ಮೊದಲಿಗೆ ಚಿತ್ರೋದ್ಯಮ. ಕಾಂ ನ ಸಮಸ್ತ ಓದುಗರಿಗೂ ಸಂಕ್ರಾಂತಿ ಹಬ್ಬದ ಹೃದಯಪೂರ್ವಕ ಶುಭಾಶಯಗಳು. ಸಂಕ್ರಾತಿ ಹಬ್ಬದ ಪ್ರಯುಕ್ತವಾಗಿ ಕನ್ನಡ ಚಿತ್ರರಂಗದ ಬಹು ನಿರೀಕ್ಷಿತ ಸಿನಿಮಾವಾದ “ಕಬ್ಜಾ” ದ ತಂಡ ಯೂಟ್ಯೂಬ್ ನಲ್ಲಿ ಹೊಸ ಮೋಷನ್ಪೋಸ್ಟರ್ ಬಿಡುಗಡೆ ಮಾಡಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಅಂಡರ್ವರ್ಲ್ಡ್ಸಿನಿಮಾಗಳಿಗೆ ಓಂಕಾರ ಹಾಡಿದ್ದು ಉಪೇಂದ್ರ ಅವರೇ. ಅವರು ನಿರ್ದೇಶಿಸಿದ ಓಂ ಸಿನಿಮಾ ಹೇಗೆ ಹೊಸತನದ ಅಲೆ ಎಬ್ಬಿಸಿತು ಎಂದು ಎಲ್ಲರಿಗೂ ಗೊತ್ತು.
” Pen is mightier than Sword” ಅಂತ ಸಾಲೊಂದು ಬಳಕೆಯಲ್ಲಿದೆ, ಅದು ಉಪೇಂದ್ರ ಅವರ ಚಿತ್ರ ಜೀವನಕ್ಕೆ ಅನುಗುಣವಾಗುತ್ತೋ ಇಲ್ಲವೋ ಗೊತ್ತಿಲ್ಲ ಕಾರಣ ಅವ್ರು ಪೆನ್ ಹಿಡಿದು ಲಾಂಗ್ ಕಥೆಯನ್ನ ಸೃಷ್ಟಿಸಿ ಗೆದ್ದಿದ್ದಾರೆ, ಅದೇ ಲಾಂಗ್ ನ ಸ್ವಯಂ ಅವರೇ ಹಿಡಿದು ಓಂಕಾರ ಕೂಡ ಹಾಕಿದ್ದಾರೆ.
ಕಬ್ಜಾ ಸಿನಿಮಾದ ತಂಡ ಹೊಸ ಸುದ್ದಿ ತಿಳಿಸ್ತೀವಿ, ಅದು ಎಲ್ಲರಿಗೂ ಸಂತಸ ತರಲಿದೆ ಎಂದು ಹೇಳ್ತಿದ್ರು, ಅದರ ಅನುಸಾರ ಇಂದು ಆ ಸರ್ಪ್ರೈಸ್ ಹೊರ ಬಂದಿದೆ, ರಿಯಲ್ಸ್ಟಾರ್ ಗೆ ಸಾಥ್ ನೀಡಲು ಅಭಿನಯ ಚಕರವರ್ತಿ ಕಿಚ್ಚಾ ಸುದೀಪ್ ಕೂಡ ಸಿನಿಮಾದಲ್ಲಿ ಭಾಗಿಯಾಗಿದ್ದಾರೆ. “ಭಾರ್ಗವ ಭಕ್ಷಿ” ಅನ್ನೋ ಪಾತ್ರದಲ್ಲಿ ಸುದೀಪ್ರ್ ಬರ್ತಿದಾರೆ… ಮೂರು ನಾಲ್ಕು ಹಂತದಲ್ಲಿ ಮೊಡಿ ಬರಲಿರುವ ಕಥೆಯ ಒಂದು ಪ್ರಮುಖ ಭಾಗದಲ್ಲಿ ಕಿಚ್ಚಾ ಕಾಣಿಸಲಿದ್ದಾರೆ. ರಿಯಲ್ ಸ್ಟಾರ್ ಮತ್ತು ಕಿಚ್ಚಾಇದಕ್ಕು ಮುನ್ನ ” ಮುಕುಂದಾ ಮುರಾರಿ” ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದರು, ಉಪೇಂದ್ರ ಅಭಿನಯದ ” ಕಟಾರಿ ವೀರ ಸುರಸುಂದರಾಂಗಿ” ಸಿನಿಮಗೆ ಸುದೀಪ್ ತಮ್ಮ ಕಂಚಿನ ಕಂಠದಿಂದ ಮುನ್ನುಡಿ ನೀಡಿರುವುದು ಉಂಟು.
