ಪ್ರಜ್ವಲ್ ದೇವರಾಜ್ರವರ ಹುಟ್ಟು ಹಬ್ಬಕ್ಕೆ ಮಾಫಿಯಾ ಪೋಸ್ಟರ್ ರಿಲೀಸ್

Mafia

ಜುಲೈ 4 ಪ್ರಜ್ವಲ್ ದೇವರಾಜ್ರವರ ಹುಟ್ಟು ಹಬ್ಬದ ನಿಮಿತ್ತ ಅದೇ ದಿನದಂದು ಮಾಫಿಯಾ ಚಿತ್ರ ತಂಡದವರು ಅದರ ಪೋಸ್ಟರ್ ಒಂದನ್ನು ರಿಲೀಸ್ ಮಾಡಿದೆ, ಇದೊಂದು ಆಕ್ಷನ್ ಓರಿಎಂಟೆಡ್ ಸಿನಿಮಾ ಆಗಿದ್ದು, ವಿಭಿನ್ನ ರೀತಿಯ ಕಥೆಯನ್ನು ಹೊಂದಿದೆ, ಲೋಕೇಶ್ರವರು ಈ ಚಿತ್ರದ ನಿರ್ದೇಶನದ ಹೊಣೆಯನ್ನು ಹೊತ್ತಿದ್ದಾರೆ.

ಬೆಂಗಳೂರು ಕುಮಾರ್ ಫಿಲಂಸ್ ಬ್ಯಾನರ್ ನಲ್ಲಿ ಕುಮಾರ್ ಬಿ ಅವರು ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಪ್ರಜ್ವಲ್ ದೇವರಾಜ್ರವರ ಹುಟ್ಟು ಹಬ್ಬಕ್ಕೆ ಅವರ ಇತರ ಚಿತ್ರಗಳ ಪೋಸ್ಟರಿನೊಂದಿಗೆ ಈ ಮಾಫಿಯಾ ಪೋಸ್ಟರ್ ಕೂಡ ಬಿಡುಗಡೆಗೊಂಡಿದೆ.

ಮಾಫಿಯಾ ಎಂದರೆ ಹೆಸರೇ ಸೂಚಿಸುವ ಹಾಗೆ ಇದು ಮಾಮೂಲಿ ಆಕ್ಷನ್ ಚಿತ್ರವಾಗಿರದೆ ವಿಭಿನ್ನ ಕಥಾ ಹಂದರವನ್ನು ಒಳಗೊಂಡಿರುತ್ತದೆ ಎಂದು ಚಿತ್ರದ ನಿರ್ದೇಶಕರಾದ ಲೋಕೇಶ್ರವರು ಹೇಳಿದ್ದಾರೆ, ಈ ಚಿತ್ರದ ಬಹುತೇಕ ಚಿತ್ರೀಕರಣ ಸಂಪೂರ್ಣವಾಗಿದ್ದು, ಕೇವಲ ಫೈಟ್ ಮತ್ತು 2 ಹಾಡುಗಳ ಚಿತ್ರೀಕರಣ ಬಾಕಿ ಇದ್ದು ಆದಷ್ಟು ಬೇಗ ತೆರಯ ಮೇಲೆ ಕಾಣಿಸಿಕೊಳ್ಳಲಿದೆ.

ವಿಭಿನ್ನ ಆಕ್ಷನ್ ಚಿತ್ರದಿಂದ ಪ್ರಜ್ವಲ್ ದೇವರಾಜ್ರವರು ಕಾಣಿಸಿಕೊಳ್ಳಲಿದ್ದಾರೆ, ಚಿತ್ರೋದ್ಯಮ.ಕಾಂ ಮತ್ತೊಮ್ಮೆ ಪ್ರಜ್ವಲ್ ದೇವರಾಜ್ರವರಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ಹೇಳುತ್ತಾ ಅವರ ಮುಂಬರುವ ಎಲ್ಲ ಚಿತ್ರಗಳು ಯಶಸ್ವಿಯಾಗಲಿಯೆಂದು ಹಾರೈಸುತ್ತದೆ.

Chitrodyama Updates

Chitrodyama Updates

Leave a Reply