ಬಾಲಿವುಡ್ ಚಿತ್ರರಂಗದ ಕಿಲಾಡಿ ನಟ ಅಕ್ಷಯ್ ಕುಮಾರ್

( ಮುಂದುವರೆಯಿತು )

೨೦೦೧ ರಲ್ಲಿ ತೆರೆ ಕಂಡ ಬಾಬಿ ಡಿಯೋಲ್ ಮತ್ತು ಕರೀನಾ ಕಪೂರ್ ಜೊತೆ ಅಜನಬಿ ಎಂಬ ಚಿತ್ರದಲ್ಲಿ ಪ್ರಥಮ ಬಾರಿಗೆ ಖಳನ ಪಾತ್ರವನ್ನು ನಿರ್ವಹಿಸಿದರು. ಈ ಚಿತ್ರವು ಕೂಡ ಯಶಸ್ಸನ್ನು ಗಳಿಸಿತಲ್ಲದೆ ಇವರಿಗೆ ಪ್ರಶಂಸೆಯನ್ನು ತಂದು ಕೊಟ್ಟಿತು. ಮತ್ತು ಈ ಚಿತ್ರದಲ್ಲಿನ ಅತ್ಯುತ್ತಮ ಖಳನಾಯಕನ ಪಾತ್ರ ನಿರ್ವಹಣೆಗೆ ಪ್ರಪ್ರಥಮ ಬಾರಿಗೆ ಫಿಲಂ ಫೇರ್ ಪ್ರಶಸ್ತಿಯನ್ನು ಪಡೆದರು. ೨೦೦೨ ರಲ್ಲಿ ತೆರೆ ಕಂಡ ಆವಾರಾ ಪಾಗಲ್ ದಿವಾನಾ, ೨೦೦೪ ಮುಝಸೆ ಶಾದಿ ಕರೋಗೇ, ಮತ್ತು ೨೦೦೫ ರಲ್ಲಿ ತೆರೆ ಕಂಡ ಗರಮ್ ಮಸಾಲಾ ಚಿತ್ರ ಸೇರಿ ಅನೇಕ ಹಾಸ್ಯ ಚಿತ್ರಗಳಲ್ಲಿ ನಟಿಸಿದರು. ಮತ್ತು ಇವರು   ನಟಿ‌ಸಿದ ಈ ಚಿತ್ರಗಳು ಕೂಡ ಗಲ್ಲಾ ಪೆಟ್ಟಿಗೆಯಲ್ಲಿ ಸದ್ದು ಮಾಡಿದವು. ಇವರು ಯಾಕ್ಷನ್, ಹಾಸ್ಯ ಮತ್ತು ರೋಮ್ಯಾಂಟಿಕ್ ಪಾತ್ರಗಳನ್ನು ಹೊರತು ಪಡಿಸಿ ೨೦೦೧ ರಲ್ಲಿ ಏಕ್ ರಿಶ್ತಾ, ೨೦೦೨ ಆಂಖೇನ್ ಮತ್ತು ೨೦೦೫ ರಲ್ಲಿ ತೆರೆ ಕಂಡ ಬೇವಫಾ ಮತ್ತು ವಕ್ತ್ –  ದಿ ರೇಸ್ ನಂತಹ ಚಿತ್ರಗಳಲ್ಲಿ ಮನಮುಟ್ಟುವಂತ ಪಾತ್ರಗಳನ್ನು ನಿರ್ವಹಿಸಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದರು. ೨೦೦೬ ರಲ್ಲಿ ತೆರೆ ಕಂಡ ಹೇರಾ ಫೇರಿ ಚಿತ್ರದ ಸರಣಿಯ ಮುಂದುವರೆದ  ಫಿರ್ ಹೇರಾಫೇರಿ ಎಂಬ ಚಿತ್ರದಲ್ಲಿ ನಟಿಸಿದರು. ಹಿಂದಿನಂತೆ ಈ ಚಿತ್ರವು ಕೂಡ ಗಳಿಕೆಯಲ್ಲಿ ಲಾಭವನ್ನು ಕಂಡಿತ್ತು.

