ಬಬ್ರುವಾಹನ @ 44 ವಷ೯ದ ನೆನಪು 🏇🦋🙏

ಬಬೃವಾಹನ, ಅಜು೯ನನ ಮಗ, ಮಣಿಪುರಕ್ಕೆ ಹೋಗಿ ಬಬೃವಾಹನನ ವಿರುಧ್ಧ ಯುದ್ಧ ಮಾಡಿ ಯುಧ್ಧದಲ್ಲಿ ಬಬೃವಾಹನ ಅಜು೯ನನನ್ನು ಕೊಲ್ಲೋದು, ಮುಂದೆ ಏನಾಗುವುದು….?

ಹುಣಸೂರು ಕೃಷ್ಣಮೂರ್ತಿ ನಿದೇ೯ಶನ, ಕೆ ಸಿ ಎನ್ ಚಂದ್ರಶೇಖರ್ ನಿಮಾ೯ಣ ಮಾಡಿರುವ 1977 ಕನ್ನಡ ಚಲನಚಿತ್ರ. ಈ ಚಿತ್ರ ಕನ್ನಡದಲ್ಲಿ ಮೊದಲು ಮತ್ತು ಭಾರತೀಯ ಚಿತ್ರರಂಗದಲ್ಲಿ ಬಬೃವಾಹನ ಆಧಾರಿತ 7ನೇಯದು.

ಚಿತ್ರ ತೆಲುಗಿನಲ್ಲಿ ಡಬ್ಬಿಂಗ್ ಆದದಲ್ಲದೆ ಹಿಂದಿಯಲ್ಲಿ ವೀರ್ ಅಜು೯ನ್ ಹೆಸರಲ್ಲಿ ಡಬ್ ಮಾಡಿದ್ದಾರೆ.

ಚಿತ್ರ 175 ದಿನ ಕನಾ೯ಟಕದಲ್ಲಿ ಬಿಡುಗಡೆಯಾದ ಕೇಂದ್ರಗಳಲ್ಲಿ ಯಶಸ್ವಿ ಪ್ರದಶ೯ನ ಕಂಡಿದೆ, ಚೆನ್ನೈನಲ್ಲಿ 100 ದಿನ, ತೆಲುಗಿನಲ್ಲಿ 100 ದಿನ ಆಂಧ್ರಪ್ರದೇಶ ದಲ್ಲಿ ಪ್ರದಶ೯ನ.

ಸಂಗೀತ ನಿದೇ೯ಶನ ಟಿ ಜಿ ಲಿಂಗಪ್ಪ, ಚಿ ಉದಯಶಂಕರ್ ಹಾಗೂ ಹುಣಸೂರು ಕೃಷ್ಣಮೂರ್ತಿ ಸಾಹಿತ್ಯ. ಒಂದಕ್ಕಿಂತ ಒಂದು ಸೂಪರ್ ಹಿಟ್ ಹಾಡುಗಳು.

