ಬಂಗಾರದ ಮನುಷ್ಯ ರಾಜೀವಪ್ಪ ನೆನಪು

ಯಾವುದೇ ಕೆಲಸವಿದ್ರೂ ಎಲ್ಲೇ ಇದ್ದರೂ ಹತ್ತು ನಿಮಿಷ ಕೊನೇ ದೃಶ್ಯ ನಮ್ಮನ್ನು ಕಣ್ಣು ಮಿಟುಕಿಸದೆ ನೋಡೋ ಹಾಗೆ ಮಾಡುವ ಚಿತ್ರ ಈ ಬಂಗಾರದ ಮನುಷ್ಯ …

ನೋಡ್ತಾ ನೋಡ್ತಾ ಪ್ರತಿ ಸನ್ನಿವೇಶಕ್ಕೂ ಮನೆಯಲ್ಲಿ ಎಲ್ಲ ಇದ್ದರೂ ಅವರ ಕಡೆ ಗಮನ ನೀಡದೆ ನಮಗೆ ದುಃಖ ತಡೆಯಲಾಗದೆ ಅಳ್ತಾ ಅಳ್ತಾ ಅಳ್ತಾ ಆ ದೇವರನ್ನ ಕಣ್ತುಂಬಿಕೊಳ್ಳೋದು ಕಷ್ಟವಾದರೂ ಪರವಾಗಿಲ್ಲ ಅಂತ ಟಿವಿ ಮುಂದೆ ಕೂತ್ಕೊಳೋ ಹಾಗೆ ಮಾಡಿದ ಜೀ ಪಿಕ್ಚರ್ ವಾಹಿನಿ.

ಬಿಗ್ ಬಾಸ್ ಅಭಿನಯಕ್ಕೆ ಯಾರೂ ಬರಲ್ಲ ಬರೋದಕ್ಕೆ ಸಾಧ್ಯವಿಲ್ಲ

ಅತ್ತು ಅತ್ತು ಕಣ್ಣೀರು ಬತ್ತಿದರೂ ಪುನಃ ನೋಡಬೇಕೆನಿಸುವ ನೈಜ ಅಭಿನಯ ದೇವ್ರುದು, ಎಷ್ಟೋ ಸಲ ನೋಡಿದರೂ ಮತ್ತೆ ಮತ್ತೆ ಮತ್ತೆ ಮತ್ತೆ ಕಾಡುವ ಚಿತ್ರ ಬಂಗಾರದ ಮನುಷ್ಯ.

“ರಾಜೀವಪ್ಪ ಎಲ್ಲೇ ಇರೀ ಹ್ಯಾಗೇ ಇರೀ ನಿಮ್ಮ ಊರು ಮಕ್ಕಳುನಾ ಹರುಸ್ತಾ ಇರಿ”

ಅಪ್ಪಾಜಿ ನಿಮ್ಮನ್ನು ಕಣ್ಣಾರೆ ನೋಡಿ ಮಾತನಾಡೋ ಭಾಗ್ಯ ಕೊಡಲಿಲ್ಲ ಆ ದೇವರಿಗೆ ನನ್ನ ಶಾಪ ಹಾಕುತ್ತೇನೆ, ಮತ್ತೊಮ್ಮೆ ಮತ್ತೊಮ್ಮೆ ಮತ್ತೊಮ್ಮೆ ಮತ್ತೊಮ್ಮೆ ಹುಟ್ಟಿ ಬನ್ನಿ ಕರುನಾಡಲ್ಲಿ

ಮಿಸ್ ಯೂ ಅಪ್ಪಾಜಿ 😢 😢 😢

“Man of Golden Heart One and Only Dr. Rajkumar “

ಶ್ರೀನಿವಾಸ್ ಎ

ಶ್ರೀನಿವಾಸ್ ಎ

ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು. ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ. ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏

Leave a Reply