ಪ್ರೀತ್ಸೆ ಪ್ರೀತ್ಸೆ ಎಂದು ಹಾಡಿ ಫೇಮಸ್ ಆದ ಹೇಮಂತ್

“ಸಾವಿರಾರು ದಿನಗಳ ಕೆಳಗೆ ನನ್ನೆದೆಯ ಗಭ೯ದ ಒಳಗೆ ಉಸಿರಾಡಿತು ಆಸೆಯ ಭ್ರೂಣ ಬಡಿಯಿತು ಪ್ರಾಣ ಬೆಳೆಯಿತು ಕಲಿಯಿತು ಮುದ್ದಿನ ಮಾತೊಂದಾ ಪ್ರೀತ್ಸೆ ಪ್ರೀತ್ಸೆ ಪ್ರೀತ್ಸೆ”… ಈ ರೀತಿ ಒಂದೇ ಧ್ವನಿಯಲ್ಲಿ ಹೇಳಿ ಅಭಿಮಾನಿಗಳು ಇವರ ಗಾಯನವನ್ನು ಮೆಚ್ಚುವಂತೆ ಮಾಡಿದ ಕನ್ನಡ ಹುಡುಗ ಈ ಹೇಮಂತ್.

ಹೇಮಂತ್ ಮೂಲ ಹೆಸರು ಹೇಮಂತ್ ಕುಮಾರ್ (ಹೇಮಂತ್ ಸುಬ್ರಹ್ಮಣ್ಯ ). ಮೂಲತಃ ಬೆಂಗಳೂರಿನವರೇ ಆದ ಸಂಗೀತ ಕುಟುಂಬದಿಂದ ಬಂದವರು. ತಾಯಿ ಶ್ರೀಮತಿ. ರತ್ನ ಶಾಸ್ತ್ರೀ ರವರು ಶಾಸ್ತ್ರೀಯ ಸಂಗೀತ ಗಾಯನಕರು, ತಂದೆ ಶ್ರೀ. ಸುಬ್ರಹ್ಮಣ್ಯ ಶಾಸ್ತ್ರೀ ರವರಿಗೆ ಸಂಗೀತದ ಮೇಲೆ ಹೆಚ್ಚಿನ ಪ್ರೀತಿ.

ಹೇಮಂತ್ ರವರು 4ನೇ ವಯಸ್ಸಿನಲ್ಲಿ ಸಂಗೀತದ ಆಸಕ್ತಿ ಹೊಂದಿದ್ದರು, ಬಾಲ್ಯದಿಂದಲೂ ತಾಯಿ ಶಾಸ್ತ್ರೀಯ ಸಂಗೀತ ಮತ್ತು ಲಘು ಸಂಗೀತ ಹಾಡುವಾಗ ತಾವೂ ಜೊತೆಯಲ್ಲಿ ಭಾಗವಹಿಸುತ್ತಾರೆ, ತಾಯಿಯನ್ನೇ ಮೊದಲ ಗುರು ಎಂದು ಅವರು ಮಾಗ೯ದಶ೯ನದಲ್ಲಿ ಬೆಳೆದರು.

ಹೇಮಂತ್ ರವರು ಕನಾ೯ಟಿಕ್ ಶಾಸ್ತ್ರೀಯ ಸಂಗೀತವನ್ನು ವಿದ್ವಾನ್ ಶ್ರೀ. ಆರ್ ಕೆ ಶ್ರೀಕಾಂತ್ ಮತ್ತು ಅವರ ಮಗ ಆರ್. ಎಸ್ ರಮಾಕಾಂತ್ ಹಾಗೂ ಡಾ ನಾಗವಳ್ಳಿ ನಾಗರಾಜ್, ಹೆಚ್ ಕೆ ನಾರಾಯಣ ಬಳಿ ಹತ್ತು ವರ್ಷ ಸಂಗೀತಾಭ್ಯಾಸ ಮಾಡಿದರು.

ಇವರು ಸಿನಿಮಾ ಜಗತ್ತಿಗೆ ಹಿನ್ನೆಲೆ ಗಾಯಕರಾಗಿ ಎಂಟ್ರಿ ಕೊಟ್ಟದ್ದು ಪ್ರೀತ್ಸೆ ಚಿತ್ರದ ಮೂಲಕ ಸಂಗೀತ ನಿರ್ದೇಶಕರು ಹಂಸಲೇಖ ರವರು ಪರಿಚಯಿಸಿದವರು. ಮೊದಲೆಲ್ಲ ಹಿಂದಿ ಗಾಯಕರು “ಉದಿತ್ ನಾರಾಯಣ್ ” ಹಾಡುತ್ತಿದ್ದು ಅವರ ಸ್ಥಾನವನ್ನು ಕನ್ನಡದಲ್ಲಿ ಹೇಮಂತ್ ಪಡೆದುಕೊಂಡರು, ಇದುವರೆಗೂ ಇವರು ಹಾಡಿರೋ ಗೀತೆಗಳಲ್ಲಿ ಸೂಪರ್ ಹಿಟ್ ಆದ ಪ್ರಮುಖ ಗೀತೆಗಳಿವೆ.

