು ಹಂತದಲ್ಲಿ ಅದೇ ಟೈಗರ್ ಸೀನ ಪಕ್ಕ ಟಫ್ ಗ್ಯಾಂಗ್ಸ್ಟರ್ ತರ ಕಾಣಿಸುತ್ತ ಮಾತಿಗಿಂತ ಹೆಚ್ಚಾಗಿ ರಕ್ತವನ್ನೇ ಹರಿಸುತ್ತ, ದ್ವೇಷ ಆಕ್ರೋಶದ ಬೆಂಕಿಗೆ ಎಣ್ಣೆ ಸುರಿಯುತ್ತಾ  ಟೈಗರ್ ಕೆಂಪು ಕವಿತೆ ಬರಿಯುತ್ತಾನೆ. ಧನಂಜಯ್ ಪ್ರತಿಯೊಂದು ಕಡೆ ಬಹಳ ಎನರ್ಜೇಟಿಕ್  ಆಗಿ ಅಭಿನಯಿಸಿದ್ದಾರೆ,ಆಕ್ಷನ್- ಸೆಂಟಿಮೆಂಟ್- ರೊಮ್ಯಾನ್ಸ್ ಎಲ್ಲದರಲ್ಲೂ  ಸೂಕ್ತವಾಗಿ ಕಾಣಿಸುತ್ತಾರೆ.

 ಸೂರಿ ಚಿತ್ರದ ಕಥೆಯನ್ನೇ ಮೂರು ಹಂತವಾಗಿ ಬೇರ್ಪಡಸಿ ಹೆಣದಿದ್ದಾರೆ.ಟೈಗರ್ ಒಂದು ಕಡೆಯಾದರೆ ಮತ್ತೊಂದೆಡೆ “ಪಾಪ್ಕಾರ್ನ್” ದೇವಿ( ಸ್ಮಿತಾ/ನಿವೇದಿತಾ) ಥೇಟರ್ ನಲ್ಲಿ ಪಾಪ್ಕಾರ್ನ್ ಮಾರ್ತಿದ್ದೊಳು ಬದುಕಿನ ಕೆಟ್ಟ ತಿರುವುಗಳಲ್ಲಿ ಸಿಲುಕಿ ಬದುಕು ಇನ್ನೇನು ವ್ಯರ್ಥ  ಅನ್ನೋಷ್ಟ್ರಲ್ಲಿ ಮತ್ತೊಂದು ಹೊಸ ತಿರುವು .. ಅವಕಾಶ ಬಹಳ ಬೊಳ್ದಾಗಿ ನಟಿಸಿದ್ದಾರೆ ಸ್ಮಿತಾ.!! ಹೊಸ ಸಂಬಂಧಗಳು , ಹೊಸ ಸಮಸ್ಯೆಗಳು ..ಹೀಗೆ ಸಿನಿಮಾ ಒಂದು ಕನ್ಫ್ಯೂಷನ್ ಮೊಡ್ನಲ್ಲೆ ನಡಿಯುತ್ತೆ.ಅದಕ್ಕೆ ಸೂರಿ ಅವರದ್ದೇ ಶೈಲಿಯಲ್ಲಿ ಕಂಕ್ಲುಷನ ನೀಡ್ತಾರೆ

