ಬಾಲಿವುಡ್ಡಿಗೆ ರಶ್ಮಿಕಾ ಮಂದಣ್ಣ ಎಂಟ್ರಿ

Rashmika_Mandanna

ರಶ್ಮಿಕಾ ಮಂದಣ್ಣ ಅವರು ಪುಷ್ಪಾ ಸಿನಿಮಾದಲ್ಲಿ ಶ್ರೀ ವಲ್ಲಿ ಪಾತ್ರದಿಂದ ಎಲ್ಲರ ಜನ ಮನ ಮೆಚ್ಚುಗೆ ಗಳಿಸಿದರು. ಪುಷ್ಪರಾಜ್ ಆಗಿ ಅಲ್ಲೂ ಅರ್ಜುನ್ ಅಭಿನಯ ಸೌತ್ ಇಂಡಿಯಾ ಅಲ್ಲದೆ ಉತ್ತರ ಭಾರತದಲ್ಲೂ ಆ ಪಾತ್ರ ಮೆಚ್ಚುಗೆಯನ್ನು ಗಳಿಸಿ, ಇಬ್ಬರು ಭಾರತದಾದ್ಯಂತ ಜನಪ್ರಿಯತೆಯನ್ನು ಗಳಿಸಿದರು.

ಇದೆ ಜನಪ್ರಿಯತೆಯು ಈಗ ರಶ್ಮಿಕಾ ಅವರಿಗೆ ಬಾಲಿವುಡ್ನಲ್ಲಿ ಅವಕಾಶವೂ ಒದಗಿ ಬಂದಿದೆ. ಬಾಲಿವುಡ್ನಲ್ಲಿ ರಣಬೀರ್ ಸಿಂಗ್ ಜೊತೆಯಲ್ಲಿ ಅನಿಮಲ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸಂದೀಪ್ ರೆಡ್ಡಿ ವಂಗರವರು ಈ ಚಿತ್ರದ ನಿರ್ದೇಶಕರಾಗಿದ್ದಾರೆ.

ಈ ಚಿತ್ರದಲ್ಲಿ ನನ್ನ ಪಾತ್ರವು ವಿಶೇಷವಾಗಿದೆ ಎಂದು ರಶ್ಮಿಕಾ ಮಂದಣ್ಣರವರು ಹೇಳಿದ್ದಾರೆ. ಇದಲ್ಲದೆ ಗುಡ್ ಬೈ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಜೊತೆ ನಟಿಸಿದ್ದಾರೆ. ಈಗ ಅವರ ಕೈನಲ್ಲಿ ಮಿಷನ್ ಮಜನು, ವಾರೀಸು, ಪುಷ್ಪ-2 , ಚಿತ್ರಗಳಿದ್ದು, ಚಿತ್ರರಂಗದಲ್ಲಿ ಬಹಳ ಬಿಜಿ ನಾಯಕಿಯಾಗಿದ್ದಾರೆ. ಒಟ್ಟಿನಲ್ಲಿ ಅವರು ಚಿತ್ರರಂಗದಲ್ಲಿ ಹೆಚ್ಚೆಚ್ಚು,ತೊಡಗಿಸಿಕೊಳ್ಳಲಿ ಎಂದು ಆರೈಸೋಣ.

Chitrodyama Updates

Chitrodyama Updates

Leave a Reply