ಇದೇ ವರ್ಷದ ಕೊನೆಯಲ್ಲಿ ಸಲ್ಮಾನ್ ಖಾನ್ ಜೊತೆ ನಟಿಸಿದ ಜಾನ್ ಎ ಮನ್ ಎಂಬ ರೋಮ್ಯಾಂಟಿಕ್ ಚಿತ್ರವು ಬಿಡುಗಡೆ ಪೂರ್ವ ಬಹು ನಿರೀಕ್ಷೆಯನ್ನು ಹುಟ್ಟು ಹಾಕಿತ್ತು. ಆದರೆ ಈ ಚಿತ್ರವು ಬಿಡುಗಡೆ ನಂತರ ವಿಮರ್ಶಕರಿಂದ ಮೆಚ್ಚುಗೆಯನ್ನು ಪಡೆಯಿತಾದರೂ ಗಳಿಕೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸನ್ನು ಪಡೆಯಲಿಲ್ಲ. ಆದರೆ ಈ ಚಿತ್ರವು ಹೆಚ್ಚು ಪ್ರದರ್ಶನವನ್ನು ಕಾಣದಿದ್ದರೂ ಈ ಚಿತ್ರದಲ್ಲಿ ಇವರ ಸಂಕೋಚ ಸ್ವಭಾವದ ದಡ್ಡ ವ್ಯಕ್ತಿಯ ಪಾತ್ರವು ಮೆಚ್ಚುಗೆಗೆ ಪಾತ್ರವಾಯಿತು. ನಂತರ ನಟ ಗೋವಿಂದ ಜೊತೆ ನಟಿಸಿದ ಭಾಗಮ್ ಭಾಗ್ ಎಂಬ ಹಾಸ್ಯ ಪ್ರಧಾನ ಚಿತ್ರದ ಗೆಲುವಿನೊಂದಿಗೆ ವರ್ಷವನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಿದರು.
    ೨೦೦೭ ನೇ ಇಸ್ವಿಯು ಇವರ ಬಣ್ಣದ ಬದುಕಿನಲ್ಲಿ ಅತೀ ಯಶಸ್ವಿ ವರ್ಷವಾಗಿತ್ತಲ್ಲದೆ ಯಾವುದೇ ಫ್ಲಾಪ್ ಚಿತ್ರಗಳಿಲ್ಲದೆ ನಟಿಸಿದ ನಾಲ್ಕು ಚಿತ್ರಗಳು ಕಂಡ ಯಶಸ್ಸು ಅದ್ಭುತವಾಗಿದ್ದವು. ಮತ್ತು ಬಾಲಿವುಡ್ ಚಿತ್ರರಂಗದಲ್ಲಿ ಇದು ಒಂದು ದಾಖಲೆ ಕೂಡ ಆಗಿದೆ. ಈ ಚಿತ್ರಗಳ ಕುರಿತು ವಿಮರ್ಶೆಯನ್ನು ನನ್ನದೇ ಆದ ಶೈಲಿಯಲ್ಲಿ ಕೆಳಗಡೆ ವಿಶ್ಲೇಷಣೆ ಮಾಡಿದ್ದೇನೆ. ಆ ವರ್ಷದ ಆರಂಭದಲ್ಲಿ ನಟಿ ಕತ್ರಿನಾ ಕೈಫ್ ಜೊತೆ ನಟಿಸಿದ ನಮಸ್ತೆ ಲಂಡನ್ ಎಂಬ ಚಿತ್ರವು ತೆರೆ ಕಂಡಿತ್ತಲ್ಲದೆ  ಕೆಲವು ವಿಶೇಷಗಳನ್ನು ಒಳಗೊಂಡಿದೆ.
೧) ಈ ಚಿತ್ರದ ಚಿತ್ರೀಕರಣವನ್ನು ಪಂಜಾಬ್ ಪ್ರಾಂತ್ಯದ ಮತ್ತು ಬ್ರಿಟನ್ ದೇಶದ ಸುತ್ತ ಮುತ್ತಲು ಚಿತ್ರೀಕರಣವನ್ನು ಮಾಡಲಾಗಿದ್ದು  ಜೋನಾಥನ್  ಬ್ಲೂಮ್ ಮತ್ತು Dariusz wolski ಎಂಬ ಇಬ್ಬರು ಛಾಯಾಗ್ರಾಹಕರು ತಮ್ಮ ಕ್ಯಾಮರಾ ಮೂಲಕ ಚಿತ್ರದ ಲೊಕೇಶನ್ ಗಳನ್ನು ಸುಂದರವಾಗಿ ಸೆರೆ ಹಿಡಿದಿದ್ದಾರೆ.