ಸಿನಿಮಾದಲ್ಲಿ ಕಥೆಗಿಂತ ಸಣ್ಣ ಸಣ್ಣ ಸನ್ನಿವೇಶಗಳಲ್ಲಿ ಇರುವ ಮಜಾನೇ ದೊಡ್ಡದು. ಸರಳವಾದ  ಕಥೆಯನ್ನ ವಿಭಿನ್ನವಾದ ಸ್ಕ್ರೀನ್ ಪ್ಲೇ.ಸುಕ್ಕ ಸೂರಿ ಸಿನಿಮಾದಲ್ಲಿ ಪಾತ್ರಗಳ ಹೆಸರೇ ಡಿಫರೆಂಟ್ ..”ಗಲ್ಲಿಜು,ಕೊತ್ತಂಬರಿ,ಮೂಗ,ಕುಷ್ಕ,ಕಲೈ,ಕಪ್ಪೆ, ರೆ ಝೀರ್ ಗೋಪಿ ಹೀಗೆ ಎಲ್ಲವೂ ಒಂತರ ವಿಚಿತ್ರ.. ಬಹಳ ಖಾರದ ಡೈಲಾಗ್ಸ್,ಖಡಕ್ ದೃಶ್ಯಾವಳಿಗಳು ಸೇರಿ ಸಿನೆಮಾ, ಪ್ರೇಕ್ಷಕನಿಗೆ ದೊಡ್ಡ ಕಿಕ್ಕು ನೀಡುವುದಂತು ನಿಜ..

ಛಾಯಾಗ್ರಾಹಕ ಶೇಖರ್ ಅವ್ರ ಒಂದೊಂದು ಫ್ರೇಮ್ ನೋಡುಗರನ್ನು ಲೈವ್ ಲೊಕೇಶನ್ ಗೆ ಕರೆದೊಯ್ಯುತ್ತದೆ ಅದ್ಭುತವಾದ ಲೈಟಿಂಗ್,ಜೊತೆಗೆ ಎಡಿಟರ್ ದೀಪು ಎಸ್ ಕುಮಾರ್  ಮತ್ತು ಸಂಗೀತ ಚರಣ್ ರಾಜ್ ಇಬ್ಬರು ಒಂದೇ ರೈಲ್ನ 2 ಹಳಿಯಂತೆ ಕೆಲಸ ಮಾಡಿದ್ದಾರೆ.. ಸೂರಿಯ ಪಾತ್ರಧಾರಿಗಳ ಆಯ್ಕೆಗೆ  ಒಂದು ದೊಡ್ಡ ಸಲಾಂ.

P. Ghanashyam

P. Ghanashyam

ಘನಶ್ಯಾಮ್ - ಪತ್ರಿಕೋದ್ಯಮ ವಿದ್ಯಾರ್ಥಿ. ಸಿನಿಮಾ ರಂಗದ ಬಗ್ಗೆ ಬಹಳ ಒಲವು. ಅದರಲ್ಲೂ ಕನ್ನಡ ಚಿತ್ರರಂಗದ ಬಗ್ಗೆ ತುಸು ಹೆಚ್ಚೇ ಅಭಿಮಾನ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮ.ಕಾಂ ನ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಘನಶ್ಯಾಮ್ ಚಿತ್ರೋದ್ಯಮ.ಕಾಂ ನ ಲೇಖಕರೆಂಬುವುದಕ್ಕಿಂತ ಒಂದರ್ಥದಲ್ಲಿ ಸಂಪಾದಕರೇ ಎಂದರೂ ತಪ್ಪಿಲ್ಲ. ಇತರ ಲೇಖಕರ ಲೇಖನಗಳನ್ನು ಪರಿಶೀಲಿಸಿ, ಪಬ್ಲಿಷ್ ಮಾಡುವುದು, ಚಿತ್ರರಂಗದ ತಂಡಗಳ ಜೊತೆ ಸಂದರ್ಶನ ಮಾಡುವುದು... ಇತ್ಯಾದಿ ಎಲ್ಲದರಲ್ಲೂ ಚಿತ್ರೋದ್ಯಮ.ಕಾಂ ತಂಡದ ಬಹು ಮುಖ್ಯ ಸದಸ್ಯ. ತೀಕ್ಷ್ಣ ನೇತ್ರ ಎಂಬ ಹೆಸರಲ್ಲೂ ಕೆಲವು ಲೇಖನಗಳನ್ನು ಬರೆದಿದ್ದಾರೆ, ಬರೆಯಲಿದ್ದಾರೆ. ಘನಶ್ಯಾಮ್ ರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply