“ಕಸ್ತೂರಿ ಕನ್ನಡ ಒಳ್ಳೆ ಗಾಳಿ ಬೆಳಕು ನೀರು ಇಡೀ ಪ್ರಪಂಚಾನೇ ಕೊಂಡಾಡೊ ಕಲ್ಚರ್ ಇದ್ರೂನು ಪೆನ್ ಹಿಡಿಯೋ ಕೈಯಲ್ಲಿ ಬ್ಲೇಡ್ ಹಿಡ್ಕೊಂಡು ಮುಖ ಕುಯ್ಕೊಂಡ್ ಬದುಕ್ತಿಯೇನೊ ಲೇ.. ಈ ಸಮಾಜದಲ್ಲಿ ಇಂಥದುಕ್ಕೆ ಯೂಸ್ ಆಗ್ತೀನಿ ಅಂತ ಹೇಳು ಬಿಟ್ಬುಡ್ತಿನಿ ನಿನ್ನ, ತೊಡೇಲಿ ಕಾಲ್ ಕೆಜಿ ಮಾಂಸ ಇಲ್ಲ ನೀನ್ ಕಿಲಾಡಿನ.. ರೌಡಿಯೇನೊ ನೀನು.. ಅರೆರೆ ಈ ಡೈಲಾಗ್ ಎಲ್ಲೋ ಕೇಳಿದಿವಿ ಅನ್ಸುತ್ತಲ್ವ ಸೂರಿ ಡೈರೆಕ್ಟ್ ಮಾಡಿರೋ “ದುನಿಯಾ ” ಚಿತ್ರದ ಸೀನ್ ಎಷ್ಟು ಚೆನ್ನಾಗಿ ಆಕ್ಟ್ ಮಾಡಿದಾರೆ, ನೋಡೋಕೆ ಸಕತ್ ಪರ್ಸನಾಲಿಟಿ, ಒಳ್ಳೆ ಹೈಟು, ಕಿಲ್ಲಿಂಗ್ ಲುಕ್, ಮೀಸೆ ಬಿಟ್ಟಿರೋ ರೀತಿ, ಕೈಯಲ್ಲಿ ಗನ್ ಹಿಡ್ಕೊಂಡು ಖಡಕ್ ಪೋಲೀಸ್ ಆಫಿಸರ್ ಪಾತ್ರ ಮಾಡಿರೋ ನಮ್ಮ ಕನ್ನಡ ನಾಡಿನ ಹೆಮ್ಮೆಯ ನಟ “ಕಿಶೋರ್“.

ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ, ನಟಿಸುತ್ತಿದ್ದಾರೆ. ಆಗಸ್ಟ್ 14 1974 ರಲ್ಲಿ ಹುಟ್ಟಿದ ಇವರು ನ್ಯಾಷನಲ್ ಕಾಲೇಜ್ ,ಬೆಂಗಳೂರು ಸ್ಟೂಡೆಂಟ್ . ತೆರೆಗಳು ಮತ್ತು ಸಾಮ್ರಾಟ ಅಶೋಕ ಎಂಬ ನಾಟಕಗಳನ್ನು ಕಾಲೇಜ್ ದಿನಗಳಲ್ಲಿ ಆಡುತ್ತಿದ್ದರು, ನಂತರ ಬೆಂಗಳೂರು ಯೂನಿವರ್ಸಿಟಿ ಯಲ್ಲಿ ಮಾಸ್ಟರ್ ಇನ್ ಕನ್ನಡ ಲಿಟರೇಚರ್ ಪಡೆದು ಬೆಂಗಳೂರಿನ ಕಾಲೇಜಿನಲ್ಲಿ ವಿಧ್ಯಾರ್ಥಿಗಳಿಗೆ ಪಾಠ ಹೇಳಿಕೊಡುತ್ತಿದ್ದರು, ಇವರು ಫ್ಯಾಷನ್ ಡಿಸೈನರ್ ಆಗಿ 2 ವಷ೯ ಪಾಟ್೯ ಟೈಮ್ ಕೆಲಸ ವಿದ್ಯಾಸಾಗರ್ ರವರ ಕೈ ಕೆಳಗೆ ಮಾಡಿದರು.
ಮೊದಲು ನಟಿಸಿದ ಚಿತ್ರ ಕಂಠಿ ಬ್ಯಾಡರ ಬೀರ ಪಾತ್ರ ಕನಾ೯ಟಕ ಸಕಾ೯ರದ ಪ್ರಶಸ್ತಿ ಇವರ ಮುಡಿಗೇರಿತು.
ರಾಕ್ಷಸ ಚಿತ್ರದ ನಟನೆಗೆ ಕನಾ೯ಟಕ ಸಕಾ೯ರದಿಂದ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಲಭಿಸಿದೆ. ದಿಟ್ಟ ಅಣ್ಣನ ಪಾತ್ರ ಆಕಾಶ್ ಮತ್ತು ಕಲ್ಲರಳಿ ಹೂವಾಗಿ ಚಿತ್ರದಲ್ಲಿ ನಟಿಸಿದ್ದಾರೆ.
ಮುಂದುವರಿಯುವುದು