ವೈದ್ಯರ ತಂಡವು ಸೇರಿ ಪೇಶಂಟ್ಗಳಿಗೆ ಚಿಕಿತ್ಸೆ ನೀಡಿ ಸರ್ಜರಿ ಮಾಡೋದು ಸಹಜವೇ ಸರಿ ಆದ್ರೆ ಒಂದು ಪರಿಪೂರ್ಣ ಸಿನಿಮಾ ಮಾಡೋದು ಖಂಡಿತ ಅತಿಷಯವು, ಈ ಅತಿಶಯೋಕ್ತಿ ಮಾತನ್ನು ಕಾರ್ಯರೂಪವಾಗಿಸಿದ ” ಪ್ರೇಮಂ ಪೂಜ್ಯ0″ಚಿತ್ರತಂಡ.. ಹಲವು ವೈದ್ಯರುಗಳು ಒಗ್ಗೂಡಿ ಸದಭಿರುಚಿ ಸಿನಿಮಾ ಮಾಡುವಲ್ಲಿ ಗೆಲುವು ಸಾಧಿಸಿದ್ದಾರೆ.
ನೆನಪಿರಲಿ ಚಿತ್ರದ ಮೂಲಕ ಖ್ಯಾತಿ ಪಡೆದ ನಾಯಕ ನಟ ಲವ್ಲಿ ಸ್ಟಾರ್ ಪ್ರೇಮ್ ಅಭಿನಯದ 25ನೆ ಸಿನಿಮಾವಾದ ” ಪ್ರೇಮಂ ಪೂಜ್ಯo” ಎದೆ ಝಂ ಎನ್ನಿಸುವ ಮತ್ತೊಂದು ಸುಮಧುರ ಪ್ರೇಮಕಾವ್ಯಾಗಿದೆ.
ಆಸ್ಪತ್ರೆಯಲ್ಲಿ ಖ್ಯಾತ ಹೃದಯ ತಜ್ನ್ಯನಾಗಿ ಪರಿಚಯವಾಗೋ ನಾಯಕ ಡಾ.ಹರಿ( ಪ್ರೇಮ್), ತನ್ನದೆಯಾದ ಭಾವಭರಿತ, ಭಾರವಾದ ಪ್ರಣಯದ ಪಯಣ ಪ್ಲಾಷ್ಬ ಬ್ಯಾಕ್ ರೂಪದಲ್ಲಿ ಅನಾವರಣವಾಗುತ್ತೆ. ಮೆಡಿಕಲ್ ಕಾಲೇಜಿನಲ್ಲಿ ಸಹಪಾಠಿಯಾಗಿ ಪರಿಚಯವಾಗೋ ನಾಯಕಿ ಶೆರ್ಲಿನ್ ಪಿಂಟೋ( ಬೃಂದಾ ಆಚಾರ್ಯ) ಮತ್ತು ಹರಿ ನಡುವೇ ಮೂಡೋ ದೈವೀಕವಾದ ಒಲವು ಅದರಲ್ಲಿ ಸುಮಾರು ತಿರುವುಗಳು, ಏಕಕಾಲದಲ್ಲಿ ಮನಸ್ಸು ಕಿವಿಚುವ- ಹೃದಯ ತುಂಬುವ ಸಂಧರ್ಭಗಳು, ಎಲ್ಲಾ ಪಾತ್ರಗಳ ದಿಟ್ಟ ನಿರ್ಧಾರಗಳು , ತಲೈವನಾಗಿ ಬರುವ ಸಾಧುಕೋಕಿಲ ಮತ್ತು ರಂಜನ್ ಪಾತ್ರದಲ್ಲಿ ಕಾಣಿಸುವ ಮಾ. ಆನಂದ್ ಅವರ ಹಾಸ್ಯದೌತಣ ಎಲ್ಲವೂ ಅಳಿದು ತೂಗಿ ರುಚಿಯಾದ ಫುಲ್ ಮೀಲ್ಸ್ ಆಗಲು ಒಗ್ಗೂಡಿದಂತಿದೆ. ಇತ್ತ ಛಾಯಾಗ್ರಾಹಕ ನವೀನ್ ಕುಮಾರ, ಸುಂದರವಾದ ಗಮನ ಸೆಳೆಯುವ ಸ್ಥಳಗಳಿಗೆ ಬೆಳಕು ಚೆಲ್ಲುತ್ತ, ಭಾವಣೆಗಳನ್ನ ಸೆರೆ ಹಿಡಿಯುತ್ತ ಅಂದದ ದೃಶ್ಯ ಕಾವ್ಯವ ಅರ್ಪಿಸಿದ್ದಾರೆ. ಸಾಹಿತ್ಯ, ಸಂಗೀತ ಮತ್ತು ನಿರ್ದೇಶನದ ಜವಾಬ್ದಾರಿಯ ಜೊತೆಗೆ ಇಡೀ ಸಿನಿಮಾದ ಪರಿಕಲ್ಪನೆಗೆ ಜೀವ ತುಂಬುವಲ್ಲಿ ಡಾ. ಬಿ ಎಸ್. ರಾಘವೇಂದ್ರ ಕಲಾಧಾರೆಯನ್ನೇ ಹರಿಸಿದ್ದಾರೆ. ಇನ್ನು ಪ್ರೇಮ್ ಅವರ ಅಭಿನಯ ಸಹಜವಾದ ಹಾವ ಭಾವ ಸಾಕ್ಷತ ಡಾಕ್ಟರ್ ನಂತೆ ಕಾಣುವ, ಪ್ರಭುದ್ಧರಾಗಿ ಮಾತಾಡುವ ವೈಖರಿ ಈ ಸಿನಿಮಾಗೆ ಅತಿ ದೊಡ್ಡ ಶಕ್ತಿಯಾಗಿದೆ. ಸಿನಿಮಾ ಹಾಡುಗಳಲ್ಲಿ ತೇಲುತ್ತೇ, ದೋಣಿಯಂತೆ ಸಾಗುತ್ತೆ, ಸೆಳೆಯುತ್ತೆ.
ಬದುಕಿಗೆ ಒಲವೇ ಅತಿ ದೊಡ್ಡ ಕಾಣಿಕೆ ಅದು
” ವೃತ್ತಿ – ವ್ಯಕ್ತಿ” ಎರಡಕ್ಕೂ ಅನ್ವಯಿಸುತ್ತೇ ಅನ್ನೋ ಸಂದೇಶ ಈ ಸಿನಿಮಾ ಬೀರಿದೆ.
ತಾರಾಗಣ:- ಪ್ರೇಮ್, ಬೃಂದಾ ಆಚಾರ್ಯ, ಐಂದ್ರಿತ ರೈ, ಮಾಸ್ಟರ್ ಆನಂದ್, ಸಾಧು ಕೋಕಿಲ ಮತ್ತು ಗಿವಿಂದೇ ಗೌಡಾ.
ನಿರ್ದೇಶನ :- ಡಾ. ರಾಘವೇಂದ್ರ
chitrodyama rating 8.5/10
ನಿರ್ಮಾಣ:- ಡಾ. ರಕ್ಷಿತ್ ಕೆದಂಬಾಡಿ, ಡಾ. ರಾಜಕುಮಾರ.