ನಿದಿರೆ ಬರದಿರೆ ಏನಂತೀ (ಕುರಿಗಳು ಸಾರ್ ಕುರಿಗಳು ), ಪ್ರಾಬ್ಲಂ ಪ್ರಾಬ್ಲಂ (ಸೂಪರ್ ಸ್ಟಾರ್), ನೀ ನನ್ನ ಅಪ್ಪಿಕೊಳಲ್ವ (ಕುಟುಂಬ), ಡೇಂಜರ್ (ರಕ್ತ ಕಣ್ಣೀರು), ಸುವ್ವಿ ಸುವ್ವಾಲಿ (ಮುಂಗಾರು ಮಳೆ), ಕಲ್ಲರಳಿ ಹೂವಾಗಿ, ಪ್ರೀತಿ ಮಾಯ ಬಜಾರು (ದುನಿಯಾ), ಮುಗಿಯದ ಕವಿತೆ ನೀನು (ಇಂತಿ ನಿನ್ನ ಪ್ರೀತಿಯ), ನಿಲ್ಲೆ ನಿಲ್ಲೇ ಕಾವೇರಿ (ಬುಲ್ ಬುಲ್ ), ಇಂಡಿಯ ಪಾಕಿಸ್ತಾನ (ಡಿಕೆ ), ತಲೆ ಕೆಡುತೆ (ಜಗ್ಗುದಾದ ) ಹೀಗೆ ಇನ್ನೂ ಹಲವು ಬಗೆಯ ಹಾಡುಗಳು.

ಇಷ್ಟೆಲ್ಲಾ ಹಾಡಿದ ಮೇಲೆ ಪ್ರಶಸ್ತಿ ಖಂಡಿತ ಬಂದಿರ್ಬೇಕು ಅಂತ ನಿಮಗೆ ಅನ್ನಿಸುವುದು ಸಹಜ. ಕೆಲ ಪ್ರಶಸ್ತಿ ಪಟ್ಟಿ ನೋಡೋದಾದರೆ :

🦚ಜಾನಪದ ಚಿತ್ರದ ಗೀತೆಗೆ ಅತ್ಯುತ್ತಮ ಹಿನ್ನೆಲೆ ಗಾಯಕ ಎಂದು ಗುರುತಿಸಿ ಕನಾ೯ಟಕ ಸಕಾ೯ರ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

🐎 ಕಲ್ಲರಳಿ ಹೂವಾಗಿ ಚಿತ್ರದ ಗೀತೆಗೆ ಫಿಲಂ ಫೇರ್ ಮತ್ತು ಕನಾ೯ಟಕ ಸಕಾ೯ರ ಪ್ರಶಸ್ತಿ ಅತ್ಯುತ್ತಮ ಹಿನ್ನೆಲೆ ಗಾಯನಕ್ಕಾಗಿ.

🌹ಮುಂಗಾರು ಮಳೆ ಚಿತ್ರದ ಸುವ್ವಿ ಸುವ್ವಾಲಿ ಗೀತೆಗೆ ಅತ್ಯುತ್ತಮ ಗಾಯಕ ಪ್ರಶಸ್ತಿ ಕನಾ೯ಟಕ ಚಿತ್ರ ರಸಿಕರ ಸಂಘದ ಪರವಾಗಿ.

🦆ಪ್ರೀತ್ಸೆ ಪ್ರೀತ್ಸೆ ಗಾಯನಕ್ಕೆ ಎಕ್ಸೋ ಏಶಿಯಾ ನೆಟ್ ಕಾವೇರಿ ಫಿಲಂ ಪ್ರಶಸ್ತಿ ಲಭಿಸಿದೆ.

🐿ಏಶಿಯಾ ನೆಟ್ ಸುವಣ೯ ಟಿವಿ ಪ್ರಶಸ್ತಿ ಪ್ರೀತ್ಸೆ ಪ್ರೀತ್ಸೆ ಹಾಡಿಗೆ ಪಡೆದಿದ್ದಾರೆ.

🐅ಸುಪ್ರಭಾತ ಪ್ರಶಸ್ತಿ ಪ್ರೀತ್ಸೆ ಪ್ರೀತ್ಸೆ ಹಾಡಿಗಾಗಿ ಹಿನ್ನೆಲೆ ಗಾಯಕ ಗುರುತಿಸಿ ನೀಡಿರೋದು.

