ಖಳನಾಯಕನಾಗಿ, ದಿಟ್ಟ ಪೋಲೀಸ್ ಆಫಿಸರಾಗಿ, ಹಿರಿಯಣ್ಣನಾಗಿ, ರಾಜಕಾರಣಿಯಾಗಿ, ಕಬಡ್ಡಿ ಕೋಚಾಗಿ, ಊರಿನ ಗೌಡನಾಗಿ ವಿಭಿನ್ನ ಪಾತ್ರಗಳಲ್ಲಿ ನಟಿಸಿ ಪ್ರತಿಭಾವಂತ ನಟ ಎನಿಸಿಕೊಂಡಿದ್ದಾರೆ, ಕಬಾಲಿ ಚಿತ್ರದ “ಯಾರ್ರಾ ಅಂದ ಕಬಾಲಿ ವರಸೊಲ್ಲುಡ ” ಡೈಲಾಗ್ ಮರೆಯಲಾಗದು.
ಡಾ ಶಿವರಾಜ್ ಕುಮಾರ್, ಶ್ರೀ ಮುರಳಿ, ಪುನೀತ್ ರಾಜಕುಮಾರ್, ಆದಿತ್ಯ, ತಮಿಳಿನ ಧನುಷ್, ಸೂಪರ್ ಸ್ಟಾರ್ ರಜಿನಿ ಕಾಂತ್, ದುನಿಯಾ ವಿಜಯ್, ಸಿಲಂಬರಸನ್, ಚೇತನ್, ರಾಕಿಂಗ್ ಸ್ಟಾರ್ ಯಶ್, ರಕ್ಷಿತ್ ಶೆಟ್ಟಿ, ವಿಜಯ್ ಸೇತುಪತಿ, ರಿಷಭ್ ಶೆಟ್ಟಿ ಮುಂತಾದ ಕಲಾವಿದರ ಜೊತೆ ತೆರೆ ಹಂಚಿಕೊಂಡಿದ್ದಾರೆ.
ಇವರು ಚಿತ್ರದಲ್ಲಿ ಮಾತ್ರ ಪಾತ್ರವನ್ನು ಕ್ರೂರವಾಗಿ, ಭಯ ಬರುವ ಹಾಗೆ ಮುಖದ ಭಾವನೆಗಳು ಮೂಡುವ ಹಾಗೆ ತೋರಿಸುತ್ತಾರೆ ಹೊರತು ನಿಜ ಜೀವನದಲ್ಲಿ ಉತ್ತಮ ಸ್ನೇಹಿತರಾಗೆ ನಾನು ಅವರನ್ನು ನೋಡಿಲ್ಲ. ನನಗೆ ತಿಳಿದ ಹಾಗೆ ಹೇಳಿರುವೆ.
ಇವರು ಮದುವೆಯಾಗಿ ಎರಡು ಗಂಡು ಮಕ್ಕಳಿಗೆ ಮುದ್ದಿನ ತಂದೆಯಾಗಿ ಸಂಸಾರಕ್ಕೆ ದಾರಿ ದೀಪವಾಗಿದ್ದಾರೆ, ಅವರ ಹೆಂಡತಿ ಕೂಡ ಮನೆಯ ಮಕ್ಕಳನ್ನು ಒಂದು ಒಳ್ಳೆ ರೀತಿಯಲ್ಲಿ ಬೆಳೆಸುವಲ್ಲಿ ಕಾರಣರಾಗಿದ್ದಾರೆ.
ಕೇವಲ ನಟನೆಯೊಂದಲ್ಲದೆ ಹಳ್ಳಿಯ ರೈತರ ಹಾಗಿರುವುದು ಇವರಿಗೆ ಇಷ್ಟ, ಬಿಡುವಿನ ವೇಳೆಯಲ್ಲಿ ಹಳ್ಳಿಗೆ ಹೋಗಿ ಕೃಷಿ ಮಾಡುತ್ತಾರೆ, ಈ ಲಾಕ್ ಡೌನ್ ಸಮಯದಲ್ಲಿ ಹಳ್ಳಿಯಲ್ಲಿ ತಮ್ಮದೇ ಆದ ಜಮೀನಿನಲ್ಲಿ “ಸಾವಯವ ಕೃಷಿ ” ಮಾಡಿ ಹಲವರಿಗೆ ಮಾದರಿಯಾಗಿದ್ದಾರೆ.
ನಮ್ಮ ಚಿತ್ರರಂಗದಲ್ಲಿ ಒಳ್ಳೆ ಟ್ಯಾಲೆಂಟ್ ಇರೋ ನಟರು, ವಿಲನ್ ಇದ್ದಾರೆ, ಅವರೂ ಕೂಡ ಎಲ್ಲ ಭಾಷೆಯವರ ಹಾಗೆ ನಟಿಸಿ ನಮ್ಮ ಕನ್ನಡ ಚಿತ್ರರಂಗದ ಹೆಸರನ್ನು ಕೊಂಡಾಡುವಂತೆ ಮಾಡುತ್ತಾರೆ, ಅವಕಾಶ ನೀಡುವ ಮನಸ್ಸು ಮಾಡಿದರೆ ಎಲ್ಲವೂ ಸಾಧ್ಯ.
ಇಂಥ ಪ್ರತಿಭಾವಂತ ನಟರಿಗೆ ಇನ್ನೂ ಹಲವಾರು ವಿಭಿನ್ನ ಪಾತ್ರಗಳು ಸಿಗಲಿ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಇವರ ನಟನೆಗೆ ಮನ್ನಣೆ ಸಿಗಲಿ ಎಂದು ಹಾರೈಸಿ ಮುಂದಿನ ಚಿತ್ರಗಳಿಗೆ ಆಲ್ ದಿ ಬೆಸ್ಟ್ 🌹