ಪಾತ್ರವಗ೯ಗಳ ಸಣ್ಣ ಪರಿಚಯ :-

💐ರಾಜ್ ಕುಮಾರ್ : ಅಜು೯ನ ಮತ್ತು ಬಬೃವಾಹನ. ಅಜು೯ನ ಬಬೃವಾಹನ ತಂದೆ, ಪಾಂಡವರಲ್ಲಿ ಮೂರನೆಯವರು, ಚಿತ್ರಾಂಗದ ರನ್ನು ಗಡಿಪಾರಿನಲ್ಲಿ ಭೇಟಿ ವಿವಾಹ,
ಬಬೃವಾಹನ ಅಜು೯ನ , ಚಿತ್ರಾಂಗದಾ ಮಗ. ತಂದೆ ಯಾರೆಂಬ ಸತ್ಯ ತಿಳಿದು ತಂದೆಗೆ ಮಗನ ಅರಿವಿಲ್ಲದೆ ಇದ್ದಾಗ ನಿಜ ಹೇಳುವ ಪ್ರಯತ್ನ ವಿಫಲ ಕೊನೆಯಲ್ಲಿ ಮಗನಿಂದ ತಂದೆಗೆ ಮೃತ್ಯು.
🎩ಬಿ ಸರೋಜಾದೇವಿ : ಚಿತ್ರಾಂಗದ ,ಮಣಿಪುರ ರಾಜನ ಮಗಳು, ಅಜು೯ನನ ರಥ ಸಾರಥಿಯೂ ಕೂಡ, ಬಬೃವಾಹನ ತಾಯಿ.
🌹ಕಾಂಚನ : ಉಲೂಪಿ (ಹಿನ್ನೆಲೆ ಧ್ವನಿ ಬಿ ಜಯಶ್ರೀ ). ಕೌರವ್ಯ ನಾಗಲೋಕದ ರಾಜ ಮಗಳು, ಅಜು೯ನನ 2ನೇ ಹೆಂಡತಿ, ಚಿತ್ರಾಂಗದಾ ರಿಂದ ದೂರವಿದ್ದವರು.
🌲ಜಯಮಾಲ : ಸುಭದ್ರ, ಅಜು೯ನನ ಹೆಂಡತಿ, ಕೃಷ್ಣ ದೇವರ ತಂಗಿ.
👑ರಾಮಕೃಷ್ಣ : ಅಜು೯ನನ ಸಾರಥಿ, ಸುಭದ್ರ ಹಿರಿಯ ಅಣ್ಣ.
🦚ವಜ್ರಮುನಿ : ವ್ರಿಷಕೇತು, ಕಣ೯ನ ಮಗ, ಅಜು೯ನನಿಗೆ ಇವರೆಂದರೆ ಹೆಚ್ಚಿನ ಪ್ರೀತಿ.
👒ತೂಗುದೀಪ ಶ್ರೀನಿವಾಸ್ : ತಕ್ಷಕ, ನಾಗಲೋಕ
👍ಸಂಪತ್ : ಕೌರವ್ಯ, ಉಲುಪಿ ತಂದೆ, ನಾಗಲೋಕದ ಒಡೆಯ.
ಶನಿ ಮಹದೇವಪ್ಪ, ಭಟ್ಟಿ ಮಹದೇವಪ್ಪ, ರಾಜಾನಂದ್ ಮತ್ತಿತರರು.
🏍ರಾಜ್ ಕಮಲ್ ಆಟ್ಸ್೯ ಚಿತ್ರ ನಿಮಾ೯ಣ ಸಂಸ್ಥೆ.
🦋ಎಸ್ ವಿ ಶ್ರೀಕಾಂತ್ ಛಾಯಾಗ್ರಹಣ.
🏇ಕನಾ೯ಟಕ ರಾಜ್ಯ ಸಕಾ೯ರ ಪ್ರಶಸ್ತಿಗಳು ಅತ್ಯುತ್ತಮ ನಟ ಡಾ ರಾಜ್ ಕುಮಾರ್.
🌺ಅತ್ಯುತ್ತಮ ಧ್ವನಿ ರೆಕಾಡಿ೯ಂಗ್ ಎಸ್ ಪಿ ರಾಮನಾಥನ್.

“ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ …
ಸಮರದೋಳ್ ಆಘಿ೯ಸಿದ ಆ ನಿನ್ನ ವಿಜಯಗಳ ಮಮ೯
ಎಲ್ಲದಕ್ಕೂ ಕಾರಣನು ಶ್ರೀ ಕೃಷ್ಣ ಪರಮಾತ್ಮ
ಹಗಲಿರುಳು ನೆರಳಂತೆ ತಲೆ ಕಾಯ್ದು ಕಾಪಾಡಿ
ಜಯವ ತಂದಿತ್ತ ಆ ಯದು ನಂದನಾ…
ಅವನಿಲ್ಲದೆ ಬಂದ ನೀನು ತೃಣಕ್ಕೆ ಸಮಾನಾ…

ಈ ಐತಿಹಾಸಿಕ ಸಂಭಾಷಣೆ ಮರೆಯುವುದುಂಟೆ ಅಜು೯ನ ಅಭಿಮನ್ಯುವಿನ ಜೊತೆ ವಾಗ್ವಾದ ನಡೆದಾಗ ಬರುವುದು, ಯಾಕೆ ಈ ಸಾಲುಗಳು ಹೇಳ್ತಿರೋದು ಕಾರಣ “ಬಬ್ರುವಾಹನ ” ಚಿತ್ರ ಬಿಡುಗಡೆಯಾಗಿ ಇಂದಿಗೆ 44ವಷ೯ಗಳು, ಅಪ್ಪಾಜಿಯ ದ್ವಿಪಾತ್ರ ಅಭಿನಯ ವಣ೯ನಾತೀತ, ಈ ಚಿತ್ರ ಟಿವಿಯಲ್ಲಿ ಬಂದರೆ ಸಾಕು ನಮಗೇನೂ ಬೇಡ, ಆ ಪಾತ್ರವನ್ನು ನೋಡುತ್ತಾ ನಮ್ಮನ್ನೇ ಮರೆಯುತ್ತಿದ್ದೆವು, ಈ ಚಿತ್ರ ಬಿಡುಗಡೆಯಾದಾಗ ನಾನಂತೂ ಹುಟ್ಟಿರಲಿಲ್ಲ ಆದರೆ ನಮ್ಮ ಜೀವನ ಮುಗಿಯೊವರೆಗೂ ಮರೆಯುವುದಿಲ್ಲ, ಕಥೆಗಳಲ್ಲಿ ಓದಿರೋದನ್ನು ಚಲನಚಿತ್ರದಲ್ಲಿ ನೋಡೋದು ಬಲು ಮಜ.