ಇವರು ಕನ್ನಡದ ಹೆಸರಾಂತ ನಟರಾದ ಡಾ ಶಿವರಾಜ್ ಕುಮಾರ್, ಪುನೀತ್ ರಾಜಕುಮಾರ್, ಉಪೇಂದ್ರ, ಗಣೇಶ್, ಸುದೀಪ್, ಶ್ರೀನಗರ ಕಿಟ್ಟಿ, ದಶ೯ನ್, ಯಶ್ ರವರಿಗೆ ಗೀತೆಗಳನ್ನು ಹಾಡುವ ಮೂಲಕ ಅಭಿಮಾನಿಗಳಿಗೆ ಗಾನಸುಧೆ ನೀಡಿದ್ದಾರೆ.

ಸಂಗೀತ ನಿದೇ೯ಶಕರಾದ ಹಂಸಲೇಖ, ವಿ ಮನೋಹರ್, ಗುರುಕಿರಣ್, ಮನೋಮೂತಿ೯, ಅಜು೯ನ್ ಜನ್ಯ, ವಿ ಹರಿಕೃಷ್ಣ, ವಿ ಶ್ರೀಧರ್ , ಸಾಧುಕೋಕಿಲ, ರಿಕ್ಕಿ ತೇಜ್ ರವರ ಜೊತೆ ಕೆಲಸ ಮಾಡಿದ್ದಾರೆ.

ಗಾಯನವಲ್ಲದೆ ಕೆಲ ಟಿವಿ ಶೋಗಳನ್ನು ನಡೆಸಿಕೊಟ್ಟಿದ್ದಾರೆ, ಉದಯ ವಾಹಿನಿಯ “ಕುಹು ಕುಹು “, ಗುಣಗಾನ, ಜೀ ಕನ್ನಡದ “ಸರಿಗಮಪ ಹಾಗೂ ಸರಿಗಮಪ ಲಿಟ್ಲ್ ಚಾಂಪ್ಸ್ ” ಸರಣಿಯ ನಿರೂಪಕರಾಗಿ, ಕನ್ನಡ ಸಂಘದವರು ಮಸ್ಕಟ್ ನಲ್ಲಿ ನಡೆಸಿದ “ಗಾನ ಲಹರಿ ” ದುಬೈ ಮತ್ತು ಬಹ್ರಿನ್ ನಲ್ಲಿ ನಡೆಸಿಕೊಟ್ಟಿರೋದು ಮತ್ತು ವಿಶ್ವವ್ಯಾಪಿ ಹೆಸರಾಗಿರೋದು ಗಮನಾರ್ಹ.

ಕರುನಾಡ ಹಬ್ಬ ಬಹ್ರಿನ್ ನಲ್ಲಿ ಇತ್ತೀಚೆಗೆ ನಡೆದ ಬಹು ದೊಡ್ಡ ಕಾಯ೯ಕ್ರಮ.

“ಲೇಫ್ ಇಸ್ ಬ್ಯೂಟಿಫುಲ್ ” ಮತ್ತು “ಬಾ ಸಂಗಾತಿ “ಮ್ಯೂಸಿಕ್ ಆಲ್ಬಂ ಟೆಕಿ ಕನ್ನಡದವರಿಗೆ ರಚಿಸಿರೋದು ಹಾಗೂ “ನೀ ಬದಲಾದರೆ ” ಎನ್ನುವ ದೇಶಭಕ್ತಿ ಗೀತೆಗಳ ರಚನೆಯನ್ನು ರಿಕ್ಕಿ ತೇಜ್ ಸಂಗೀತ ನಿದೇ೯ಶಕರ ಸಾರಥ್ಯದಲ್ಲಿ ಮೂಡಿ ಬಂದಿದೆ ಅದರಲ್ಲೂ ನಮ್ಮ ಕನ್ನಡಿಗ ಹಾಡಿರೋದು ನಾವು ಹೆಮ್ಮೆ ಪಡುವ ವಿಷಯ.

ಪ್ರೀತ್ಸೆ ಪ್ರೀತ್ಸೆ ಹಾಡು ಎಷ್ಟೋ ಜನ ನೊಂದ ಪ್ರೇಮಿಗಳ ವಿರಹ ಗೀತೆ ಎಂದಿಗೂ ಸಾವ೯ಕಾಲಿಕ ದಾಖಲೆಯಾಗಿ ಉಳಿದಿದೆ.

ಇನ್ನೂ ಹಲವಾರು ಗೀತೆಗಳನ್ನು ಹಾಡಿ ಅಭಿಮಾನಿಗಳನ್ನು ರಂಜಿಸಲಿ ಎಂಬ ಆಶಯದೊಂದಿಗೆ ಈ ಸಣ್ಣ ಲೇಖನ ಮುಗಿಸುವೆ.

ಶ್ರೀನಿವಾಸ್ ಎ

ಶ್ರೀನಿವಾಸ್ ಎ

ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು. ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ. ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏

Leave a Reply