೨) ಮುಖ್ಯವಾಗಿ ಹಾಸ್ಯ ಮುತ್ತು ಸಾಹಸ ಪ್ರಧಾನ ಚಿತ್ರಗಳಲ್ಲಿ ಹೆಚ್ಚು ಮಿಂಚುತ್ತಿದ್ದ ನಟ ಅಕ್ಷಯ್ ಕುಮಾರ್ ಯಾವುದೇ ಸಾಹಸ, ಹಾಸ್ಯವಾಗಲಿ ಇಲ್ಲದ ಈ ಚಿತ್ರದಲ್ಲಿ ಕೂಡ ಪಾತ್ರವನ್ನು ಉತ್ತಮವಾಗಿ ನಿರ್ವಹಿಸಿ ಯಶಸ್ವಿಯಾದರು. ಮತ್ತು ಈ ಚಿತ್ರದಲ್ಲಿ ನಟ ಅಕ್ಷಯ್ ಕುಮಾರ್ ಮತ್ತು ನಟಿ ಕತ್ರಿನಾ ಕೈಫ್ ಜೋಡಿ  ಚಿತ್ರಪ್ರೇಮಿಗಳನ್ನು ಮೋಡಿ ಮಾಡಿತ್ತು.
೩) ಈ ಚಿತ್ರವು ವಿಮರ್ಶಾತ್ಮಕವಾಗಿ ಮತ್ತು ವಾಣಿಜ್ಯಕವಾಗಿಯು ಯಶಸ್ಸನ್ನು ಗಳಿಸಿತ್ತಲ್ಲದೆ ಈ ಚಿತ್ರದ ನಟನೆಗಾಗಿ ಇವರಿಗೆ ಫಿಲಂಫೇರ್ ನಲ್ಲಿ ಅತ್ಯುತ್ತಮ ನಟ ವಿಭಾಗದಲ್ಲಿ ಹೆಸರನ್ನು ಗಳಿಸಿತ್ತು. ಖ್ಯಾತ ಚಿತ್ರ ವಿಮರ್ಶಕರಾದ ತರುಣ್ ಆದರ್ಶ್ ರವರು ಈ ಚಿತ್ರದಲ್ಲಿನ ಅತ್ಯದ್ಭುತ ಭಾವಪೂರ್ಣ ನಟನೆಯಿಂದ ನಟ ಅಕ್ಷಯ್ ಕುಮಾರ್ ಅಸಂಖ್ಯಾತ ಚಿತ್ರ ಪ್ರೇಮಿಗಳ ಹೃದಯವನ್ನು ಗೆಲ್ಲುತ್ತಾರೆ ಎಂದು ತಮ್ಮ ಚಿತ್ರ ವಿಮರ್ಶೆಯಲ್ಲಿ ಬರೆದಿದ್ದರು. ಇವರು ಬರೆದ ಹಾಗೆ ನಿಜವೂ ಆಗಿತ್ತು.

( ಮುಂದುವರಿಸಲಾಗುವುದು )

ಸಂದೀಪ ಜೋಶಿ

ಸಂದೀಪ ಜೋಶಿ

ಸಂದೀಪ್ ಜೋಶಿ - ಇವರು ಕೊಪ್ಪಳ ಜಿಲ್ಲೆಯ ಗಂಗಾವತಿ ನಿವಾಸಿಯಾಗಿದ್ದು ಪ್ರಸ್ತುತ ಸ್ವ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಬಿ.ಎ.ಮತ್ತು ಡಿಪ್ಲೊಮಾ ಇನ್ ಹಾರ್ಟಿಕಲ್ಚರ್, ಸಿ.ಟಿ.ಟಿ.ಸಿ ತರಬೇತಿ, ರೇಕಿ ಚಿಕಿತ್ಸೆ ತರಬೇತಿಯನ್ನು ಪಡೆದಿದ್ದು 13 ವರ್ಷಗಳ ಕಾಲ ರಾಯಚೂರು, ಧಾರವಾಡ ಕೃಷಿ ವಿಶ್ವವಿದ್ಯಾಲಯ ಮತ್ತು ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾನಿಲಯದಲ್ಲಿ ಕ್ಷೇತ್ರ ಸಹಾಯಕ, ಗಣಕಯಂತ್ರ ನಿರ್ವಾಹಕ ಕೆಲಸವನ್ನು ನಿರ್ವಹಿಸಿದ್ದಾರೆ. ಇವರು ಲೇಖಕರಷ್ಟೇ ಅಲ್ಲ.‌ನಟರು ಕೂಡ. ವೃತ್ತಿಯ ಜೊತೆಗೆ ರೇಕಿ ಚಿಕಿತ್ಸೆ ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಸಂದೀಪ್‌ ಜೋಶಿ ಚಿತ್ರೋದ್ಯಮ.ಕಾಂ ಬರಹಗಾರರ ತಂಡದ ಬಹು ಮುಖ್ಯ ಸದಸ್ಯ. ಸಂದೀಪ್ ಜೋಶಿಯವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply