ಪ್ರಯಾಣಿಕರ ಗಮನಕ್ಕೆ (ಕನ್ನಡ)

ಡೀ ಸಿನೆಮಾದಲ್ಲಿ ನಾನು ಎಂಜಾಯ್ ಮಾಡಿದ್ದೊಂದೇ… ಅದು ಡ್ರೈವಿಂಗ್.. ❤ ಅಷ್ಟು ದೊಡ್ಡ ಬಸ್ ಅನ್ನು ಅನಾಯಾಸವಾಗಿ ಓಡಿಸುತ್ತಿದ್ದ ಡ್ರೈವರಿಗೆ ನಾನು ಫಿದಾ ಆಗ್ಬಿಟ್ಟೆ… ಜೊತೆಗೆ ಒಂದೊಂದೇ ಪಾತ್ರ ಸಿನೆಮಾದೊಳಗೆ ನಡೆದು ಬರುತ್ತಿರುವಂತೆ ನನ್ನ ಜೀವನದೊಳಗೇ ನಡೆದು ಬಂದಷ್ಟು ಆಪ್ತ ಅಂತನಿಸುತ್ತಿತ್ತು… 

ಮುಂದೇನು? ರೈಟ್ ರೈಟ್… ಬಸ್ ಹೊರಟಿತು…

ಬಸ್ ಡ್ರೈವರ್ ಪಾತ್ರಧಾರಿ ಕೆಟ್ಟವನು ಅಂತ ಯಾವ ಆಂಗಲ್ಲಿನಿಂದಲೂ ಅನ್ನಿಸಲಿಲ್ಲ. ಅವನು ಕುಳಿತ ಭಂಗಿ, ಪ್ರಯಾಣಿಕರನ್ನು ಹ್ಯಾಂಡಲ್ ಮಾಡುತ್ತಿದ್ದ ರೀತಿ, ಆಗಾಗ ಹಿಂತಿರುಗಿ ಮುಗುಳ್ನಗುತ್ತಿದ್ದುದು ಎಲ್ಲವೂ ಅವನೇ ಹೀರೋ ಎಂಬ ಫೀಲ್ ಕೊಟ್ಟಿತ್ತು. ಜೊತೆ್ಗೆಗೆ ಡ್ರೈವಿಂಗಿನ ಹುಚ್ಚಿಯಾದ ನನಗೆ ಇವನ ಡ್ರೈವಿಂಗಿನಿಂದಾಗಿ ಈತನೇ ಹೀರೋ ಆಗಿಬಿಟ್ಟಿದ್ದ.

ಅಷ್ಟರಲ್ಲೇ ಈ ಬಸ್ ಹೈಜಾಕ್ ಆಗಿರುವ ವಿಷಯ ಗೊತ್ತಾಯ್ತು…. ಪ್ರಯಾಣಿಕರಿಗೆ ಗೊತ್ತಿಲ್ಲ.. ಆದರೆ ನನಗೆ ಗೊತ್ತಾಗಿ ಹೋಯ್ತು.. ಸಿನೆಮಾದೊಳಗೆ ಎಷ್ಟು ಮುಳುಗಿ ಹೋಗಿದ್ದೆ ಎಂದರೆ ನಾನು ಈಗ ಪ್ರಯಾಣಿಸುತ್ತಿರುವ ಬಸ್ಸೇ ಹೈಜಾಕ್ ಆಯ್ತೇನೋ ಎಂದು ಭ್ರಮಿಸುವಷ್ಟು 😂

ಆಗ ಪೊಲೀಸ್ ಪಾತ್ರದ ಪ್ರವೇಶವಾಯ್ತು. ಪೊಲೀಸ್ ಅಧಿಕಾರಿಯನ್ನು ಎಲ್ಲಿಯೋ ಆರಾಮಾಗಿ ಜೀಪಿನಲ್ಲಿ ಮಲಗಿದ್ದ ಸೋಮಾರಿ ಅಂತನಿಸುವ ಹಾಗೆ ಇಂಟ್ರೋ ಕೊಟ್ಟು, ಇವನಿಗಿಂತಾ ನಮ್ ಡ್ರೈವರೇ ವಾಸಿ ಅನ್ನಿಸೋ ಹಾಗೆ ಮಾಡಿಬಿಟ್ರು. ಆದರೆ ಆ ಪೊಲೀಸು ಎಷ್ಟು ಫಾಸ್ಟ್ ಅಂತ ನಂತರ ಗೊತ್ತಾಗುತ್ತಾ ಬಂತು. ನಿಂತಲ್ಲೇ ಹೀಗೆ ನಡೆದಿರಬಹುದು ಅಂತ ಊಹಿಸುವ ಸೂಪರ್ ಕಾಪ್ ನಮ್ ಪೊಲೀಸು. ಈಗ ಡ್ರೈವರನ ಕಥೆ? ಗೋವಿಂದಾ…..

ಆದರೆ ನಮ್ ಡ್ರೈವರು ಬಸ್ಸಿನಲ್ಲಿ ಜಾಮರ್ ಹಾಕಿ ಯಾರ ಮೊಬೈಲೂ ವರ್ಕ್ ಮಾಡದ ಹಾಗೆ ಮಾಡಿಬಿಟ್ಟಿದ್ದ. ಹಾಗಾಗಿ ಬಸ್ ಯಾವ ಲೋಕೇಶನ್ ನಲ್ಲಿದೆ ಅಂತ ಕಂಡು ಹಿಡಿಯುವುದು ಕಷ್ಟವಾಯ್ತು. ಜೊತೆಗೆ ಆ ಬಸ್ ಮಿಸ್ ಆದವನೊಬ್ಬ ಪೊಲೀಸರಿಂದ ವಿಷಯ ತಿಳಿದು ಬಸ್ ಹೈಜಾಕ್ ಆಗಿರುವ ವಿಷಯವನ್ನು ಫೇಸ್ಬುಕ್ಕಿನಲ್ಲಿ ಹಾಕಿ ಬಿಟ್ಟ. ಇದರಿಂದ ಎಲ್ಲರಿಗೂ ಈ ವಿಷಯ ತಿಳಿಯಿತು. ಟಿವಿಯಲ್ಲೆಲ್ಲಾ ಬಂತು. ಆದರೆ ನಮ್ಮ ಪ್ರಯಾಣಿಕರಿಗೆ ಮಾತ್ರ ತಿಳಿದಿಲ್ಲ…. 

ಬಸ್ಸು ಹೋಗುತ್ತಲೇ ಇದೆ. ಇದವರ ಕಡೆಯ ಪ್ರಯಾಣ ಅಂತಲೇ ಅವರಿಗೆ ಗೊತ್ತಿಲ್ಲ. ಈಗೊಂದು ಮನಮೋಹಕ‌ ಹಾಡು ಬಂದಿತು… ಎಷ್ಟು ಮೆಲೋಡಿಯಸ್ ಅಂದ್ರೆ ಹಾಡಿನ ಮೇಲೆ ಲವ್ ಆಗೋಯ್ತು… ಈ ಬಸ್ ಹೀಗೆಯೇ ಚಲಿಸುತ್ತಲಿರಲಿ… ನಿಲ್ಲುವುದೇ ಬೇಡ‌ 

ಎಂದುಕೊಂಡೆ…

ತಥ್… ಬಸ್ ಊರ ಹೊರಗಿನ ಒಂದು ನಿರ್ಜನ ಪ್ರದೇಶದಲ್ಲಿ ನಿಂತೇ ಬಿಟ್ಟಿತು. ಆದರೆ ಯಾಕೋ ನಮ್ ಡ್ರೈವರು ಅಮಾಯಕ ಪ್ರಯಾಣಿಕರನ್ನು ಕಂಡು ತನ್ನ ಮನಸ್ಸು ಬದಲಾಯಿಸಿ, ಅವರನ್ನು ಕೊಲ್ಲುವ ವಿಷಯ ಬದಲಿಸಿ ಅವರುಗಳನ್ನು ತಮ್ಮ ತಮ್ಮ ಜಾಗಗಳಿಗೆ ಸೇಫ್ ಆಗಿ ಕಳಿಸುವ ನಿರ್ಧಾರ ಮಾಡಿದ.

ಆಫ್ಟರ್ ಆಲ್ ಅವನೂ ಮನುಷ್ಯ ತಾನೇ? ಅವನಿಗೂ ದೌರ್ಬಲ್ಯಗಳಿವೆ. ಈ ಮೊದಲು ದುಡ್ಡು ಎಂಬ ದೌರ್ಬಲ್ಯ ಇತ್ತು. ಅದಕ್ಕಾಗಿ ಈ ಮೊದಲೇ ಬೇರೆ ಯಾರೋ ಮಾಡಿದ್ದ ಡಕಾಯಿತಿಯಂತೆ ತಾನೂ ಪ್ರಯಾಣಿಕರನ್ನು ದೋಚುವ ಪ್ಲಾನ್ ಮಾಡಿದ್ದ. ಆದರೆ ಈಗ ಒಳ್ಳೆಯವನಾಗಬೇಕೆಂಬ ದೌರ್ಬಲ್ಯ ಮೂಡಿದೆ. ಅದಕ್ಕಾಗಿ ಅಮಾಯಕರನ್ನು ಕೊಲ್ಲದೇ ಉಳಿಸುವ ನಿರ್ಧಾರಕ್ಕೆ ಬಂದ. 

ವಿಲನ್ ಆದವನು ಹೀರೋ ಆದ. ಆದರೆ ಇದೆಲ್ಲಾ ನಮ್ ಪೊಲೀಸಪ್ಪನಿಗೆ ಗೊತ್ತಾಗೋಲ್ಲ. ಅವರ ಪ್ರಕಾರ ಅಪರಾಧ ಎಂದರೆ ಅಪರಾಧವಷ್ಟೆ. ಅದು ಮಾಡಿರಲಿ ಅಥವಾ ಯೋಜಿಸಿರಲಿ. ಅವರಿಗೆ ಹೈಜಾಕರುಗಳನ್ನು ಹಿಡಿದು, ಪ್ರಯಾಣಿಕರಿಗೇನೂ ತೊಂದರೆಯಾಗದ ಹಾಗೆ ಕೇಸ್ ಕ್ಲೋಸ್ ಮಾಡಬೇಕಷ್ಟೆ. ಅವರ ಬಳಿ ಡ್ರೈವರನ ಕರುಣಾಜನಕ ಫ್ಲಾಷ್ ಬ್ಯಾಕ್ ಕೇಳುವಷ್ಟು ಪುರಸೊತ್ತಿಲ್ಲ. ಇದು ಮುಗಿದ ನಂತರ ಮತ್ತೊಂದು ಕೇಸ್ ಕಾಯುತ್ತಿರುತ್ತದೆ. ಹಾಗಾಗಿ ಸಿಕ್ಕ ಕ್ಲೂ ಜಾಡು ಹಿಡಿದು ಬಸ್ಸನ್ನು ಕಂಡುಹಿಡಿದು ಬಂದವರು, ಒಂದೇ ಏಟಿಗೆ ಹೈಜಾಕರುಗಳನ್ನು ಹೊಡೆದು ಹಾಕುತ್ತಾರೆ. ಅವರ ಉದ್ದೇಶ ಪ್ರಯಾಣಿಕರ ಸುರಕ್ಷತೆ, ಆ ಮೂಲಕ ತಮ್ಮ ಡಿಪಾರ್ಟ್ಮೆಂಟಿನ ದಕ್ಷತೆ ಎಲ್ಲರೆದುರು ತೋರಿಸಬೇಕಿತ್ತು. ಹೈಜಾಕರ್ ಯಾರಾದರೇನು, ಅವರಿಗೆ ಏನಾದರೆ ಇವರಿಗೇನು? 

ಪ್ರಯಾಣಿಕರು ಬಚಾವಾದರು. ಆದರೆ ಇಡೀ ಸಿನೆಮಾದಲ್ಲಿ ಯಾರ ಮುಖದಲ್ಲಿಯೂ ತಾವು ಸಿಕ್ಕಿಬಿದ್ದ ಫೀಲ್ ಕಾಣಲಿಲ್ಲ.. ಇದೊಂದೇ ನೆಗೇಟಿವ್ ಅಂಶ. ಬಿಟ್ಟರೆ ಎಲ್ಲವೂ ಸೂಪರ್… ಎಕ್ಸ್ಟ್ರಾರ್ಡಿನರಿ.. ಒಂದೊಳ್ಳೆಯ ಪ್ರಯತ್ನ ಕನ್ನಡದಲ್ಲಿ… 

ಒಮ್ಮೆ ಸಿನೆಮಾ ನೋಡಿ… ನಾವೇ ಹೈಜಾಕ್‌ ಆದ ಹಾಗೆ ಫೀಲ್ ಬರದಿದ್ರೆ ಹೇಳಿ…🙏

Sowmya Murthy K A

Sowmya Murthy K A

ಮೈಸೂರಿನಲ್ಲಿ ವಾಸ. ವಿದ್ಯಾರ್ಹತೆ: ಎಂ ಎ ಕನ್ನಡ. ಕನ್ನಡ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. ಬರಹಗಾರರು, ಅಂಕಣಕಾರರು, ಬ್ಲಾಗ್ಗಿಸ್ಟ್, ಪತ್ರಿಕೋದ್ಯಮ ವಿದ್ಯಾರ್ಥಿನಿಯೂ ಹೌದು. ಪಿಜಿ ಡಿಪ್ಲೋಮಾ ಮಾಡಿರುತ್ತೇನೆ. ಹತ್ತಾರು ಲೇಖನಗಳು ಈಗಾಗಲೇ ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪ್ರಸ್ತುತ ಶ್ರೀರಂಗಪಟ್ಟಣ ತಾಲ್ಲೂಕು ಕೃಷ್ಣರಾಜಸಾಗರ ಗ್ರಾಮ ಪಂಚಾಯಿತಿಯಲ್ಲಿ ಲೆಕ್ಕ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದೇನೆ. ತ್ರಿವಳಿ ಹೆಣ್ಣು ಮಕ್ಕಳಿದ್ದಾರೆ.

Leave a Reply