ಇದು ಸ್ಟಾರ್ ಗಳ ಸುದ್ದಿ ಯಾಗಿದೇ, ಈಕಡೆ ನಾನು ಒಬ್ಬ “ಹೀರೊ” ಇದೀನಿ ನನ್ನು ನೋಡಿ ಅಂತ ಒಬ್ರುಬಂದ್ದಿದ್ದಾರೆ.. ರಿಷಬ್ ಶೆಟ್ಟಿ ,ಪ್ರಮೋದ್ ಶೆಟ್ಟಿ, ಗಾನವಿಲಕ್ಷ್ಮಣ್ ಹಾಗು ಮಂಜುನಾಥ್ಗೌಡಾ ಅಭಿನಯದ “ಹೀರೊ” ಅನ್ನೋ ಶೀರ್ಷಿಕೆ ಇರುವ ಹೊಸ ಚಿತ್ರದ ಟ್ರೇಲರ್ಬಿಡುಗಡೆಗೊಂಡಿದೆ. 3 ನಿಮಿಷದ ಸಿನಿಮಾ ತುಣುಕನ್ನ ನೋಡ್ತಾ ಇದ್ರೆ ಅದ್ರಲ್ಲಿ ಕಾಮಿಡಿ ಮತ್ತು ಸಸ್ಪೆನ್ಸ್ ಹೆಚ್ಚಾಗಿ ಇದ್ದು ಮನೋರಂಜನೆಯೇ ಕೇಂದ್ರ ಬಿಂದುವಾಗಿರುವುದರಲ್ಲಿ ಯಾವೆದೆ ಸಂದೇಹವಿಲ್ಲ. ಟ್ರೇಲರ್ ನ ಪ್ರಾರಂಭದಲ್ಲಿ ಸಂಧರ್ಭವಿವರಿಸವಾಗ ಕೇಳಿ ಬರುವ ಅಚ್ಚ ಕನ್ನಡದ ಸ್ವಚ್ಛ ಸಾಲುಗಳು ಕಿವಿಗೆ ಮುದವನ್ನ, ಮನಸ್ಸಿಗೆ ಇಂಪುನ್ನು ಬಳುವಳಿಯಾಗಿ ನೀಡಲಿದೆ. ಸಿನಿಮಾಗೆ ರಿಷಬ್ ಶೆಟ್ಟಿ ಅವರೇ ನಿರ್ಮಾಪಕರು, ಭರತ್ ರಾಜ್ ಎನ್ನುವ ಯುವ ಪ್ರತಿಭಾವಂತನ ನಿರ್ದೇಶನವಿದ್ದು ಅಜನೀಶ್ಲೋಕಾನಾತ್ ರ ಸಂಗೀತವಿದೆ. ಕಥೆಯಲ್ಲಿ ಪ್ರಭುದ್ದತೆಯನ್ನ ಪಾಲಿಸಿಕೊಂಡು ಪ್ರಸಂಗಗಳಲ್ಲಿ ವಿನೋದವು ಜಾರಾದಹಾಗೆ ಕಾಪಿಡಿಕೊಳ್ಳುವುದಕ್ಕೆ, ಹೆಸರುವಾಸಿಯಾಗಿದೆ ಈ ತಂಡ. ಅವರ ನಿರಂತರ ಶ್ರಮಕ್ಕೆ ಈ ಭಾರಿಯು ಗೆಲವು ಸಿಗಲಿದೆ ಅನ್ನೋದು ಟ್ರೈಲರ ಕಂಡ ಬಳಿಕ ಖಾತ್ರಿಯಾಗಿದೆ.