ಅಂದಿಗೂ ಇಂದಿಗೂ ಎಂದಿಗೂ ಐತಿಹಾಸಿಕ ಸೃಷ್ಟಿ ದಾಖಲೆ ಮಾಡಿದ ಚಿತ್ರ “ಬಬ್ರುವಾಹನ “

admin (TNS)

admin (TNS)

ಸುಂದರ ಉದ್ಯಾನವನಗಳು, ಸಾಫ್ಟ್ವೇರ್ ಕಂಪನಿಗಳಿಂದ ಚಿರಪರಿಚಿತ ಊರು ಬೆಂಗಳೂರು.ಅಲ್ಲಿಂದ ಸುಮಾರು 100 ಕಿಲೋಮಿಟೆರ್ ದೂರದಲ್ಲಿರುವ ಊರು ಮಧುಗಿರಿ. "ಧರೆಯೊಳೆಲ್ಲೆ ಇರಲಿ ನಾನು ಮರೆಯಲಾರೆ ಮಧುಗಿರಿ" ಎಂದು ಹೊಯ್ಸಳ ದೊರೆಗಳಿಂದ ಹೊಗಳಿಸಿಕೊಂಡ ಇದೇ ಮಧುಗಿರಿ ಯ ತೊಂಡೋಟಿ ಎಂಬ ಒಂದು ಕುಗ್ರಾಮದಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ ಇವರು ಅದೇ ಊರಿನಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣ ಮುಗಿಸಿ, ತುಮಕೂರು ಹಾಗು ಬೆಂಗಳೂರಿನಲ್ಲಿ ತಮ್ಮ ಉನ್ನತ ವಿದ್ಯಾಭ್ಯಾಸ ವನ್ನು ಪೂರೈಸಿದರು. ನಂತರ ಮಲೇಷಿಯಾದ ಕೌಲಲಮ್ಪುರದಲ್ಲಿ ಕಂಪ್ಯೂಟರ್ ಇಂಜಿನಿಯರ್ (ಇಂಜಿನ್ ಗೆ ನೀರು ಹಾಕುವ) ಕೆಲಸ ಮಾಡುತ್ತಿದ್ದಾರೆ. ಎಸ್. ಎಲ್ ಭೈರಪ್ಪ, ಬೇಂದ್ರೆ ಯವರ ಕನ್ನಡ ಸಾಹಿತ್ಯದ ಜೊತೆ ಜೊತೆಗೆ ಯಂಡಮೂರಿ, ದೇವುಡು ರವರ ತೆಲುಗು ಸಾಹಿತ್ಯಗಳನ್ನು ಓದುವ ಹವ್ಯಾಸ ಗಳನ್ನೂ ಇಟ್ಟುಕೊಂಡ ಇವರು ಕೆಲವು ಕವನ ಹಾಗು ಕತೆಗಳನ್ನು ಸಹ ಬರೆದಿದ್ದಾರೆ. ಇವರ "ನಾನು ನಾನೇನಾ" ಎಂಬ ಕಾದಂಬರಿ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಕನ್ನಡ ಚಿತ್ರೋದ್ಯಮದ ವಿಶಿಷ್ಟ ಸಂಗತಿಗಳನ್ನು ಪರಿಚಯಿಸಲೆಂಬ ಉದ್ದೇಶದಿಂದ ಚಿತ್ರೋದ್ಯಮ.ಕಾಂ ಎಂಬ ಈ ವೆಬ್ಸೈಟ್ ಅನ್ನು ತೆರೆದು ತನ್ಮೂಲಕ ಕನ್ನಡ ಚಿತ್ರೋದ್ಯಮಕ್ಕೆ ತನ್ನ ಅಳಿಲು ಸೇವೆಯನ್ನು ಸಲ್ಲಿಸುತ್ತಿದ್ದಾರೆ.

Leave a Reply