ಬತ್೯ಡೇ ಸ್ಪೆಷಲ್ – ಪುಟ್ಟಣ್ಣ ಕಣಗಾಲ್

ಕನ್ನಡ ಚಿತ್ರರಂಗದಲ್ಲಿ ಆಗಿನ ಕಾಲದಲ್ಲಿ ಹಲವಾರು ನಿದೇ೯ಶಕರು ಬಂದರು ಹೋದರು ಆದರೆ ಹೆಸರು ಇರೋದು ಕೆಲವರು ಮಾತ್ರ ಸಿದ್ದಲಿಂಗಯ್ಯ, ಜಿ ವಿ ಅಯ್ಯರ್, ದೊರೆ ಭಗವಾನ್, ವಿಜಯ್, ಸಿಂಗೀತಂ ಶ್ರೀನಿವಾಸ್ ಇನ್ನೂ … ಅಂಥ ಸಾಲಿನಲ್ಲಿ ನಿಲ್ಲುವವರು ಚಿತ್ರ ನಿದೇ೯ಶಕರು ಪುಟ್ಟಣ್ಣ ಕಣಗಾಲ್ ರವರು, ಅವರಿಗೆ ಜನುಮ ದಿನದ ಶುಭಾಶಯಗಳು 💐💜🌹

ಭಾರತೀಯ ಚಿತ್ರರಂಗ ತಿರುಗಿ ನೋಡುವ ಹಾಗೆ ಮಾಡಿದ ಚಿತ್ರ ಜೀವಿ, ಕನ್ನಡ ಕಲೆ ಸಾಹಿತ್ಯ ಹೊರಾಂಗಣ ಚಿತ್ರೀಕರಣ , ಸಮಾಜದ ಆಗು ಹೋಗುಗಳು, ವಿಶಿಷ್ಟ ಪ್ರೇಮ ಕಥೆಗಳು, ಹೆಣ್ಣಿನ ಮೇಲೆ ಆಗುವ ದೌಜ೯ನ್ಯ, ವಿವಿಧ ರೀತಿಯ ಚಿತ್ರಕಥೆಗಳು ಕಾದಂಬರಿ ಆಧಾರಿತ ಚಿತ್ರ ರೂಪಿಸುವಲ್ಲಿ ಇವರ ಪಾತ್ರ ಬಹಳ ದೊಡ್ಡದು.

ಚಿತ್ರರಂಗಕ್ಕೆ ನಾಯಕ ಖಳನಾಯಕ ನಟಿ ಯರನ್ನು ಪರಿಚಯಿಸಿದವರು ಅಂಬರೀಷ್, ಶ್ರೀನಾಥ್, ರಾಮಕೃಷ್ಣ, ವಜ್ರಮುನಿ, ಆರತಿ, ಕಲ್ಪನ, ಪದ್ಮಾ ವಾಸಂತಿ, ಅಶೋಕ್, ಸುಂದರ್ ಕೃಷ್ಣ ಅರಸ್, ಲೀಲಾವತಿ, ಕನ್ನಡ ನಿರೂಪಕಿ ಅಪಣ೯ ರವರು…

ಒಬ್ಬ ಪರಿಪೂರ್ಣ ನಿದೇ೯ಶಕರಾಗುವುದು ತಮಾಷೆಯ ಮಾತಲ್ಲ ಯಾವುದೇ ರೀತಿಯ ಸಂದಭ೯ವನ್ನು ಎದುರಿಸುವ ಶಕ್ತಿ ಇರುವವರೇ ನಿಜವಾದ ನಿದೇ೯ಶಕರು. ನಿದೇ೯ಶನದಲ್ಲಿ ಕೋಪದ ಸ್ವಭಾವದವರು ಮತ್ತು ತಾನು ಅಂದುಕೊಂಡ ಹಾಗೆ ಚಿತ್ರ ಬರೋವರೆಗೂ ಯಾರನ್ನೂ ಬಿಡದೆ ಅವರಿಂದ ಕೆಲಸ ತೆಗೆಯುತ್ತಿದ್ದುದು ಅವರ ಗುಣ ಮತ್ತು ಕೆಲವರು ಇವರ ನಿದೇ೯ಶನ ಶೈಲಿಯಿಂದ ಬೇಜಾರಾದವರು ಉಂಟು, ಇನ್ನೂ ಕೆಲವರು ಹೇಳೋ ಮಾತು ಇವರು ಕೇವಲ ಸೀಮಿತ ವಗ೯ದವರ ಜೊತೆ ಬೆರೆತು ಚಿತ್ರ ಮಾಡುತ್ತಾರೆಂದು ಎಷ್ಟು ಸರಿ ಎಂಬುದು ಅವರಿಗೆ ಬಿಟ್ಟಿದ್ದು.

ನಾಗರಹಾವು, ಗೆಜ್ಜೆ ಪೂಜೆ, ಶುಭಮಂಗಳ, ಶರಪಂಜರ, ರಂಗನಾಯಕಿ, ಮಾನಸ ಸರೋವರ, ಉಪಾಸನೆ, ಮಸಣದ ಹೂವು, ಅಮೃತ ಘಳಿಗೆ, ಬೆಳ್ಳಿ ಮೋಡ, ಕಥಾ ಸಂಗಮ. ಪಡುವಾರಹಳ್ಳಿ ಪಾಂಡವರು, ಸಾಕ್ಷಾತ್ಕಾರ…
ಇವರ ಮೇಲೆ ಕೆಲ ಆಪಾದನೆ ಬಂದರೂ ತಲೆ ಕೆಡಿಸಿಕೊಳ್ಳದೆ ತಮಗಿಷ್ಟ ಬಂದ ಹಾಗೆ ಜೀವನ ನಡೆಸುತ್ತಿದ್ದರು.

ಏನೇ ಇರಲಿ ಏನೇ ಆಗಲಿ ಚಿತ್ರರಂಗಕ್ಕೆ ಇವರ ಕೊಡುಗೆ ಅಪಾರ, ಅತ್ಯುತ್ತಮ ಚಿತ್ರಕಥೆ, ಅತ್ಯುತ್ತಮ ಚಲನಚಿತ್ರ, ರಾಷ್ಟ್ರೀಯ ಪ್ರಶಸ್ತಿ, ಕನಾ೯ಟಕ ಸಕಾ೯ರ ಪ್ರಶಸ್ತಿ, ಫಿಲಂ ಫೇರ್ ಪ್ರಶಸ್ತಿ ಪುರಸ್ಕೃತರು.

ವೈಯಕ್ತಿಕ ಜೀವನ ಎಲ್ಲರ ಬಾಳಲ್ಲೂ ನಡೆಯೋದೇ ಆದರೆ ಚಿತ್ರರಂಗದ ಸುದೀರ್ಘ ಸೇವೆಗೆ ಇವರನ್ನು ನಾವು ಸ್ಮರಿಸಬಹುದು ಹಾಗೂ ಕನ್ನಡ ಚಿತ್ರರಂಗ ಇರುವವರೆಗೂ ಇವರ ಹೆಸರು ಶಾಶ್ವತವಾಗಿ ಉಳಿಯಲಿ ಮತ್ತೊಮ ಜನುಮ ದಿನದ ಶುಭಾಶಯಗಳು 💐

ಶ್ರೀನಿವಾಸ್ ಎ

ಶ್ರೀನಿವಾಸ್ ಎ

ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು. ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ. ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏

Leave a Reply